ಡಾ. ಮಹಾಂತೇಶ ಪಾಟೀಲ ಬರೆದ ’ಒಡೆದ ಬಣ್ಣದ ಚಿತ್ರಗಳು’ 50 ಕವಿತೆಗಳ ಸಂಕಲನ. ಕೃತಿಯ ಶಕ್ತಿಶಾಲಿ ಕವಿತೆಯೊಂದು ಹೀಗೆ ಉಲಿಯುತ್ತದೆ:
’ನೆಲವನ್ನೆಲ್ಲ ಹರಡಿದ ಕರುಳಬಳ್ಳಿ ಊರ ತುಂಬಾ ಗಾರ ಗಂಡಂದಿರು ಕೇರಿಯಲೆಲ್ಲ ಕುಂತಿ ಮಕ್ಕಳು ಭೇದ ಮಾಡದ ಬಿಗತಿಯಿವಳು ಊರೆ ಅವಳೊಳಗೆ ಅವಳು ಮಾತ್ರ ಊರ ಹೊರಗೆ!!’
ಕಂಡ ಅನ್ಯಾಯವನ್ನೆಲ್ಲಾ ಪ್ರತಿಭಟಿಸುವ, ಜನರ ನೋವಿಗೆ ಮಿಡಿಯುವ ಕವಿ ಮತ್ತೊಂದು ಕವಿತೆಯಲ್ಲಿ ’ಓ....ಬೆವರಿನಲಿ ಬೆಳೆದ ಬೆಳೆ ಷೇರು ಪಾಲುದಾರರಿಗೆ ಕೊಟ್ಟು ಬೀದಿ ಪಾಲಾಗಿ.... ಮಾರುಕಟ್ಟೆಯ ಬಾಗಿಲಲಿ ಆಸಕಂಗಳಲಿ ಹುಡುಕಿ ಅಗೆಯುವನು ಅಪ್ಪ ಕೋಳಿಯಂತ ಕಾಳು!?” ಎಂದು ಮರಗುತ್ತಾನೆ. ಪ್ರತಿಭಟಿಸುವ, ಕಣ್ಣೀರಾಗುವ, ಬೆರಗುಗೊಳ್ಳುವ ಇಲ್ಲಿನ ಕವಿತೆಗಳು ದಟ್ಟ ವಿವರಗಳ ಮೂಲಕ ಗಮನ ಸೆಳೆಯುತ್ತವೆ.
ಕವಿ ಮಹಾಂತೇಶ ಪಾಟೀಲ ಅವರು 1986 ಜೂನ್ 01 ಕೊಡಗು ಜಿಲ್ಲೆಯ ಚಿಕ್ಕಅಳುವಾರದಲ್ಲಿ ಜನಿಸಿದರು. ಮಂಗಳೂರು ವಿ.ವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಕನ್ನಡ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದರು. ಪ್ರಸ್ತುತ ದಾವಣಗೆರೆ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಣೆ. ‘ಒಡೆದ ಬಣ್ಣದ ಚಿತ್ರಗಳು’ ಅವರ ಚೊಚ್ಚಲ ಕವನ ಸಂಕಲನ 2017ರಲ್ಲಿ ಪ್ರಕಟವಾಗಿದೆ. ...
READ MORE