ಚಳಿಗದಿರ

Author : ಬಾಗೂರು ಮಾರ್ಕಾಂಡೇಯ

Pages 108

₹ 60.00




Year of Publication: 2012
Published by: ತೇಜು ಪಬ್ಲಿಕೇಷನ್
Address: ನಂ 233, 7ನೇ ಎ ಅಡ್ಡರಸ್ತೆ, ಶಾಸ್ತ್ರೀನಗರ, ಬೆಂಗಳೂರು-28
Phone: 9900195626

Synopsys

ಕವಿ ಬಾಗೂರು ಮಾರ್ಕಾಂಡೇಯ ಅವರು ಬರೆದ ಕವನ ಸಂಕಲನ-ಚಳಿಗದಿರ. ನನ್ನ ನಾನು ಮರೆತು ಹೊರತಾಗಿ ಭಾವವನು ಒರೆಗೆ ಹಚ್ಚುವ ಸಮಯವಷ್ಟನ್ನು ಕವಿತೆಗಟ್ಟುತ್ತ ಕಾಲ ಕಳೆದವನು. ಇಲ್ಲಿಯ ಕವಿತೆಗಳೆಲ್ಲವು ಆಯಾ ಸಮಯದ ನನ್ನ ಮನಸ್ಥಿತಿ, ಪರಿಸ್ಥಿತಿ ಹಾಗೂ ಸನ್ನಿವೇಶಗಳನ್ನು ಒಳಗೊಂಡಂತೆ ಬರೆದು ನನ್ನ ಅಭಿಪ್ರಾಯವನ್ನು ದಾಖಲಿಸುವ ಪ್ರಯತ್ನವನ್ನು ಮಾಡುತ್ತಾ ಬಂದಿರುವುದಾಗಿ ಕವಿಯು ಹೇಳಿದ್ದೇ ಒಟ್ಟು ರೂಪವಾಗಿ ಇಲ್ಲಿಯ ಕವನಗಳಿವೆ.

ಕವಿತಯನ್ನು ಓದಿದಾಗ ಪ್ರತಿ ಕವಿತೆಯೂ ತನ್ನ ಆಂತರ್ಯದ ಭಾವ ಲಹರಿಯಲಿ ಓದುಗನಿಗೆ ರಸಾನುಭವವನ್ನು ಉಣಬಡಿಸುತ್ತದೆ. ‘ಬಾಳೊಲವ ಹೊಸ್ತಿಲಲ್ಲಿ ಎಂದೆಂದು ಹೊಸತೆ ಭಾವಗಳ ಹಾಡು ಆ ದೇವನ ಕರುಣೆಯಲ್ಲಿ...’ ಎನ್ನುತ್ತಾ ಬರೆದರೆ. ‘.. ಓಹೋ ಆಹಾ ನಾಡಿದು ನಮ್ಮದು ನಮ್ಮದು ಒಗ್ಗಟ್ಟಿನ ಹಾಡು ಹೇಳು ಅಭಿಮಾನವು ಹಿರಿದು...’ ಎಂದು ಕವಿಯು ಖುಷಿ ಅನುಭವಿಸುವ ಇಂತಹ ಕವಿತೆಗಳು ಸಂಕಲನದಲ್ಲಿವೆ. 

About the Author

ಬಾಗೂರು ಮಾರ್ಕಾಂಡೇಯ
(28 June 1966)

ಕವಿ, ಕಲಾವಿದ, ಬಾಗೂರು ಮಾರ್ಕಾಂಡೇಯ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (ಜನನ: 28-06-1966) ಬಾಗೂರು ಗ್ರಾಮದವರು. ಪರಿಸರ, ಮಕ್ಕಳ ಸಾಹಿತ್ಯ, ಚಿತ್ರಕಲೆ ಸೇರಿದಂತೆ ಸುಮಾರು 54ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ, ಬೇರುಗಳು ಚಿತ್ರ ಸರಣಿ ಮೂಲಕ ಪರಿಸರ ಜಾಗೃತಿಗೆ ಶ್ರಮಿಸಿದವರು, ‘ರೇಖೆಗಳಲ್ಲಿ ಭಾವಗೀತೆಗಳು’ ಮೂಲಕ ನೂತನ ಪ್ರಯೋಗಶೀಲತೆ ರೂಢಿಸಿಕೊಂಡವರು. ಕನ್ನಡದ ಸುಲಭ ಕಲಿಕೆಗೆ “ಕನ್ನಡ ಸೌರಭ” ತಂತ್ರಾಂಶ ತಯಾರಿಸಿದ್ದಾರೆ. “ಬಾಗೂರು ಕಲಾ ವೇದಿಕೆ ಟ್ರಸ್ಟ್” ರಚಿಸಿಕೊಂಡು ‘ಕಲಾ ಭೂಷಣ’ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ ಕವನ ಸಂಕಲನಗಳು: ರೇಖಾಂತರಂಗದ ಭಾವಗುಸುಮ, ಭಾವಶಿಲ್ಪ, ಭಾವೋನ್ಮಾದಿನಿ, ಭಾವಸಮ್ಮಿಲನ, ಕೊಳಲದನಿ, ಕಾವ್ಯಕನ್ನಿಕೆ,  ಚೈತ್ರ ಚೆಲುವು, ಸುವರ್ಣಪುತ್ಥಳಿ,  ಸ್ವರಸಿರಿಯ ಸ್ನೇಹಲತೆ, ರಾಧಾ ಮಾಧವರ ಒಲುಮೆ ...

READ MORE

Related Books