ಭರವಸೆಯ ಬೇರು

Author : ಶಿಲ್ಪ ಕೆಸಿ

Pages 100

₹ 100.00




Year of Publication: 2022
Published by: ತನುಶ್ರೀ ಪ್ರಕಾಶನ ಸಂಸ್ಥೆ ಸೂಲೇನಹಳ್ಳಿ
Address: ಮೊಳಕಾಲ್ಕೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ- 577535
Phone: 9741566313,9902641888

Synopsys

'ಭರವಸೆಯ ಬೇರು' ಶಿಲ್ಪ ಕೆ.ಸಿ ಅವರ ಕೃತಿಯಾಗಿದೆ.ಭರವಸೆಯ ಬೇರು ಕವನಸಂಕಲನದಲ್ಲಿ ದೇವತಾ ಪ್ರಾರ್ಥನೆ ಇದೆ, ಗುರುಕಾರಣ್ಯಕ್ಕೆ ನಮನವಿದೆ, ದೇಶಪ್ರೇಮವಿದೆ, ಕನ್ನಡದ ಪ್ರೀತಿಯ ಹೊನಲಿದೆ, ವೈರಾಗ್ಯವಿದೆ, ಜೀವನೋತ್ಸಾಹವಿದೆ, ಜೀವಪ್ರೀತಿಯಿದೆ, ಹೆಣ್ಣಿನ ಅಭಿಮಾನವಿದೆ, ಪ್ರೀತಿ ಇದೆ, ನಿಸರ್ಗಪ್ರೇಮವಿದೆ, ಕೆಟ್ಟ ವ್ಯವಸ್ಥೆಯ ವಿರುದ್ಧ ಸೆಟೆದು ನಿಲ್ಲುವ ಛಲವಿದೆ, ನಮ್ಮನ್ನೆಲ್ಲ ಬಿಡದೆ ಕಾಡಿದ ಕರೋನಾದ ಬಗ್ಗೆಯೂ ಚಿಂತನೆ ಇದೆ. ಹೀಗೆ ಶ್ರೀಮತಿ ಶಿಲ್ಪಾರವರ ಕವಯಿತ್ರಿ ಮನಸ್ಸು ಹತ್ತಾರು ಪ್ರಪಂಚಗಳನ್ನು ಒಳಹೊಕ್ಕು, ಅಲ್ಲಿಯ ವಿಶೇಷಗಳನ್ನು ಹೊರಗೆಳೆದು ತಂದಿದೆ, ಈ ಸಂಕಲನವನ್ನು ಸುಂದರವಾಗಿಸಿದೆ. ಬೇಂದ್ರೆಯವರ ಬಗ್ಗೆ ಶಿಲ್ಪಾರಿಗೆ ಪ್ರೀತಿ, ಗೌರವ. ತಾನು ಬರೆದ ಕವನಗಳನ್ನು ಅವರಿಗೆ ಅರ್ಪಿಸುವ ಆಸೆ ಹೀಗೆ ವಿವರಿಸುತ್ತ ಹೊರಟರೆ ಅವರ ಪ್ರತಿಯೊಂದು ಕವನಗಳ ಬಗ್ಗೆ ಬರೆಯುವ ಮನಸಾಗುತ್ತದೆ. ನನ್ನ ಕೆಲಸ ಗ್ರಂಥವನ್ನು ಪರಿಚಯಿಸಿ ಅದರ ಸೊಗಸನ್ನು ಮಿತಿಯಲ್ಲಿ ತಿಳಿಸುವುದು, ದೀರ್ಘ ವಿಮರ್ಶೆಯಲ್ಲ. ಈ ಕವನ ಸಂಕಲನದ ಹೆಸರಿನಂತೆ ಶ್ರೀಮತಿ ಶಿಲ್ಪಾ ಓದುಗರ ಮನಸ್ಸಿನಲ್ಲಿ ಭರವಸೆಯನ್ನು ಬಿತ್ತಿದ್ದಾರೆ. ಅದನ್ನು ಹೆಚ್ಚು ಬೆಳೆಸುವ ಜವಾಬ್ದಾರಿ ಅವರದು. ಅವರದು ಶ್ರದ್ಧೆಯ ಪರಿಶ್ರಮ. ಆದ್ದರಿಂದ ಮುಂಬರುವ ಕವನಗಳು ಹೆಚ್ಚೆಚ್ಚು ಕಸುವಾಗಿ, ಆಳವಾಗಿ, ಚಿಂತನೆಯನ್ನು ಚುಚ್ಚಿ ಎಬ್ಬಿಸುವ ರೀತಿಯಲ್ಲಿ ಬರುವುದರಲ್ಲಿ ಸಂದೇಹವಿಲ್ಲ ಎಂದು ಗುರುರಾಜ ಕರಜಗಿ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಶಿಲ್ಪ ಕೆಸಿ

ಶಿಲ್ಪ ಕೆಸಿ. ಮೂಲತಃ ಶಿವಮೊಗ್ಗ ಜಿಲ್ಲೆಯ ಕುಂಸಿಯವರು. ತಂದೆ ಕೆ.ಎಂ. ಚಂದ್ರಯ್ಯ. ತಾಯಿ ಹಾಲಮ್ಮ. ವೃತ್ತಿಯಲ್ಲಿ ಹಿಂದಿ ಶಿಕ್ಷಕಿಯಾಗಿರುವ ಶಿಲ್ಪ ಅನೇಕ ಸ್ವರಚಿತ ಹಾಡುಗಳನ್ನು ರಚಿಸಿ ಸ್ವ ರಾಗ ಸಂಯೋಜನೆ ಮಾಡಿ ಹಾಡುವ ಹವ್ಯಾಸವನ್ನು ಹೊಂದಿದ್ದಾರೆ. ಕವನ, ಹನಿಗವನ, ಚುಟುಕು,ಜಡೆ ಕವನ,ರುಬಾಯಿ ಟಂಕಾ ಹಾಯ್ಕು, ಗಜಲ್ಗಳ, ಕವಿತೆ ರಚನೆಗಳನ್ನು ಮಾಡಿದ್ದಾರೆ. ಪ್ರಶಸ್ತಿಗಳು: ಇಂದಿರಾ ರಾಜ್ಯ ಪ್ರಶಸ್ತಿ, ಡಾ ಎಸ್ ರಾಧಾಕೃಷ್ಣನ್ ರಾಷ್ಟ್ರೀಯ ಶಿಕ್ಷಕ ರತ್ನ ಪ್ರಶಸ್ತಿ, ವಿಶ್ವ ಕನ್ನಡ ಸಾಹಿತ್ಯ ರತ್ನ ಪ್ರಶಸ್ತಿ, ಕವಿ ವಿಭೂಷಣ ಪ್ರಶಸ್ತಿ ಕೃತಿಗಳು: ಭರವಸೆಯ ಬೇರು ...

READ MORE

Related Books