ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು

Date: 17-08-2023

Location: ಬೆಂಗಳೂರು


“ಆಡುಮಾತಿನಲ್ಲಿ ಕೂಡ ಪೂರ‍್ಣವಾಕ್ಯಗಳನ್ನು ಇಲ್ಲವೆ ವಾಕ್ಯದ ಕೊನೆಯನ್ನು ಗುರುತಿಸಲು ಪೂರ‍್ಣಕ್ರಿಯಾಪದ ಎಲ್ಲಿ ಬಳಕೆಯಾಗಿದೆ ಎಂಬುದನ್ನು ಗಮನಿಸಬಹುದು. ಸಾಮಾನ್ಯವಾಗಿ ಪೂರ‍್ಣ ಕ್ರಿಯಾಪದಗಳನ್ನು ವಾಕ್ಯದ ಗಡಿ ಎಂದು ಗುರುತಿಸಲಾಗುತ್ತದೆ. ಪೂರ‍್ಣಕ್ರಿಯಾಪದದ ಬಳಕೆಯ ನಂತರ ವಾಕ್ಯ ಹರಡಿಕೊಳ್ಳಲಾರದು,” ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ‘ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು' ವಿಚಾರದ ಕುರಿತು ಬರೆದಿದ್ದಾರೆ.

ಪೂರ‍್ಣ ಕ್ರಿಯಾಪದಗಳು ಮತ್ತು ಅಪೂರ‍್ಣ ಕ್ರಿಯಾಪದಗಳು ಎಂದು ಎರಡು ರೀತಿಯಲ್ಲಿ ಕ್ರಿಯಾಪದಗಳನ್ನು ವಾಕ್ಯ ರಚನೆಯ ಹಂತದಲ್ಲಿ ಗುರುತಿಸಲು ಸಾದ್ಯ ಎಂಬುದನ್ನು ಈ ಹಿಂದೆ ನೋಡಿದೆ. ಇಲ್ಲಿ, ಈ ಎರಡು ಬಗೆಯ ಕ್ರಿಯಾಪದಗಳ ರೂಪಗಳನ್ನು ತುಸು ಪರಿಚಯ ಮಾಡಿಕೊಳ್ಳಬಹುದು. ಕನ್ನಡದಲ್ಲಿ ಕರ‍್ತ್ರುವಿನ ಲಿಂಗ ಮತ್ತು ವಚನಗಳನ್ನು ಆ ವಾಕ್ಯದ ಕೊನೆಯಲ್ಲಿ ಬರುವ ಕ್ರಿಯಾಪದ ತೆಗೆದುಕೊಳ್ಳುತ್ತದೆ ಎಂಬುದನ್ನು ನೋಡಿದ್ದೇವೆ. ಹೀಗೆ ವಾಕ್ಯದಲ್ಲಿ ಯಾವ ಕ್ರಿಯಾಪದದ ಮೇಲೆ ಆ ವಾಕ್ಯದ ಕರ‍್ತ್ರುವಿನ ಲಿಂಗ ಮತ್ತು ವಚನದ ಲಕ್ಶಣಗಳು ಪ್ರತ್ಯಯ ರೂಪದಲ್ಲಿ ಬಂದು ಸೇರತ್ತವೆಯೊ ಅದು ಪೂರ‍್ಣ ಕ್ರಿಯಾಪದ ಎನಿಸಿಕೊಳ್ಳುತ್ತದೆ. ಇಲ್ಲಿ ಒಂದು ಉದಾಹರಣೆಯನ್ನು ಕೊಟ್ಟಿದೆ.

ಅವಳು ಕೆಲಸಕ್ಕೆ ಹೋಗಿದ್ದಾಳೆ

ಇಲ್ಲಿ ‘ಅವಳು’ ಎನ್ನುವುದು ಈ ವಾಕ್ಯದಲ್ಲಿನ ಕರ‍್ತ್ರುವಾಗಿದೆ. ವಾಕ್ಯದ ಕ್ರಿಯಾಪದ ‘ಹೋಗು’ ಇದು ಮೊದಲಿಗೆ ಕಾಲಪ್ರತ್ಯಯವನ್ನು ಪಡೆದುಕೊಂಡು ಆನಂತರ ಅದರ ಮೇಲೆ ಕರ‍್ತ್ರುವಿನ ಲಿಂಗ-ವಚನ ಆಗಿರುವ ಪುಲ್ಲಿಂಗ-ಏಕವಚನ ಇವುಗಳನ್ನು ಪಡೆದುಕೊಂಡಿದೆ. ಈ ಕರ‍್ತ್ರುವಿನ ಗುಣಲಕ್ಶಣಗಳು, ಅಂದರೆ ಕರ‍್ತ್ರುವಿನ ಲಿಂಗ-ವಚನಗಳು ಪ್ರತ್ಯಯ ರೂಪದಲ್ಲಿ ಸೇರಿಕೊಂಡ ಕ್ರಿಯಾಪದವನ್ನು ಪೂರ‍್ಣಕ್ರಿಯಾಪದ ಎಂದು ಕರೆಯುತ್ತಾರೆ.

ಇದಕ್ಕೆ ಕಾರಣ, ಕ್ರಿಯಾಪದವು ವಾಕ್ಯದ ನಿಲುಗಡೆಯನ್ನು ಕೊಡುತ್ತದೆ.ಬರಹದಲ್ಲಿ ಹೇಗೊ ಗುರುತಿಸಬಹುದು. ಆಡುಮಾತಿನಲ್ಲಿ ಕೂಡ ಪೂರ‍್ಣವಾಕ್ಯಗಳನ್ನು ಇಲ್ಲವೆ ವಾಕ್ಯದ ಕೊನೆಯನ್ನು ಗುರುತಿಸಲು ಪೂರ‍್ಣಕ್ರಿಯಾಪದ ಎಲ್ಲಿ ಬಳಕೆಯಾಗಿದೆ ಎಂಬುದನ್ನು ಗಮನಿಸಬಹುದು. ಸಾಮಾನ್ಯವಾಗಿ ಪೂರ‍್ಣ ಕ್ರಿಯಾಪದಗಳನ್ನು ವಾಕ್ಯದ ಗಡಿ ಎಂದು ಗುರುತಿಸಲಾಗುತ್ತದೆ. ಪೂರ‍್ಣಕ್ರಿಯಾಪದದ ಬಳಕೆಯ ನಂತರ ವಾಕ್ಯ ಹರಡಿಕೊಳ್ಳಲಾರದು. ಸಂಕೀರ‍್ಣ ವಾಕ್ಯಗಳಲ್ಲಿ ಕೆಲವೊಮ್ಮೆ ಇಂತ ಪೂರ‍್ಣಕ್ರಿಯಾಪದಗಳ ಬಳಕೆಯ ನಂತರವೂ ವಾಕ್ಯವನ್ನು ಎಳೆಯಲು ಸಾದ್ಯವಿರುತ್ತದೆ. ವಾಕ್ಯಗಳನ್ನು ಜೋಡಿಸುವ ಕೆಲಸ ಮಾಡುವ ವಾಕ್ಯಸಂಯೋಜಕಗಳನ್ನು ಎರಡು ವಾಕ್ಯಗಳ ನಡುವೆ ತರುವ ಮೂಲಕ ವಾಕ್ಯದ ಗಡಿಯನ್ನು ವಿಸ್ತರಿಸಿ ಸಂಕೀರ‍್ಣವಾಕ್ಯವಾಗಿಸಲು ಸಾದ್ಯವಿರುತ್ತದೆ.

ಇನ್ನು, ಅಪೂರ‍್ಣ ಕ್ರಿಯಾಪದದ ಬಗೆಗೆ ಒಂದೆರಡು ಮಾತಾಡೋಣ. ಈ ಮೇಲೆ ಹೇಳಿದಂತೆ ಕರ‍್ತ್ರುವಿನ ಲಿಂಗ-ವಚನಗಳನ್ನು ಪಡೆದುಕೊಳ್ಳುವುದು ಪೂರ‍್ಣಕ್ರಿಯಾಪದ. ಒಂದು ಸರಳ ವಾಕ್ಯದಲ್ಲಿ ಸಾಮಾನ್ಯವಾಗಿ ಒಂದೆ ಕ್ರಿಯಾಪದ ಇರುತ್ತದೆ. ಹಾಗಾಗಿ ಈ ವಾಕ್ಯದಲ್ಲಿ ಒಂದೆ ಕ್ರಿಯಾಪದ ಇರುತ್ತದೆ. ಆದರೆ ವಾಕ್ಯವನ್ನು ಸಂಯುಕ್ತ ವಾಕ್ಯ ಮತ್ತು ಸಂಕೀರ‍್ಣ ವಾಕ್ಯ ಮಾಡುವಾಗ ಒಂದಕ್ಕಿಂತ ಹೆಚ್ಚು ಕ್ರಿಯಾಪದಗಳು ಬಳಕೆಯಾಗಬಹುದು. ಒಂದು ವಾಕ್ಯದಲ್ಲಿ ಒಂದಕ್ಕಿಂತ ಹೆಚ್ಚಿನ ಕ್ರಿಯಾಪದಗಳು ಬಳಕೆಯಾದರೆ ಅದರಲ್ಲಿ ವಾಕ್ಯದ ಕೊನೆಯಲ್ಲಿ ಬಳಕೆಯಾಗುವ ಕ್ರಿಯಾಪದ ಕರ‍್ತ್ರುವಿನ ಲಿಂಗ-ವಚನಗಳನ್ನು ಪಡೆದುಕೊಳ್ಳುತ್ತದೆ. ಆದರೆ, ವಾಕ್ಯದ ನಡುವೆ ಬರುವ ಕ್ರಿಯಾಪದವು ಇವುಗಳನ್ನು ಪಡೆದುಕೊಳ್ಳುವುದಿಲ್ಲ. ಇಲ್ಲಿ ಒಂದು ಸಂಯುಕ್ತ ವಾಕ್ಯವನ್ನು ಕೊಟ್ಟಿದೆ.

ಅವಳು ಕಚೇರಿಗೆ ಹೋಗಿ ಕೆಲಸ ಮಾಡಿದಳು

ಈ ವಾಕ್ಯದಲ್ಲಿ ಎರಡು ಕ್ರಿಯಾಪದಗಳು ಇವೆ. ‘ಹೋಗು’ ಮತ್ತು ‘ಮಾಡು’. ಈ ಎರಡು ಕ್ರಿಯಾಪದಗಳು ಯಾವ ರೂಪದಲ್ಲಿ ಬಳಕೆಯಾಗಿವೆ ಎನ್ನುವುದನ್ನು ತುಸು ಗಮನಿಸಬೇಕು. ವಾಕ್ಯದಲ್ಲಿ ಕೊನೆಯಲ್ಲಿ ಬರುವ ‘ಮಾಡು’ ಎಂಬ ಕ್ರಿಯಾಪದವು ‘ಮಾಡಿದಳು’ ಎಂಬ ರೂಪದಲ್ಲಿ ಬಳಕೆಯಾಗಿದೆ. ಇದರಲ್ಲಿ ವಾಕ್ಯದ ಕರ‍್ತ್ರುವಿನ ಲಿಂಗ-ವಚನಗಳನ್ನು ಹೇಳುವ ಪ್ರತ್ಯಯ –ಅಳು ಎಂಬುದು ಸೇರಿದೆ. ಹಾಗಾಗಿ ಇದು ಪೂರ‍್ಣಕ್ರಿಯಾಪದ ಎನಿಸಿಕೊಳ್ಳುತ್ತದೆ. ಆದರೆ, ವಾಕ್ಯದಲ್ಲಿ ಮೊದಲಿಗೆ ಬಂದಿರುವ ‘ಹೋಗು’ ಎಂಬ ಕ್ರಿಯಾಪದ ‘ಹೋಗಿ’ ಎಂಬ ರೂಪದಲ್ಲಿ ಬಳಕೆಯಾಗಿದೆ. ಇದು ಕರ‍್ತ್ರುವಿನ ಗುಣಲಕ್ಶಣಗಳನ್ನು ಪಡೆದುಕೊಂಡಿಲ್ಲ. ಬದಲಿಗೆ ‘-ಇ’ ಎಂಬ ರೂಪವೊಂದು ಬಳಕೆಯಾಗಿದೆ. ಇದನ್ನು ನ್ಯೂನರೂಪ ಎಂದು ಕರೆಯುತ್ತಾರೆ. ಇದನ್ನ ಬೂತನ್ಯೂನರೂಪ ಎಂದೂ ಕರೆಯುತ್ತಾರೆ. ಕ್ರಿಯಾಪದವೊಂದು ಈ ನ್ಯೂನ ರೂಪವನ್ನು ಪಡೆದುಕೊಂಡು ಬಳಕೆಯಾದಾಗ ವಾಕ್ಯವು ಇನ್ನೂ ಪೂರ‍್ಣವಾಗಿಲ್ಲ ಎಂಬುದು ಗೊತ್ತಾಗುತ್ತದೆ. ಇನ್ನೂ ಏನೋ ಕೆಲಸ ಇದೆ ಎಂಬುದನ್ನು ಇದು ಹೇಳುತ್ತದೆ. ಮೇಲೆ ಕೊಟ್ಟಿರುವ ವಾಕ್ಯದ ಉದಾಹರಣೆಯನ್ನೆ ಮಾತಿಗೆ ತೆಗೆದುಕೊಳ್ಳುವುದಾದರೆ, ‘ಅವಳು ಕಚೇರಿಗೆ ಹೋಗಿ’ ಎಂದು ಹೇಳಿದರೆ ಅಲ್ಲಿ ಕೆಲಸ ಇನ್ನೂ ಮುಗಿದಿಲ್ಲ, ಪೂರ‍್ಣಗೊಂಡಿಲ್ಲ ಎಂಬುದು ಗೊತ್ತಾಗುತ್ತದೆ, ಅಶ್ಟು ಮಾತ್ರವಲ್ಲದೆ ಅವಳು ಕಚೇರಿಗೆ ಹೋದ ನಂತರ ಇನ್ನೂ ಯಾವುದೊ ಕೆಲಸ ಇದೆ, ಇನ್ನೂ ಏನೊ ಕೆಲಸ ಇದೆ ಎಂಬುದನ್ನು ಹೇಳುತ್ತದೆ. ಇದನ್ನು ಅಪೂರ‍್ಣಕ್ರಿಯಾಪದ ಎಂದು ಕರೆಯಲಾಗುತ್ತದೆ.

ಬಾಶೆಯಲ್ಲಿ ವಾಕ್ಯಗಳನ್ನು ವಿಸ್ತರಿಸಲು, ದೊಡ್ಡದಾಗಿಸಲು ಬಾಶೆಯಲ್ಲಿ ಕಂಡುಬರುವ ತಂತ್ರಗಳಲ್ಲಿ ಇದು ಒಂದು. ಜಗತ್ತಿನ ವಿವಿದ ಬಾಶೆಗಳು ವಿಬಿನ್ನವಾದ ತಂತ್ರವನ್ನು ಈ ಕೆಲಸಕ್ಕೆ ಹೊಂದಿರುತ್ತವೆ.

ಸಾಮಾನ್ಯವಾಗಿ ಪೂರ‍್ಣಕ್ರಿಯಾಪದದ ಮೇಲೆ ಲಿಂಗ-ವಚನ ಪ್ರತ್ಯಯಗಳು ಬರುವುದನ್ನು ಮಾತಾಡಿದೆವು. ಆದರೆ, ಕಾಲ ಪ್ರತ್ಯಯ ಬರುವುದೆ ಎಂಬುದನ್ನು ಮಾತಾಡಲಿಲ್ಲ. ಒಂದು ಸಾಮಾನ್ಯ ತಿಳುವಳಿಕೆಯಂತೆ ಅಪೂರ‍್ಣ ಕ್ರಿಯಾಪದದ ಮೇಲೆ ಕಾಲ ಪ್ರತ್ಯಯ ಇರುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ, ಸೂಕ್ಶ್ಮ ಅದ್ಯಯನಗಳು ಇನ್ನೂ ಹೆಚ್ಚಿನ ಸಮರ್ಪಕ ವಿವರಣೆಯನ್ನು ಕೊಡಬಹುದು. ಅಪೂರ‍್ಣಕ್ರಿಯಾಪದದ ಮೇಲೆ ಕಾಲದ ಬಳಕೆ ಆಗಿಲ್ಲದಿರುವುದನ್ನು ಈಗ ನೋಡಬಹುದು.

ಅವಳು ನಿನ್ನೆ ಕಚೇರಿಗೆ ಹೋಗಿ ಕೆಲಸ ಮಾಡಿದಳು
ಅವಳು ನಾಳೆ ಕಚೇರಿಗೆ ಹೋಗಿ ಕೆಲಸ ಮಾಡುವಳು

ಈ ಮೇಲೆ ಇರುವ ಎರಡು ವಾಕ್ಯಗಳಲ್ಲಿ ಮೊದಲನೆಯದು ಬೂತಕಾಲದಲ್ಲಿ ಇದ್ದರೆ ಎರಡನೆ ವಾಕ್ಯ ಬವಿಶತ್ ಕಾಲದಲ್ಲಿ ಇದೆ. ಅದಕ್ಕೆ ತಕ್ಕಂತೆ ಎರಡೂ ವಾಕ್ಯಗಳಲ್ಲಿ ಪೂರ‍್ಣಕ್ರಿಯಾಪದಗಳು ಬಿನ್ನ ರೂಪದಲ್ಲಿ ಬಳಕೆಯಾಗಿವೆ. ಆದರೆ, ಅಪೂರ‍್ಣಕ್ರಿಯಾಪದಗಳು ಒಂದೆ ರೂಪದಲ್ಲಿ ಬಳಕೆಯಾಗಿರುವುದನ್ನು ಕಾಣಬಹುದು. ಅಂದರೆ, ಅಪೂರ‍್ಣಕ್ರಿಯಾಪದ ಕಾಲವ್ಯತ್ಯಾಸವನ್ನು ಮಾಡುವುದಿಲ್ಲ ಎಂಬುದನ್ನು ಕಾಣಬಹುದು. ಇಲ್ಲಿ ಗೊತ್ತಾಗುವ ಒಂದು ವಿಚಾರ ಎಂದರೆ ಒಂದು ವಾಕ್ಯದಲ್ಲಿ ಇರುವ ಎರಡು ಕ್ರಿಯೆಗಳಲ್ಲಿ ಒಂದು ಕೆಲಸ ಮೊದಲು ನಡೆದು ಆನಂತರ ಇನ್ನೊಂದು ಕೆಲಸ ನಡೆಯುತ್ತದೆ ಎಂಬುದು ಸ್ಪಶ್ಟವಾಗುತ್ತದೆ. ಎರಡೂ ಕೆಲಸಗಳು ಒಟ್ಟೊಟ್ಟಿಗೆ ನಡೆಯುವಾಗ -ಉತ್ತಾ ಎಂಬ ರೂಪವನ್ನು ಬಳಸಲಾಗುತ್ತದೆ. ಕೆಳಗೆ ಒಂದು ವಾಕ್ಯವನ್ನು ನೋಡಿ

ಅವಳು ಕೆಲಸ ಮಾಡುತ್ತಾ ನಡೆದಳು
ಇಲ್ಲಿ ಮಾಡುವ ಕೆಲಸ ಮತ್ತು ನಡೆಯುವ ಕೆಲಸ ಒಟ್ಟೊಟ್ಟಿಗೆ ನಡೆಯುತ್ತಿವೆ.

ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ

ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾ

MORE NEWS

ಅಕಟಕಟಾ ಎರಡು ಸಾವಿರದಾ ಎಂಟುನೂರು ಸೆಕ್ಸ್ ವಿಡಿಯೋಗಳಂತೆ!?

10-05-2024 ಬೆಂಗಳೂರು

"ವಿಷಯ ಏನೆಂದರೆ ಬಯಲಿಗೆ ಬಂದುದು ಮತ್ತು ಮೂರು ಅತ್ಯಾಚಾರದ ಎಫ್. ಐ. ಆರ್. ಪ್ರಕರಣಗಳು ದಾಖಲೆ ಆಗಿರುವುದು. ಹಾಸನ ಗ...

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...