ಸಂಬಾರಬಟ್ಟಲ ಕೊಡಿಸು

Author : ರೇಣುಕಾ ರಮಾನಂದ

Pages 87

₹ 110.00




Year of Publication: 2022
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ, ವ್ಹಯಾ ಎಮ್ಮಿಗನೂರು, ಬಳ್ಳಾರಿ - 583113
Phone: 9480353507

Synopsys

"ಸಂಬಾರಬಟ್ಟಲ ಕೊಡಿಸು" ಇದು ೨೦೨೧ ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿ ಪಡೆದ ಕವಿತಾ ಸಂಕಲನವಾಗಿದ್ದು ಇಲ್ಲಿ ಒಟ್ಟೂ ೩೩ ಕವಿತೆಗಳಿವೆ. ಡಾ| ಬಂಜಗೆರೆ ಜಯಪ್ರಕಾಶರು ಮುನ್ನುಡಿ ಬರೆದಿದ್ದು ವಿಭಾ ಪ್ರಶಸ್ತಿಯ ತೀರ್ಪುಗಾರರಲ್ಲಿ ಒಬ್ಬರಾದ ಕೆ ಫಣಿರಾಜರ ಬೆನ್ನುಡಿಯಿದೆ. ಸಂಚಾಲಕರಾದ ಸುನಂದಾ ಪ್ರಕಾಶ ಕಡಮೆ ಅವರ ಮುಂಬರಹವಿರುವ ಈ ಪುಸ್ತಕವನ್ನು ರೇಣುಕಾರು ಬ್ರಿಟಿಷರ ವಿರುದ್ಧ ಘೋಷಣೆ ಕೂಗಿ ಬೆಳಗಾವಿ ಹಿಂಡಲಗಾ ಜೈಲು ವಾಸಿಯಾಗಿ ಬಂದ ತಮ್ಮ ಅಜ್ಜಿ ಸ್ವಾತಂತ್ರ್ಯ ಹೋರಾಟಗಾರ್ತಿ ಕೆಚ್ಚೆದೆಯ ವೆಂಕಮ್ಮಾ ನಾಯಕರಿಗೆ ಅರ್ಪಿಸಿದ್ದಾರೆ. ಈ ಬಾರಿ ಅಂದರೆ ೨೦೨೨ ನೇ ಸಾಲಿನ ಬಳ್ಳಾರಿಯ ಅರಿವು ಟ್ರಸ್ಟಿನ ಮೊದಲ ಸಂಗಂ ಸಾಹಿತ್ಯ ಪುರಸ್ಕಾರ ಜೊತೆ ೨೫,೦೦೦ ಬಹುಮಾನಕ್ಕೆ 'ಸಂಬಾರಬಟ್ಟಲ ಕೊಡಿಸು' ಭಾಜನವಾಗಿದೆ..

 

About the Author

ರೇಣುಕಾ ರಮಾನಂದ

ರೇಣುಕಾ ರಮಾನಂದ ಅವರು ತಲೆಮಾರಿನ ಭರವಸೆಯ ಕವಯತ್ರಿ. ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ವಂದಿಗೆ ಹುಟ್ಟೂರು. ತಂದೆ ಹೊನ್ನಪ್ಪ ನಾಯಕ ಮತ್ತು ತಾಯಿ ಮಾಣು. ತವರೂರಿನ ಸರ್ಕಾರಿ ಶಾಲೆಯಲ್ಲಿ ಆರಂಭದ ಅಕ್ಷರಾಭ್ಯಾಸ, ಅಂಕೋಲಾದ ಟೀಚರ್ ಟ್ರೈನಿಂಗ್ ಕಾಲೇಜಿನಲ್ಲಿ ಟಿಸಿಎಚ್ ಪೂರ್ಣಗೊಳಿಸಿರುವ ರೇಣುಕಾ ಅವರು ಕನ್ನಡ ಎಂ.ಎ.ಪದವಿಧರೆ. ರೇಣುಕಾ ಅವರು ವೃತ್ತಿಯಲ್ಲಿ ಪ್ರಾಥಮಿಕ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಜೀವನ ಸಂಗಾತಿ ರಮಾನಂದ ಪಿ.ನಾಯಕ್ ರವರು ಕೂಡ ವೃತ್ತಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಮಾನಂದ ದಂಪತಿಯ ಬಾಳು ಬೆಳಗಿಸಲು ಗುಲಾಬಿಗಳಾದ ತ್ರಿಭುವನ ಮತ್ತು ಪ್ರಾರ್ಥನ ಬಂದಿದ್ದಾರೆ. ವೃತ್ತಿಯಲ್ಲಿ ಪ್ರಾಥಮಿಕ ಶಾಲಾಶಿಕ್ಷಕಿ, ಪ್ರವೃತ್ತಿಯಲ್ಲಿ ಕವಯತ್ರಿ- ಲೇಖಕಿ. ...

READ MORE

Related Books