ಜೀವದೊಡತಿಯ ಗೈರು ಹಾಜರಿಯಲ್ಲಿ

Author : ವೀಣಾ ಕಲ್ಮಠ

Pages 66

₹ 75.00




Year of Publication: 2022
Published by: ಬೆನಕ ಬುಕ್ಸ್‌ ಬ್ಯಾಂಕ್‌ ಪ್ರಕಾಶನ
Address: ಬೆನಕ ಬುಕ್ಸ್ ಬ್ಯಾಂಕ್, ಯಳಗಲ್ಲು, ಕೋಡೂರು ಅಂಚೆ, 577419, ಹೊಸನಗರ ತಾಲೂಕು, ಶಿವಮೊಗ್ಗ
Phone: 7338437666

Synopsys

ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ಅಪರೂಪದ ಕವನ ಸಂಕಲನ ವೀಣಾ ಕಲ್ಮಠ ಅವರ ’ಜೀವದೊಡತಿಯ ಗೈರುಹಾಜರಿಯಲ್ಲಿ ಕನ್ನಡ ಕವನಗಳ ಜಗತ್ತಿಗೆ ಭರವಸೆಯ ಬೆಳಕಾಗಿ ಕಾಣುವಂತಹ ಕವಿತೆಗಳನ್ನು ಈ ಸಂಕಲನದ ಮೂಲಕ ಹೊತ್ತು ತಂದಿರುವ ವೀಣಾ ಅವರ ಚೊಚ್ಚಲ ಕವನ ಸಂಕಲನ ಇದು. ಇಲ್ಲಿರುವ ಪ್ರತೀ ಕವಿತೆಗಳೂ ಸರಳವಾಗಿವೆ, ಆಪ್ತವಾಗಿವೆ. ನಮ್ಮದೇ ಬದುಕಿನ ಭಾವಗಳನ್ನು ಕವಯತ್ರಿ ಇಲ್ಲಿ ಕವನಗಳನ್ನಾಗಿಸಿದ್ದಾರೇನೋ ಎನ್ನುವಂತಹ ಕವಿತೆಗಳೇ ತುಂಬಿರುವ ಈ ಸಂಕಲನವನ್ನು ಉದಯೋನ್ಮುಖ ಕವಿಗಳು ಅಗತ್ಯವಾಗಿ ಓದಬೇಕಿದೆ. ಎಂದು ಪತ್ರಕರ್ತ ಕೆ.ಗಣೇಶಕೋಡೂರು ಮುನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ವೀಣಾ ಕಲ್ಮಠ

ಕವಯತ್ರಿ ವೀಣಾ ಕಲ್ಮಠ ಬಾಗಲಕೋಟೆಯ ಗುಳೇದಗುಡ್ಡದವರು. ತಂದೆ ಮಹೇಶ್ವರಯ್ಯ, ತಾಯಿ ಶಾರದಮ್ಮ. ಪ್ರಸ್ತುತ ಬಿ.ವ್ಹಿ.ವ್ಹಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಕನ್ನಡ ಸ್ನಾತಕೋತ್ತರ ವಿಭಾಗದಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ’ಅಲ್ಲಮ ಮತ್ತು ಅಕ್ಕನ ವಚನಗಳಲ್ಲಿ ಮಾಯೆ; ನಿರ್ವಚನದ ನೆಲೆಗಳು’ ಸಂಶೋಧನಾ ಪ್ರಬಂಧಕ್ಕಾಗಿ ಪಿ.ಹೆಚ್‌.ಡಿ ಪದವಿಯನ್ನು ಪಡೆದಿರುತ್ತಾರೆ. ಅಂತಾರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಭಾಗಿಯಾಗಿ ಸುಮಾರು 25ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಮಂಡಿಸಿದ್ದಾರೆ. ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸಗಳನ್ನು ನೀಡಿದ್ದಾರೆ. ಕೃತಿಗಳು: ಮಾರ್ಗದರ್ಶಿ, ಜೀವದೊಡತಿಯ ಗೈರು ಹಾಜರಿಯಲ್ಲಿ, ರೂಪದೊಳಗಿನ ನಿರೂಪ ...

READ MORE

Related Books