ಪದಕೋಶದ ಬದುಕು

Date: 19-12-2023

Location: ಬೆಂಗಳೂರು


"ಪದಕೋಶದ ಪ್ರತಿಗಟಕಗಳಾದ ಪದಗಳು ಹೇಗೆ ಹುಟ್ಟುತ್ತವೆ, ಬಳಕೆಯಾಗುತ್ತವೆ, ಬೆಳೆಯುತ್ತವೆ, ಸಾಯುತ್ತವೆ ಎಂದು ನೋಡಿದಾಗ ಇದೆಲ್ಲವೂ ಬದುಕು, ಸಮಾಜದ ಬದುಕೆ ಆಗಿರುತ್ತದೆ. ಇವತ್ತು ಒಂದು ಎತ್ತುಗೆಗಳನ್ನ ಇಟ್ಟುಕೊಂಡು ಪದಗಳ ಹುಟ್ಟು ಮತ್ತು ಸಾವು ಇವುಗಳ ಕುರಿತು ತುಸು ಮಾತನಾಡಬಹುದು. ಪದಗಳ ಬೆಳವಣಿಗೆ ಕುರಿತು ಈ ಮೊದಲಲ್ಲಿ ತುಸು ಮಾತನಾಡಲಾಗಿದೆ,'' ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ 'ತೊಡೆಯಬಾರದ ಲಿಪಿಯ ಬರೆಯಬಾರದು' ಅಂಕಣದಲ್ಲಿ ‘ಪದಕೋಶದ ಬದುಕು’ ಕುರಿತು ವಿಶ್ಲೇಷಿಸಿದ್ದಾರೆ.

ಬಾಶೆಯೊಂದರ ಪದಕೋಶವನ್ನು ಅರಿಯಬೇಕಾದರೆ ಆ ಬಾಶೆಯಾಡುವ ಸಮುದಾಯದ ಎಲ್ಲರ ಬದುಕನ್ನ ಬದುಕಬೇಕು. ಪದಕೋಶ ರೂಪುಗೊಳ್ಳುವುದು ಆ ಸಮುದಾಯದ ಸಮಾಜ, ಸಂಸ್ಕ್ರುತಿ, ಬದುಕು, ಮನಸು, ಕಲ್ಪನೆ, ಇತಿಹಾಸ, ಬವಿಶತ್ತುಗಳೆ ಆಗಿರುತ್ತವೆ. ಪದಕೋಶದ ಪ್ರತಿಗಟಕಗಳಾದ ಪದಗಳು ಹೇಗೆ ಹುಟ್ಟುತ್ತವೆ, ಬಳಕೆಯಾಗುತ್ತವೆ, ಬೆಳೆಯುತ್ತವೆ, ಸಾಯುತ್ತವೆ ಎಂದು ನೋಡಿದಾಗ ಇದೆಲ್ಲವೂ ಬದುಕು, ಸಮಾಜದ ಬದುಕೆ ಆಗಿರುತ್ತದೆ. ಇವತ್ತು ಒಂದು ಎತ್ತುಗೆಗಳನ್ನ ಇಟ್ಟುಕೊಂಡು ಪದಗಳ ಹುಟ್ಟು ಮತ್ತು ಸಾವು ಇವುಗಳ ಕುರಿತು ತುಸು ಮಾತನಾಡಬಹುದು. ಪದಗಳ ಬೆಳವಣಿಗೆ ಕುರಿತು ಈ ಮೊದಲಲ್ಲಿ ತುಸು ಮಾತನಾಡಲಾಗಿದೆ.

ಒಕ್ಕಲುತನ ಮನುಶ್ಯ ನಾಗರಿಕತೆ ಬೆಳೆಯಲು ಕಾರಣವಾದ ಮಹತ್ವದ ಸಾಮಾಜಿಕ ಬೆಳವಣಿಗೆ. ಒಕ್ಕಲುತನದಲ್ಲಿ ವಿವಿದ ಕೆಲಸಗಳನ್ನ ಮಾಡುವಾಗ ಆ ಎಲ್ಲ ಕೆಲಸಗಳಿಗೆ ಅದಾಗಲೆ ಬಾಶೆಯಲ್ಲಿ ಇದ್ದ ಕ್ರಿಯಾಪದಗಳನ್ನ ಬಳಸಿಕೊಂಡಿರಬಹುದು. ಗೊತ್ತಿಲ್ಲ. ಅಂತದೊಂದು ಅದ್ಯಯನ ಮಾಡಬಹುದು. ಆದರೆ, ಒಕ್ಕಲುತನ ಬದುಕಿಗೆ ಆಸರೆಯಾಗಿ ಬೆಳೆದ ಹಾಗೆ ಒಕ್ಕಲುತನದಲ್ಲಿ ವಿವಿದ ಬೆಳೆಗಳನ್ನು ಬೆಳೆಯುವುದನ್ನು ಕಂಡುಕೊಂಡರು. ಅದಕ್ಕೆ ಪೂರಕವಾಗಿ ವಿವಿದ ಸಾದನಗಳನ್ನು ಬೆಳೆಸಿಕೊಂಡರು. ಪ್ರತಿ ಸಾದನಕ್ಕೆ ಒಂದೊಂದು ಹೆಸರಿಟ್ಟರು. ಈ ಸಾದನಗಳನ್ನು ಮಾಡುವಾಗ ಅದು ಇಡಿಯಾಗಿ ಅಲ್ಲದೆ ಬಿಡಿಬಿಡಿ ಗಟಕಗಳನ್ನ ಸೇರಿಸಿ ಮಾಡಿರುವುದರಿಂದ ಸಾದನದ ಬಿಡಿಬಿಡಿ ಬಾಗಗಳಿಗೆ ಹೆಸರುಗಳನ್ನು ಇಟ್ಟಿದಾರೆ. ಇನ್ನು ಈ ಸಾದನಗಳನ್ನು ತಯಾರಿಸುವುದಕ್ಕೆ ವಿವಿದ ಪ್ರಕ್ರಿಯೆಗಳನ್ನು ಬಳಸಿಕೊಂಡರು, ಬೆಳೆಸಿಕೊಂಡರು. ಈ ಕೆಲಸಗಳಿಗೆ ಒಂದೊಂದು ಹೆಸರುಗಳನ್ನು ಕೊಟ್ಟರು. ಈ ಕೆಲಸದಲ್ಲಿ, ಕೆಲಸ ಮಾಡುವ ಪ್ರಕ್ರಿಯೆಯಲ್ಲಿ ಬದಲಾವಣೆ, ವಿಬಿನ್ನತೆ ಬೆಳೆದವು. ಇವೆಲ್ಲ ಆಗುತ್ತಿದ್ದಂತೆ ಈ ಬದಲಾವಣೆಗಳಿಗೆ ಹೆಸರುಗಳು ಬಂದವು. ಈ ಸಾದನಗಳನ್ನು ತಯಾರು ಮಾಡುವುದಕ್ಕೆ ವಿವಿದ ವಸ್ತುಗಳನ್ನು ಬಳಸಿಕೊಂಡರು. ಅದಕ್ಕೆ ಹೆಸರುಗಳನ್ನು ಇಟ್ಟರು. ಅದರಲ್ಲಿ ವಿವಿದತೆ, ವಿಬಿನ್ನತೆ ಬೆಳೆದವು. ಇವೆಲ್ಲದಕ್ಕೂ ಹೆಸರುಗಳು ಬೆಳೆದವು.

ಇನ್ನೊಂದೆಡೆ ಒಕ್ಕಲುತನ ಬೆಳೆಯುತ್ತಿದ್ದಂತೆ ಕೆಯ್, ಹೊಲ ಮಾಡುವುದು ಹಲವು ಹಂತಗಳಲ್ಲಿ ವ್ಯವಸ್ತಿತವಾಗಿ ಬೆಳೆಯಿತು. ಹೊಲದಲ್ಲಿ ವಿವಿದ ಬೆಳೆಗಳನ್ನು ಬೆಳೆಯತೊಡಗಿದರು. ಈ ಬೆಳೆಗಳಿಗೆ ಹೆಸರುಗಳು ಬಂದವು. ಒಕ್ಕಲುತನ ಬೆಳೆಯುತ್ತಿದ್ದಂತೆ ಬೆಳೆಗಳನ್ನು ಹತ್ತಿರದಿಂದ ನೋಡುವ ಗುಣ ಬೆಳೆಯಿತು, ಅದು ಕೆಲಸವೂ ಆಯಿತು. ಹೀಗೆ ಬೆಳೆಯುವ ಬೆಳೆಗಳ ಬಾಗಗಳನ್ನು ಗುರುತಿಸಲಾಯಿತು. ಅವುಗಳಿಗೆ ಹೆಸರುಗಳು ಬಂದವು. ಈ ಬೆಳೆಗಳನ್ನು ಬೆಳೆಯುವುದಕ್ಕೆ ವಿವಿದ ರೀತಿ, ವ್ಯವಸ್ತೆಗಳನ್ನು ಬೆಳೆಸಿಕೊಂಡರು, ರೂಡಿಸಿಕೊಂಡರು. ಈ ಎಲ್ಲ ವ್ಯವಸ್ತೆಗಳು, ರೂಡಿಗಳು, ರೀತಿಗಳು ಹೆಸರುಗಳನ್ನು ಪಡೆದುಕೊಂಡವು. ಬೆಳೆಗಳಿಗೆ ಸಮಸ್ಯೆಗಳು, ರೋಗಗಳು ಬೆಳೆದವು. ಈ ಎಲ್ಲವುಗಳಿಗೆ ಹೆಸರುಗಳು ಬಂದವು. ಹೊಲದ ರಚನೆ ಎಲ್ಲ ಬೆಳೆದ ಮೇಲೆ ಮನುಶ್ಯರು ತಿನ್ನಬಹುದಾದ ಬೆಳೆಗಳನ್ನು ಗುರುತಿಸಲಾಗಿದ್ದಿತು. ಅವುಗಳನ್ನು ಬೆಳೆಯುವುದಕ್ಕಾಗಿಯೆ ಹೊಲದ ರಚನೆ ಬೆಳೆದಿದ್ದಿತು. ಆದರೆ, ಹೊಲದಲ್ಲಿ ಮನುಶ್ಯರ ಅನ್ನವಾಗಿ ಬೇಕಾಗಿದ್ದ ಬೆಳೆಗಳ ಜೊತೆಗೆ ಬೇಡವಾದ ಬೆಳೆಗಳೂ ಬೆಳೆಯತೊಡಗಿದವು. ಅದು ಸಹಜವೂ. ಈ ಬೇಡವಾದ ಬೆಳೆಗಳಿಗೆ ಬೆಳೆ ಎಂದು ಕರೆಯುವುದಿಲ್ಲ, ಬದಲಿಗೆ ಕಸ, ಕಳೆ, ಹುಲ್ಲು ಮೊದಲಾದ ಹೆಸರುಗಳಿಂದ ಕರೆಯಲಾಗುತ್ತದೆ. ಈ ಬೆಳೆಗಳಿಗೆ ಇಲ್ಲವೆ ಕಸಗಳಿಗೆ ಹೆಸರುಗಳು ಬೆಳೆದವು. ಒಂದೊಂದು ಬೆಳೆಗೆ ಇಲ್ಲವೆ ಕಸಕ್ಕೆ ಒಂದೊಂದು ಹೆಸರು. ಇಂತವೆ ನೂರಾರು ಹೆಸರುಗಳು ಇವೆ.

ಹೊಲ ಮಾಡುವುದು ಎಂದರೆ ಬಿತ್ತುವ, ಕೊಯ್ಯುವ ಮೊದಲಾಗಿ ಹಲವು ಪ್ರಕ್ರಿಯೆಗಳು ಬೆಳೆದವು. ಎಲ್ಲ ಪ್ರಕ್ರಿಯೆಗಳು, ಕೆಲಸಗಳು ಹಲವಾರು ಪದಗಳನ್ನು ಪಡೆದುಕೊಂಡವು.

ಹೊಲಕ್ಕೆ, ಬೆಳೆ ಬೆಳೆಯುವುದಕ್ಕೆ ಮಳೆ ಬೇಕಾಗಿತ್ತು. ಮಳೆಗೆ ಸಂಬಂದಿಸಿ ಅರಿವನ್ನು ಬೆಳೆಸಿಕೊಂಡು ಆ ಅರಿವಿನಲ್ಲಿ ಹಲವು ಪದಗಳನ್ನು ಬೆಳೆಸಿದರು. ಆನಂತರ ಮಳೆಯೆಂದರೆ ನೀರು ಎಂಬ ತಿಳುವಳಿಕೆಯನ್ನು ಬೆಳೆಸಿಕೊಂಡು ಮಳೆಯಿಲ್ಲದಿದ್ದರೆ, ಮಳೆಯಾಗದಿದ್ದರೆ ನೀರಿನ ಅನುಕೂಲ ಮಾಡುವುದು ಬೆಳೆಯಿತು. ನೀರ‍್ಮಣ್ಣು ಎಂಬ ಮೊದಲಾದ ಪದಗಳು ಬೆಳೆದವು. ನೀರಾವರಿ ಒಂದು ದೊಡ್ಡ ವ್ಯವಸ್ತೆಯಾಗಿ ಬೆಳೆಯಿತು. ಈಗ ನೀರಾವರಿ ವ್ಯವಸ್ತೆಯಲ್ಲಿ ಹಲವಾರು ಪದಗಳು ಬೆಳೆದವು.

ಇದೆಲ್ಲದರ ಮೇಲೆ ಒಕ್ಕಲುತನಕ್ಕೆ ಸಂಬಂದಿಸಿ ನಂಬಿಕೆಗಳು, ಆಚರಣೆಗಳು ಬೆಳೆದವು. ಅವು ಸಂಪ್ರದಾಯಗಳಾದವು. ಒಕ್ಕಲುತನದ ಸೋಲು ಗೆಲುವುಗಳು ಅವುಗಳದೆ ಆದ ವಿಬಿನ್ನ ಆಯಾಮಗಳನ್ನು ಕಟ್ಟಿಕೊಂಡು ಬೆಳೆದವು. ಇದಕ್ಕೆ ಸಂಬಂದಿಸಿ ಪದಗಳು, ಆ ಬರಗಾಲ, ಅತಿಮಳೆ ಮೊದಲಾದವು ಬೆಳೆದವು. ಆಚರಣೆ, ಸಂಪ್ರದಾಯಗಳು ಬೆಳೆದು ಹಬ್ಬ ಮೊದಲಾದವು ಬಂದವು.

ಒಕ್ಕಲುತನ ಎಂಬ ಒಂದೆ ಒಂದು ವಲಯವನ್ನು ಮಾತಿಗೆತ್ತಿಕೊಂಡರೂ ಅದು ಹೇಗೆ ಪದಕೋಶದ ಬೆಳೆವಣಿಗೆಗೆ ಕೊಡುಗೆ ಕೊಟ್ಟಿತು ಎಂಬುದನ್ನು ನೋಡಬಹುದು. ಇದರಂತೆಯೆ ಪ್ರತಿಯೊಂದು ಕಸುಬನ್ನೂ ಅವಲೋಕಿಸಬಹುದು. ವ್ಯಾಪಾರ ವಲಯದ ಪ್ರತಿಯೊಂದು ವಲಯವನ್ನೂ ಇದರಂತೆಯೆ ನೋಡಬಹುದು. ಇನ್ನು ಸಾರಿಗೆ, ಸಂಪರ‍್ಕ, ವಿಗ್ನಾನ, ತಂತ್ರಗ್ನಾನ ಹೀಗೆ ಪಟ್ಟಿ ಬೆಳೆಯುತ್ತಲೆ ಇರುತ್ತದೆ. ಹಾಗೆಯೆ, ವಿದ್ವತ್ ವಲಯದ ವಿವಿದ ಗ್ನಾನಶಾಕೆಗಳೂ ಪದಕೋಶದ ಬೆಳವಣಿಗೆಗೆ ದೊಡ್ಡಕೊಡುಗೆಯನ್ನು ನೀಡುತ್ತವೆ. ಬೇಂದ್ರೆಯವರಂತ ಕವಿಗಳೂ ಹಲವರು ಹೊಸ ಹೊಸ ಪದಗಳನ್ನು ಹುಟ್ಟಿಸುತ್ತಿರುತ್ತಾರೆ.

ಇದೆ ರೀತಿಯಲ್ಲಿ ಬದುಕಿನ ಮತ್ತು ಸಮಾಜದ ಪ್ರತಿಯೊಂದು ಆಯಾಮದಲ್ಲಿ ಆಗುವ ಬದಲಾವಣೆ, ಬೆಳವಣಿಗೆ ಹೊಸ ಹೊಸ ಪದಗಳನ್ನು ಹುಟ್ಟಿಸುವುದಕ್ಕೆ ಕಾರಣವಾಗಿರುತ್ತದೆ. ಹೀಗೆ ನಿರಂತರ ಪದಕೋಶ ಬೆಳೆಯುತ್ತಿರುತ್ತದೆ. ಇದು ಪದಕೋಶವನ್ನು ನಿರಂತರ ವಿಸ್ತರಿಸುತ್ತಿರುತ್ತದೆ.

ಇನ್ನು ಪದಕೋಶದ ಇಳಿಕೆ, ಕುಸಿತದ ಬಗೆಗೂ ಇಲ್ಲಿಯೆ ಒಂದೆರಡು ಮಾತಗಳನ್ನು ಆಡೋಣ. ಪದಗಳು ಹೊಸತಾಗಿ ಹುಟ್ಟಿ ಬೆಳೆಯುವುದು ಮಾತ್ರವಲ್ಲದೆ ಕುಗ್ಗಿ ಸಾಯುತ್ತವೆ. ಅದೇನು ಪದಗಳಿಗೆ ಹುಟ್ಟು ಸಾವುಗಳೆ ಎಂದು ಹುಬ್ಬೇರಿಸುವುದು ಬೇಡ. ನಿಜ, ಪದಗಳು ಸಾಯುತ್ತವೆ, ಯಾಕೆಂದರೆ ಅವು ಹುಟ್ಟಿವೆಯಲ್ಲವೆ. ಅಂದರೆ, ಒಂದು ಕಾಲದಲ್ಲಿ ನಿರ‍್ದಿಶ್ಟವಾದ ಸಾಮಾಜಿಕ ಅವಶ್ಯಕತೆಯ ಒಡಲೊಳಗಿನಿಂದ ಹುಟ್ಟಿದ ಪದವು ಆ ಸಾಮಾಜಿಕ ಅವಶ್ಯಕತೆ ಸಮಾಜಕ್ಕೆ ಇರುವತನಕ, ಬೇಕಿರುವತನಕ ಆ ಪದವೂ ಇರುತ್ತದೆ. ಆನಂತರ ಅದರ ಬಳಕೆ ಬಿದ್ದುಹೋದ ಮೇಲೆ ಆ ಪದದ ಬಳಕೆ ಸಹಜವಾಗಿ ಬಳಕೆಯಲ್ಲಿ ಕಡಿಮೆಯಾಗುತ್ತದೆ. ಕ್ರಮೇಣ ಅದು ಇಲ್ಲವಾಗುತ್ತದೆ. ಒಕ್ಕಲುತನದ ಉದಾಹರಣೆಯನ್ನೆ ಇಲ್ಲಿ ಮತ್ತೆ ತೆಗೆದುಕೊಳ್ಳುವುದಾದರೆ, ಪ್ರಾಚೀನ ಕಾಲದಲ್ಲಿ ಒಕ್ಕಲುತನದ ಪ್ರಕ್ರಯೆಯ ಬಾಗವಾಗಿದ್ದ ಕಾಳುಗಳನ್ನು ಶೇಕರಿಸಿ ಇಡುತ್ತಿದ್ದ ಹಗೇವು ಮೊದಲಾದ ಪ್ರಕ್ರಿಯೆಗಳು ಇಂದು ಹೆಚ್ಚೂ ಕಡಿಮೆ ಸಂಪೂರ‍್ಣವಾಗಿ ಬೇಕಾಗಿಲ್ಲ. ಹಾಗಾಗಿ, ಹಗೇವು ಎಂದ ಪದದ ಬಳಕೆ ಈಗ ಕುಸಿದಿದೆ, ಇದು ಇಂದಿನ ತಲೆಮಾರಿನವರಿಗೆ ಪರಿಚಯವೂ ಇಲ್ಲವಾಗಿದೆ. ಕ್ರಮೇಣ ಈ ಪದ ಜನರ ಬದುಕಿನಿಂದ ಇಲ್ಲವಾಗುತ್ತದೆ.

ಅದರಂತೆಯೆ, ಹೊಲದಲ್ಲಿ ಬಳಸುತ್ತಿದ್ದ ವಿವಿದ ಬಗೆಯ ಸಾದನಗಳು, ಅವುಗಳನ್ನು ಬಳಸುತ್ತಿದ್ದ ಪ್ರಕ್ರಿಯೆಗಳು ವ್ಯಾಪಕವಾಗಿ ಬದಲಾಗಿವೆ. ಇಂದು ಹೊಲವನ್ನು ಸಂಪೂರ‍್ಣವಾಗಿ ಮಿಶಿನ್ನುಗಳು ಆವರಿಸಿರುವುರಿಂದ ಹೊಲದಲ್ಲಿ ಈ ಹಿಂದೆ ಬಳಕೆಯಲ್ಲಿದ್ದ ಕೊಯ್ಲಿಗೆ ಸಂಬಂದಿಸಿದ ಹಲವಾರು ಕೆಲಸಗಳು, ಪ್ರಕ್ರಿಯೆಗಳು, ಅದಕ್ಕೆ ಬೇಕಾದ ಸಾದನಗಳು, ಸಾದನಗಳ ಬಿಡಿಬಾಗಗಳು, ಅವುಗಳನ್ನು ತಯಾರಿಸುವ ವಿದಾನಗಳು, ಆ ತಯಾರಿಕೆಯಲ್ಲಿ ಬೇಕಾಗುವ ಸಾಮಗ್ರಿಗಳು ಇವೆಲ್ಲವೂ ನಮ್ಮ ಇಂದಿನ ಬದುಕಿಗೆ ಅನಗತ್ಯವಾಗುತ್ತಿವೆ. ಹೀಗಾಗಿ ಬರುವ ತಲೆಮಾರಿಗೆ ಈ ಪದಗಳು ಅಪರೂಪವಾಗಿ ಬೀಳುತ್ತವೆ, ಆನಂತರ ಕ್ರಮೇಣ ಪದಗಳು ಬಳಕೆಯಿಂದ ಬಿದ್ದುಹೋಗುತ್ತವೆ. ದಾಕಲೆಗಳಿಲ್ಲದ ಕಾಲದಲ್ಲಿ ಬಿದ್ದು ಹೋದ ಎಶ್ಟೊ ಪದಗಳಿಗೆ ಲೆಕ್ಕವಿಲ್ಲ, ಕಳೆದುಹೋಗಿರಬಹುದಾದ ಪದಗಳ ಅರಿವೂ ನಮಗಿಲ್ಲ. ಹೀಗೆ ಪದಗಳು ಸತ್ತುಹೋಗುತ್ತವೆ. ಇಂದಿನ ಆದುನಿಕ ಕಾಲದಲ್ಲಿ ನಿಗಂಟು ಮೊದಲಾದವುಗಳ ಮೂಲಕ ಪದಗಳನ್ನು ದಾಕಲಿಸಿ ಇಡುವುದಕ್ಕೆ ಸಾದ್ಯವಿದೆ. ಆದರೆ ಸೂಕ್ತವಾದ ಕೆಲಸಗಳು ಆಗದಿದ್ದರೆ, ಬಳಕೆಯಲ್ಲಿರುವ ಪದಗಳು ದಾಕಲಾಗುವುದಿಲ್ಲ ಮತ್ತು ದಾಕಲಾಗದ ಪದಗಳು ಸಹಜವಾಗಿ ಅರಿವಿಗೆ ಬರುವುದೆ ಇಲ್ಲ.

ಈ ಅಂಕಣದ ಹಿಂದಿನ ಬರೆಹಗಳು:
ಕನ್ನಡ ಪದಕೋಶ ಎಶ್ಟು ದೊಡ್ಡದು?
ಪದಕೋಶ: ಶಬ್ದಪಾರಮಾರ‍್ಗಮಶಕ್ಯಂ
ಕನ್ನಡ ಒಳನುಡಿಗಳು ಹೇಗೆ ಬಿನ್ನ?
ಕನ್ನಡ ಒಳನುಡಿಗಳ ಪಸರಿಕೆ ಅರಿಯುವುದು ಹೇಗೆ?

ಕನ್ನಡ ಒಳನುಡಿಗಳು ಎಶ್ಟು ಹಳೆಯವು?
ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ

ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾ

MORE NEWS

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...