ಭಾರತದಲ್ಲಿ ವೀಡಿಯೊ ಆರ್ಟ್‌ಗೆ ಹಾದಿ ತೆರೆದ ನಳಿನಿ ಮಲಾನಿ

Date: 28-12-2021

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಮುಂಬಯಿ ಮೂಲದ ಪೇಂಟಿಂಗ್, ಸ್ಕಲ್ಪ್ಚರ್, ಇನ್ಸ್ಟಾಲೇಷನ್, ಹಾಗೂ ವೀಡಿಯೊ ಆರ್ಟ್ ಕಲಾವಿದೆ ನಳಿನಿ ಮಲಾನಿ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದ: ನಳಿನಿ ಮಲಾನಿ (Nalini Malani)
ಜನನ: 1946
ಶಿಕ್ಷಣ: ಜೆ.ಜೆ. ಸ್ಕೂಲ್ ಆಫ್ ಆರ್ಟ್, ಮುಂಬಯಿ
ವಾಸ: ಮುಂಬಯಿ
ಕವಲು: ಕಂಟೆಂಪೊರರಿ ಆರ್ಟ್
ವ್ಯವಸಾಯ: ಪೇಂಟಿಂಗ್, ಇನ್ಸ್ಟಾಲೇಷನ್ಸ್, ವೀಡಿಯೊ ಆರ್ಟ್

ನಳಿನಿ ಮಲಾನಿ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:
ನಳಿನಿ ಮಲಾನಿ ಅವರ ವೆಬ್‌ಸೈಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಸ್ತ್ರೀವಾದಿ, ಪುರುಷವಾದಿ ಮತ್ತು ಅಮೂರ್ತ ಚಿಂತನೆಗಳು ಪ್ರತಿಯೊಬ್ಬರಲ್ಲೂ ಇರುತ್ತವೆ ಅವೆಲ್ಲವನ್ನೂ ಗೌರವಿಸುವುದು ಮತ್ತು ಅವೆಲ್ಲವೂ ಸೃಜನಶೀಲವಾಗಿ, ಮಾನವೀಯವಾಗಿ ಅಭಿವ್ಯಕ್ತಗೊಳ್ಳುವಂತೆ ಮಾಡುವುದು ನಮ್ಮ ಜವಾಬ್ದಾರಿ. ಈಗ ಕೋವಿಡ್ ಕಾಲದಲ್ಲಿ ಪುರುಷವಾದ ಎಲ್ಲವನ್ನೂ ಕಬಳಿಸಿ ಬೆಳೆಯುತ್ತಿದೆ. ಅಮೆರಿಕ, ಇಂಗ್ಲಂಡ್, ಟರ್ಕಿ, ಬ್ರೆಜಿಲ್ ಎಲ್ಲೆಡೆ ಅದು ಕಾಣಿಸುತ್ತಿದೆ. ಇದನ್ನು ಪಿತೃಪ್ರಧಾನ ವ್ಯವಸ್ಥೆ ಎಂದು ಕರೆಯಲಾಗದು. ಇದು ಪುರುಷವಾದದ ಕರಾಳ ರೂಪ. ಈ ಜಗತ್ತಿಗೆ ಸ್ತ್ರೀವಾದವೇ ಭವಿಷ್ಯ. ಬೇರೆ ದಾರಿ ಇಲ್ಲ. ಆ ಚಿಂತನೆ ಇಲ್ಲದೆ ಕೆಲಸ ಮಾಡಿದರೆ ವಿನಾಶವೇ ಗತಿ ಎಂದು ಖಚಿತ ಮಾತುಗಳಲ್ಲಿ ಹೇಳುವ ನಳಿನಿ ಮಲಾನಿ ಅವರಿಗೆ ಈಗ 74. ಕೋವಿಡ್ ಕಾಲದಲ್ಲಿ ಪತಿಯ ಜೊತೆ ಆಮ್‌ಸ್ಟರ್‌ಡಾಮ್‌ನಲ್ಲಿದ್ದ ನಳಿನಿ ಅವರು, ಜುಲೈ 2020ರ ಹೊತ್ತಿಗೆ ಸ್ಟುಡಿಯೊ ಇಂಟರ್ನ್ಯಾಷನಲ್‌ನ ಜೂಲಿಯಟ್ ರಿಕ್ಸ್ ಅವರಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ ಮಾತುಗಳಿವು.

1946ರಲ್ಲಿ ಕರಾಚಿಯಲ್ಲಿ ಜನಿಸಿದ ನಳಿನಿ ಮಲಾನಿ, ಭಾರತ ವಿಭಜನೆಯ ಬಳಿಕ ನಿರಾಶ್ರಿತರಾಗಿ ಭಾರತಕ್ಕೆ ಬಂದು ಮೊದಲು ಕೋಲ್ಕತಾದಲ್ಲಿ ಮತ್ತು ಆ ಬಳಿಕ 1958ರ ಹೊತ್ತಿಗೆ ಮುಂಬಯಿಯಲ್ಲಿ ನೆಲೆಸಿದವರು. ವಿಭಜನೆಯ ನೆನಪುಗಳು ಅವರ ಕಲಾಕೃತಿಗಳ ಮೇಲೆ ಗಾಢವಾದ ಪ್ರಭಾವ ಬೀರಿವೆ. 1964-68ರ ಅವಧಿಯಲ್ಲಿ ಮುಂಬಯಿಯ ಜೆ ಜೆ ಕಲಾಶಾಲೆಯ ವಿದ್ಯಾರ್ಥಿ ಆಗಿದ್ದ ಅವರು, ಆ ಬಳಿಕ ಭೂಲಾಬಾಯಿ ಮೆಮೋರಿಯಲ್ ಇನ್ಸ್‌ಟಿಟ್ಯೂಟ್ ಜೊತೆ ಕಲಾ ಚಟುವಟಿಕೆಗಳಲ್ಲಿ ತೊಡಗಿಕೊಂಡು, ಆ ಕಾಲದಲ್ಲಿಯೇ ಫೋಟೊಗ್ರಾಂಗಳನ್ನು, 8mm, 16mm ನ ಕಿರುಚಿತ್ರ ಕಲಾಕೃತಿಗಳನ್ನು ತಯಾರಿಸಿದ್ದರು. ಭಾರತದಲ್ಲಿ ವೀಡಿಯೊ ಆರ್ಟ್ ಆರಂಭಿಸಿದವರು ಅವರು ಎಂದು ಪರಿಗಣಿತರಾಗಿದ್ದಾರೆ. 70-72ರ ಅವಧಿಯಲ್ಲಿ ಫ್ರೆಂಚ್ ಸರಕಾರದ ಸ್ಕಾಲರ್‌ಶಿಪ್ ಪಡೆದು ಫ್ರಾನ್ಸ್‌ನಲ್ಲಿ ನೆಲೆಸಿ ಕಲಾಭ್ಯಾಸ, ಸಾಮಾಜಿಕ ಚಿಂತನೆಗಳನ್ನು ರೂಢಿಸಿಕೊಂಡು ಹಿಂದಿರುಗಿದ ಅವರಿಗೆ ಭಾರತದಲ್ಲಿ ಮಹಿಳಾ ಕಲಾವಿದರ ಬಗ್ಗೆ ನಿರ್ಲಕ್ಷ್ಯ ಬಹಳ ಕುಟುಕುತ್ತಿತ್ತು.

1979ರಲ್ಲಿ ನ್ಯೂಯಾರ್ಕಿನಲ್ಲಿ ಮೊದಲ ಮಹಿಳಾ ಸಹಕಾರಿ ಮಾದರಿಯ ಗ್ಯಾಲರಿಯಿಂದ ಪ್ರೇರಿತರಾಗಿ ಭಾರತಕ್ಕೆ ಬಂದು, ಭಾರತದಲ್ಲೂ ಕೇವಲ ಮಹಿಳಾ ಕಲಾವಿದರ ಪ್ರದರ್ಶನವೊಂದನ್ನು ಏರ್ಪಾಡು ಮಾಡಲು ಪ್ರಯತ್ನಿಸಿದರು. ಅವರ ಈ ಸುದೀರ್ಘ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದ್ದು, 1986ರಲ್ಲಿ. ಅವರ ಈ Through the Looking Glass ಪ್ರದರ್ಶನ ಹಲವೆಡೆ ಯಶಸ್ಸು ಕಂಡಿತು. ಅಲ್ಲಿಂದಾಚೆಗೆ, ದೇಶದ ಒಳಗೆ, ಹೊರಗೆ ಸಾಕಷ್ಟು ಅವಕಾಶಗಳನ್ನು ಪಡೆದ ನಳಿನಿ ಆರಂಭದಲ್ಲಿ ಕ್ಯಾನ್‌ವಾಸ್‌ಗಳ ಮೇಲೆ ಆಕ್ರಿಲಿಕ್ ಮತ್ತು ಕಾಗದದ ಮೇಲೆ ವಾಟರ್ ಕಲರ್ ಚಿತ್ರಗಳನ್ನು, ರಿವರ್ಸ್ ಪೇಂಟಿಂಗ್‌ಗಳನ್ನು ರಚಿಸುತ್ತಿದ್ದರು. 90ರ ದಶಕದಲ್ಲಿ ಬಾಬ್ರಿ ಮಸೀದಿ ಘಟನೆ ನಡೆದ ಬಳಿಕದ ಆಘಾತಕ್ಕೆ ದೇಶದ ಸಾಂಸ್ಕೃತಿಕ ಪ್ರತಿಕ್ರಿಯೆಗಳ ಭಾಗವಾಗಿ ಅವರೂ ನವ ಮಾಧ್ಯಮಗಳನ್ನು ಬಳಸಿ ಕಲಾಕೃತಿಗಳ ಮೂಲಕ ಪ್ರತಿಕ್ರಿಯಿಸತೊಡಗಿದರು. ಆ ರೀತಿ ಇನ್ಸ್ಟಾಲೇಷನ್ ಶಿಲ್ಪಗಳನ್ನು ರಚಿಸಿದ, ಆ ಬಳಿಕ ಸಮಕಾಲೀನ ವಿಡಿಯೋ ಕಲಾಕೃತಿಗಳನ್ನು ರಚಿಸಿದ ಆರಂಭಿಕ ಕೆಲವು ಕಲಾವಿದರಲ್ಲಿ ಅವರೂ ಒಬ್ಬರು.

ಸಾಮಾಜಿಕ ಚಳುವಳಿಗಳಲ್ಲಿ ತೊಡಗಿಕೊಳ್ಳುವ ಕಲಾವಿದೆ ಆಗಿ ಅವರು ಹಿಂಸೆ, ಸ್ತ್ರೀವಾದ, ರಾಜಕೀಯ, ಜನಾಂಗೀಯ ಹಿಂಸೆ-ಕೋಮುವಾದ ಮತ್ತಿತರ ಕಾಡುವ ಸಂಗತಿಗಳಿಗೆ ಪ್ರತಿಕ್ರಿಯಿಸುತ್ತಾರೆ.

ತನ್ನ ಕಲಾಕೃತಿಗಳ ರಚನೆಯ ವಿಧಾನದ ಬಗ್ಗೆ ಹೇಳುವಾಗ ಜರ್ಮನ್ ಚಿಂತಕ ವಾಲ್ಟರ್ ಬೆಂಜಮಿನ್‌ ಅವರ ಮಾತುಗಳನ್ನು ನೆನೆಸಿಕೊಳ್ಳುವ ನಳಿನಿ, For me, an artwork is made in three steps – a musical stage when it is composed, an architectonic one when it is built and a textile one when it is woven. The retelling of stories, from a different angle, and a different often feminist purpose, has been at the core of my art for decades ಎನ್ನುತ್ತಾರೆ.

ಗ್ರೀಕ್ ಮತ್ತು ಭಾರತೀಯ ಪುರಾಣಗಳಿಂದ ವಸ್ತುಗಳನ್ನು ತನ್ನ ಕಲಾಕೃತಿಗಳಿಗೆ ಆಯ್ದುಕೊಳ್ಳುವ ನಳಿನಿ ಅವರ ಕಸಾಂದ್ರಾ, ಮೀಡಿಯಾ, ಸೀತಾ ಮೊದಲಾದ ಕಲಾಕೃತಿಗಳು ಹೆಸರು ಮಾಡಿವೆ. ವೀಡಿಯೊ ಇನ್ಸ್ಟಾಲೇಷನ್‌ಗಳಲ್ಲದೇ ಇತ್ತೀಚೆಗೆ ಅವರು ಆನಿಮೇಷನ್ ಕಲಾಕೃತಿಗಳನ್ನೂ ರಚಿಸುತ್ತಿದ್ದಾರೆ. ಈಗ ಮುಂಬಯಿಯಲ್ಲಿ ವಾಸವಾಗಿರುವ ಅವರಿಗೆ ಇಬ್ಬರು ಮಕ್ಕಳು. ಜಗತ್ತಿನಾದ್ಯಂತ ಹಲವು ಪ್ರಮುಖ ಕಲಾಗ್ಯಾಲರಿಗಳಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿರುವ ಅವರಿಗೆ ಫುಕುವೋಕಾ ಪ್ರೈಝ್, ಜಾನ್ ಮೈರೊ ಪ್ರೈಝ್ ಮೊದಲಾದ ಪ್ರಮುಖ ಪಾರಿತೋಷಕಗಳು ಸಂದಿವೆ.

ನಳಿನಿ ಮಲಾನಿ ಅವರ ಜೊತೆ ಆಶೀಶ್ ರಾಜಾಧ್ಯಕ್ಷ ಅವರು ನಡೆಸಿದ ಸಂದರ್ಶನ:

ಚಿತ್ರ ಶೀರ್ಷಿಕೆಗಳು:

ನಳಿನಿ ಮಲಾನಿ ಅವರ Can You Hear Me, (2019)Animation work

ನಳಿನಿ ಮಲಾನಿ ಅವರ Cassandra (2009)

ನಳಿನಿ ಮಲಾನಿ ಅವರ Chart Series 1 - The Glass Bead Game Hesse, (2013)

ನಳಿನಿ ಮಲಾನಿ ಅವರ Gummadi (2018)

ನಳಿನಿ ಮಲಾನಿ ಅವರ In Search of Vanished Blood, (2012). Six channel video-shadow play with five reverse painted Mylar cylinders, sound, 11 minutes

ನಳಿನಿ ಮಲಾನಿ ಅವರ Onanism, (1969). Digitised 16mm black and white film

ನಳಿನಿ ಮಲಾನಿ ಅವರ Sita I,(2006)

ನಳಿನಿ ಮಲಾನಿ ಅವರ Stories Retold - Mapping III, (2008)

ನಳಿನಿ ಮಲಾನಿ ಅವರ Tales of Good and Evil, (2008)

ನಳಿನಿ ಮಲಾನಿ ಅವರ untitled (1970)

ನಳಿನಿ ಮಲಾನಿ ಅವರ You Don’t Hear Me, installation view (2020)

ಈ ಅಂಕಣದ ಹಿಂದಿನ ಬರೆಹಗಳು:
ಮಹಾನಗರಕ್ಕೊಂದು ದೃಶ್ಯಭಾಷೆ ಕಟ್ಟಿಕೊಟ್ಟ ಜಿತೀಶ್ ಕಲ್ಲಟ್
ಸಾಂಸ್ಕೃತಿಕ ವೈರುಧ್ಯದ ಪದರುಗಳ ಅಭಿವ್ಯಕ್ತಿ: ಶೀಲಾಗೌಡ
ಅಕ್ಷರಗಳನ್ನು ಅಮೂರ್ತಗೊಳಿಸುವ ಗ್ಲೆನ್ ಲೈಗನ್
ಕಲೆಯ ಪ್ರಜಾತಾಂತ್ರೀಕರಣ – ಡೊನಾಲ್ಡ್ ಜಡ್
ಕಲೆಯ ಅತಿರೇಕದ ಮಿತಿಗಳನ್ನು ವಿಸ್ತರಿಸಿದ ಕ್ರಿಸ್ ಬರ್ಡನ್:
"ದಾ ಷಾನ್ ಝಿ” ಯ “ಕ್ಸಿಂಗ್‌ವೇಯಿ ಈಷು” ಮುಂಗೋಳಿ - ಝಾಂಗ್ ಹುವಾನ್
ಕಟ್ಟಕಡೆಯ ಸರ್ರಿಯಲಿಸ್ಟ್ – ಲಿಯೊನೊರಾ ಕೇರಿಂಗ್ಟನ್
ಸ್ಟ್ರೀಟ್ ಟು ಗ್ಯಾಲರಿ – ಕೀತ್ ಹೆರಿಂಗ್:
ನಾನು ಮ್ಯಾಟರಿಸ್ಟ್: ಕಾರ್ಲ್ ಆಂದ್ರೆ:
ಫೊಟೋಗ್ರಫಿಯನ್ನು ಸಮಕಾಲೀನ ಆರ್ಟ್ ಮಾಡಿದ ವಿಕ್ ಮ್ಯೂನಿಸ್
ನನ್ನದೇ ಸಂಗತಿಗಳಿವು: ಆದರೆ ಕೇವಲ ನನ್ನವಲ್ಲ– ಶಿರಿನ್ ನೆಹಶಾತ್
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
ಸದಭಿರುಚಿ ಎಂಬುದು ಆಧುನಿಕ ಬದುಕಿನ ಶಾಪ – ಗಿಲ್ಬರ್ಟ್ ಮತ್ತು ಜಾರ್ಜ್
ಆನೆಲದ್ದಿ ಮತ್ತು ಕ್ರಿಸ್ ಒಫಿಲಿ
ನಿಸರ್ಗ ನನ್ನ ಸಹಶಿಲ್ಪಿ – ಆಂಡಿ ಗೋಲ್ಡ್ಸ್‌ವರ್ದಿ
ಫಿಗರೇಟಿವ್ ಚಿತ್ರಗಳು ಕೂಡಾ ಇಂದು ಪ್ರಸ್ತುತ – ಪೀಟರ್ ಡಾಯ್
ಕಾನ್ಸೆಪ್ಚುವಲ್ ಆರ್ಟ್‌ನ ಜನಕ – ಸೊಲ್ ಲೆವಿಟ್
ಮನುಷ್ಯ ಆಗಿರೋದು ಅಂದ್ರೆ ಏನು?- ವಿಲಿಯಂ ಕೆಂಟ್ರಿಜ್
“ಸೂಪರ್ ಫ್ಲ್ಯಾಟ್” ಐ ಕ್ಯಾಂಡಿಗಳ ತಕಾಷಿ ಮುರಾಕಾಮಿ
ಅಲ್ಲಿರುವುದು ನನ್ನಮನೆ – ದೊ ಹೊ ಸುಹ್
ದಿ ಲೈಫ್ ಆಫ್ CB: ಅರ್ಥಾತ್, ಕ್ರಿಷ್ಚಿಯನ್ ಬೋಲ್ತನಸ್ಕಿ
ಅಸೆಂಬ್ಲಿಗಳಲ್ಲಿ “ಬಾಕತನ” ತೋರಿಸಿದ ಅರ್ಮಾನ್
ಪ್ರಾಮಾಣಿಕತೆಯೇ ಸೌಂದರ್ಯ- ಜೊರ್ಗ್ ಇಮ್ಮೆಂದ್ರಾಫ್
ನಾಗರೀಕತೆಯ ಒಡಕಿಗೆ ಕನ್ನಡಿ ಹಿಡಿದ ಡೊರಿಸ್ ಸಾಲ್ಸೆದೊ
ಕಾನ್ಸೆಪ್ಚುವಲ್ ಆರ್ಟ್‌ಗೆ ತಳಪಾಯ –ರಾಬರ್ಟ್ ರಾಷನ್‌ಬರ್ಗ್
ಡಿಜಿಟಲ್ ಜಗತ್ತಿನಲ್ಲಿ ಒರಿಜಿನಲ್‌ನ ಹುಡುಕಾಟ – ಥಾಮಸ್ ರಫ್
ಕಲೆ ಜಗತ್ತನ್ನು ಬದಲಾಯಿಸಲೇ ಬೇಕೆಂದಿಲ್ಲ- ಫಿಯೊನಾ ಹಾಲ್
ಜಾಗತೀಕರಣದ ಆಟಗಳ ಬೆನ್ನಟ್ಟಿರುವ ಇಂಕಾ ಶೋನಿಬೇರ್
ಅರ್ಥವಂತಿಕೆಗಾಗಿ ಅರ್ಥ ಕಳೆದುಕೊಳ್ಳಬೇಕೆಂಬ- ಗು ವೆಂಡಾ
ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು- ನಿಯೊ ಆವ್
ಕಲೆ ಒಂದು ಉತ್ಪನ್ನವಲ್ಲ ಪ್ರಕ್ರಿಯೆ- ನಾಮನ್ ಬ್ರೂಸ್
‘ಇನ್ಫಾರ್ಮೇಷನ್ ಸೂಪರ್ ಹೈವೇ’ ಹೊಳಹು- ನಾಮ್ ಜುನ್ ಪಾಯಿಕ್
ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್
ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್
ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್
ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್
“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್
ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್
ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’
ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್
ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್
ಬಾರ್ಬರಾ ಕ್ರುಗರ್‌ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್
ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್
ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್
“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”
“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”
ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್
ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ
“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”
“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”
“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”
“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”
“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”
“ಒಳಗಣ ಅನಂತ ಮತ್ತು ಹೊರಗಣ ಅನಂತ”
“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ
ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ
ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್
ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್
ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’
ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ
ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್
ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ
ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ
ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

 

 

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...