ಪ್ರತಿ ಪದಕೂ ಒಂದು ಚರಿತೆ ಇದೆ, ಮನುಶ್ಯರಿಗೆ ಮಾತ್ರವಲ್ಲ

Date: 31-01-2024

Location: ಬೆಂಗಳೂರು


"‘ಬರ‍್ದುಂಕು’ ಎನ್ನುವುದು ‘ಬದುಕು’ ಎನ್ನುವುದರ ಹಳಗನ್ನಡದ ರೂಪ. ಈಗ ಈ ಪದದ ರಚನೆಯನ್ನು ನೋಡೋಣ. ಬರ‍್ದ್+ಙ್ಕು. ಹೀಗೆ ಬರ‍್ದ್+ಙ್ಕು/ಇಲ>ಬರ‍್ದುಂಕು/ಬರ‍್ದಿಲ ಎಂದಾಗುತ್ತದೆ. ಹಾಗಾದರೆ, ‘ಬದುಕು’ ಎಂದರೆ ಜೀವ ಇರುವುದು ಎಂದು ಅರ‍್ತವಾಗುತ್ತದೆ. ಬದುಕು ಎಂದರೆ ಜೀವ ಎಂದೂ ಅರ‍್ತ ಇದೆ," ಎನ್ನುತ್ತಾರೆ ಬಸವರಾಜ ಕೋಡಗುಂಟಿ. ಅವರು ತಮ್ಮ 'ತೊಡೆಯಬಾರದ ಲಿಪಿಯ ಬರೆಯಬಾರದು' ಅಂಕಣದಲ್ಲಿ ‘ಪ್ರತಿ ಪದಕೂ ಒಂದು ಚರಿತೆ ಇದೆ, ಮನುಶ್ಯರಿಗೆ ಮಾತ್ರವಲ್ಲ’ ಕುರಿತು ವಿಶ್ಲೇಷಿಸಿದ್ದಾರೆ.

ಗಾಂದಿ, ಅಂಬೇಡ್ಕರ್, ಬುದ್ದ, ಪಯಿಗಂಬರ್, ಕ್ರಿಸ್ತ ಹೀಗೆ ದೊಡ್ಡದೊಡ್ಡವರಿಗೆ ಒಂದು ಚರಿತ್ರೆ ಇದೆ ಅನ್ನೋದು ಸಾಮಾನ್ಯ ಮಾತು. ನಮ್ಮ ನಮ್ಮ ಬದುಕಿನಲ್ಲಿ ನಮ್ಮೂರಿನಲ್ಲಿ ದೊಡ್ಡಮನುಶ್ಯರಾಗಿ ಬದುಕಿದವರು ಮೊದಲಾಗಿ ಬಹಳರಿಗೆ ಹೀಗೆ ಚರಿತೆ ಇರುವುದನ್ನು ನಾವು ಮಾತನಾಡುತ್ತೇವೆ. ಆದರೆ, ಈ ಬರವಣಿಗೆಯಲ್ಲಿ ನಾವು ಬದುಕಿನಲ್ಲಿ ಬಳಸುವ ಪದಗಳಿಗೆ ಚರಿತೆ ಇದೆ ಎಂದು ತುಸು ಮಾತನಾಡುತ್ತಿದ್ದೇನೆ. ಇದೇನು ವಿಚಿತ್ರ ಎನಿಸಬಹುದು. ನಾವು ಯೋಚಿಸದೆ ಇರುವಂತದ್ದು, ನಮಗೆ ಗೊತ್ತಿಲ್ಲದೆ ಇರುವಂತದ್ದು ಮೊದಲಿಗೆ ವಿಚಿತ್ರವೆ ಅನಿಸುತ್ತದೆ, ಆನಂತರ ಸಚಿತ್ರವಾಗಿಬಿಡುತ್ತದೆ. ಇರಲಿ. ಬನ್ನಿ, ಪದಗಳ ಚರಿತ್ರೆಯನ್ನು ಅರಿತುಕೊಳ್ಳೋಣ.

ಬದಲಾವಣೆ ಎನ್ನವುದು ಬಾಶೆಯ ಮೂಲಬೂತ ಲಕ್ಶಣ, ಬಾಶೆ ನಿರಂತರವಾಗಿ ಬದಲಾಗುತ್ತಿರುತ್ತದೆ. ಬಾಶೆ ಬದಲಾಗುತ್ತದೆ ಎಂದರೆ ಏನು? ಬಾಶೆ ಎನ್ನುವುದೆ ಒಂದು ರೂಪವಲ್ಲ, ಅದು ಹಲವು ರಚನೆಗಳು ಸೇರಿಕೊಂಡು ಆಗಿರುವ ರೂಪವೆ ಹೊರತು ಅದುವೆ ರೂಪವಲ್ಲ. ಹಾಗಾಗಿ ಬಾಶೆ ಬದಲಾವಣೆ ಎಂದು ಸಹಜವಾಗಿ ಅದರೊಳಗೆ ಹೆಣೆದುಕೊಂಡಿರುವ ಪ್ರತಿಯೊಂದು ರಚನೆಯ ಮತ್ತು ಆ ಪ್ರತಿ ರಚನೆಯ ಒಳಗೆ ಇರುವ ರೂಪಗಳ ಬದಲಾವಣೆ. ಪದ ಅಂತದೊಂದು ರೂಪ. ಪದವು ಬದಲಾಗುತ್ತಲೆ ಇರುತ್ತದೆ. ಬಾಶೆಯ ಬದಲಾವಣೆಯನ್ನು ಮುಕ್ಯವಾಗಿ ಹಿಡಿಯುತ್ತದೆ. ಬಾಶೆಯಲ್ಲಿ ಪದಗಳ ರೂಪದ ಮತ್ತು ಅರ‍್ತದ ಹಾಗೆಯೆ ಬಳಕೆಯ ಆಯಾಮದ, ವಲಯದ ಬದಲಾವಣೆ ನಿರಂತರ ನಡೆಯುತ್ತಲೆ ಇರುತ್ತದೆ. ಇಲ್ಲಿ ಒಂದೆರಡು ಪದಗಳ ಬಿನ್ನವಾದ ಚರಿತ್ರೆಯನ್ನು ಕುರಿತು ಇಲ್ಲಿ ತುಸು ಮಾತನಾಡಲಾಗುವುದು.

‘ಬದುಕು’ ಎಂಬ ಶಬ್ದವನ್ನು ತೆಗೆದುಕೊಂಡು ಚೂರು ಮಾತಾಡೋಣ. ‘ಬದುಕು’ ಎಂಬುದು ಈಗ ಒಂದು ನಾಮಪದ. ಈ ಪದ ಮೂರಕ್ಕರದ ಪದವಾಗಿರುವುದರಿಂದ ಸಹಜವಾಗಿ ಒಂದು ರಚನೆಯಾಗಿರಬೇಕು. ಇದರ ರಚನೆಯನ್ನು ಈಗ ನೋಡೋಣ. ಕೇಶಿರಾಜ ಒಂದೆಡೆ ಬರ‍್ದಿಲಮೆಂಬುದು ಸಗ್ಗಕ್ಕೆ ಪೆಸರ್ ಎಂದು ಹೇಳುತ್ತಾನೆ. ಇಲ್ಲಿ ‘ಬರ‍್ದಿಲ’ ಎಂಬ ಶಬ್ದದ ಅರ‍್ತವು ‘ಸಗ್ಗ-ಸ್ವರ‍್ಗ’ ಎಂದು ಹೇಳುತ್ತಾನೆ. ಪದದ ರಚನೆಯು ಈ ಕೆಳಗಿನಂತೆ ಇದೆ,

ಬರ‍್ದ್+ಇಲ=ಬರ‍್ದಿಲ

ಇಲ್ಲಿ ‘ಇಲ’ ಎನ್ನುವುದು ನಕಾರಾತ್ಮಕ, ನಿಶೇದಾತ್ಮಕ. ‘ಬರ‍್ದ್’ ಎನ್ನುವುದು ಇಲ್ಲದ್ದು ಸಗ್ಗ ಎಂಬ ಅರ‍್ತ ಬರುತ್ತದೆ. ಹಾಗಾದರೆ, ‘ಬರ‍್ದ್’ ಇಲ್ಲದ್ದು ಸಗ್ಗ, ಎಂದಾದರೆ ‘ಬರ‍್ದ್’ ಎಂದರೇನು ಎಂಬ ಪ್ರಶ್ನೆ ಬರುತ್ತದೆ. ‘ಬರ‍್ದ್’ ಎಂದರೆ ‘ಜೀವ’. ಜೀವ ಇಲ್ಲದ್ದು ಸಗ್ಗ. ಇದೊಂದು ಅದುಬುತ ಪದವಾಯಿತು. ಹಾಗಾದರೆ, ಜೀವ ಇರುವುದು ಈ ನೆಲ ಎಂದಾಗುತ್ತದೆ. ಹಳಗನ್ನಡದಲ್ಲಿ ‘ಬದುಕು’ ಪದ ಹೇಗಿದ್ದಿತು ಎನ್ನುವುದನ್ನು ನೋಡಿದಾಗ ಈ ಮೇಲೆ ಹೇಳಿದ ವಿಚಾರಕ್ಕೆ ಬೆಂಬಲ ಸಿಗುತ್ತದೆ.

‘ಬರ‍್ದುಂಕು’ ಎನ್ನುವುದು ‘ಬದುಕು’ ಎನ್ನುವುದರ ಹಳಗನ್ನಡದ ರೂಪ. ಈಗ ಈ ಪದದ ರಚನೆಯನ್ನು ನೋಡೋಣ. ಬರ‍್ದ್+ಙ್ಕು. ಹೀಗೆ ಬರ‍್ದ್+ಙ್ಕು/ಇಲ>ಬರ‍್ದುಂಕು/ಬರ‍್ದಿಲ ಎಂದಾಗುತ್ತದೆ. ಹಾಗಾದರೆ, ‘ಬದುಕು’ ಎಂದರೆ ಜೀವ ಇರುವುದು ಎಂದು ಅರ‍್ತವಾಗುತ್ತದೆ. ಬದುಕು ಎಂದರೆ ಜೀವ ಎಂದೂ ಅರ‍್ತ ಇದೆ. ಈ ಬಳಕೆಗಳನ್ನು ನೋಡಿ, ಅವರು ಬದುಕಿದ್ದಾರೆ. ಇದರಲ್ಲಿ ಅವರಿಗೆ ಜೀವ ಇದೆ ಎಂಬ ಅರ‍್ತ. ಪ್ರೀತಿಗೆ ಬದುಕಬೇಕು. ಇದರಲ್ಲಿ ‘ಜೀವ’ ಎಂಬ ಅರ‍್ತ ಇದೆ, ಜೀವಿಸಬೇಕು ಎಂಬುದೂ ಅದರ ಅರ‍್ತ. ಅವರಿಗೊಂದು ಬದುಕು ಬೇಕು ಎಂಬ ಈ ವಾಕ್ಯದಲ್ಲಿ ‘ಜೀವನ’ ಎಂಬ ಅರ‍್ತ ಇದೆ. ಹಾಗಾದರೆ, ‘ಜೀವ’, ‘ಜೀವಿಸಿರುವುದು’, ‘ಜೀವನ’ ಎಂಬ ಅರ‍್ತ ಈ ಪದಕ್ಕೆ ಇರುವುದು ತಿಳಿಯುತ್ತದೆ. ಹಾಗಾದರೆ, ಬರ‍್ದ್ ಎನ್ನುವುದು ಜೀವ, ಬರ‍್ದುಂಕು ಎಂದರೆ ಜೀವನ ಮತ್ತು ಜೀವಿಸಿರುವುದು ಕೂಡ. ಇನ್ನೂ ಮುಂದುವರೆದು ಈ ಪದದ ವಿಬಿನ್ನಾರ‍್ತಗಳನ್ನು ಮಾತಾಡಬಹುದು. ಮುಂದಿನ ವಾಕ್ಯಗಳನ್ನು ಗಮನಿಸಿ, ‘ಅವನು ನನ್ನ ಬದುಕು’. ಈ ವಾಕ್ಯದಲ್ಲಿ ವಾಸ್ತವದಲ್ಲಿ ಈ ಮೇಲೆ ಮಾತಾಡಿದ ‘ಜೀವನ’ ಎಂಬ ಅರ‍್ತವೆ ಬರುತ್ತದೆ, ನಿಜ. ಆದರೆ, ಈ ಪದದಲ್ಲಿ ‘ಬದುಕು’ ಎನ್ನುವ ಶಬ್ದ ‘ಎಲ್ಲವೂ’, ‘ಸರ‍್ವಸ್ವ’ ಎಂಬ ಅರ‍್ತವನ್ನು ದ್ವನಿಸುತ್ತಿದೆ. ಮುಂದುವರೆದು ನನ್ನ ಬದುಕಿನ, ನನ್ನ ಜೀವನದ ‘ಅವಶ್ಯಕತೆ’, ‘ಅನಿವಾರ‍್ಯತೆ’ ಎಂದೆಲ್ಲ ಅರ‍್ತಸಾದ್ಯತೆ ಪಡೆದುಕೊಂಡಿದೆ. ಇದನ್ನು ಇಲ್ಲಿ ಹೇಳುವುದಕ್ಕೆ ಮುಕ್ಯವಾದ ಕಾರಣವೆಂದರೆ ಉತ್ತರ ಕರ‍್ನಾಟಕದಲ್ಲಿ ಆಸ್ತಿಗೆ, ಬಂಗಾರಕ್ಕೆ, ಬಂಗಾರದ ಒಡವೆಗಳಿಗೆ, ಕುರಿ ಕಾಯುವವರು ಕುರಿಗಳಿಗೆ, ಬದುಕು ಎಂಬ ಪದವನ್ನು ಬಳಸುತ್ತಾರೆ. ಅದು ಮಾತ್ರವಲ್ಲದೆ ದುಡಿಮೆಗೆ, ದುಡಿಮೆಗೆ ಪೂರಕವಾದ ಸಾದನಗಳಿಗೆ, ಅಂದರೆ ಕಾಯಿಪಲ್ಲೆ ಮಾರುವವರಿಗೆ ಅದಕ್ಕೆ ಅವಶ್ಯವಾದ ತೂಗುವ ತಕ್ಕಡಿ-ಕಲ್ಲುಗಳು ಬದುಕು. ಹೀಗೆ ವಿವಿದ ನೆಲೆಗಳಲ್ಲಿ ಈ ಪದ ವಿಸ್ತಾರವಾಗಿ ಬೆಳೆಯುತ್ತ ಹೋಗುತ್ತದೆ. ಹೀಗೆ ಪ್ರತಿಯೊಂದು ಪದವೂ ಬೆಳೆಯುತ್ತದೆ, ಪ್ರತಿಯೊಂದು ಪದದ ಬೆಳವಣಿಗೆಯೂ ವಿಬಿನ್ನವಾಗಿರುತ್ತದೆ. ಹಾಗಾಗಿ ಪ್ರತಿಯೊಂದು ಪದಕ್ಕೂ ಒಂದು ಚರಿತ್ರೆ ಇರುತ್ತದೆ.

‘ಹಾದರ’ದ ಪದವೊಂದನ್ನು ಒಂದೆರಡು ಸಾಲಲ್ಲಿ ಮಾತಾಡಬಹುದು. ಬಹು ಕುತೂಹಲದ ಚರಿತ್ರೆ ಈ ಪದದ್ದು, ಅದಕೆ. ‘ಪಾತ್ರ’ ಎಂಬುದು ಪದ. ಕುಟುಂಬದಲ್ಲಿ, ಸಮಾಜದ ಯಾವುದೆ ಗಟನೆಯಲ್ಲಿ ಒಂದು ‘ಪಾತ್ರ’ವಾಗಬಹುದು.

ಮುಂದುವರೆದು ಈ ಪದ ಆಟಗಳಲ್ಲಿ, ನಾಟಕಗಳಲ್ಲಿ ಬರುವ ‘ಪಾತ್ರ’ವೂ ಆಗಿ ಬೆಳೆಯಿತು. ಮುಂದೆ ಇದು ಸಾಹಿತ್ಯದಲ್ಲಿ ಬರುವ ‘ಪಾತ್ರ’ವಾಯಿತು. ಇನ್ನು ಮುಂದೆ ಈ ಪದ ‘ನಟನೆ’ ಎಂದಾಯಿತು. ಈಗ ‘ಪಾತ್ರ ಮಾಡುವವರು’ ಎಂಬುದು ಬೆಳೆಯಿತು. ಮುಂದೆ 'ನಟನೆ, ಕುಣಿತ ಮೊದಲಾದವುಗಳಲ್ಲಿ ಮನುಶ್ಯ ಬಣ್ಣ ಹಚ್ಚಿಕೊಂಡು ಕುಣಿಯತೊಡಗಿದಾಗ ‘ಬಣ್ಣ ಹಾಕುವುದು’, ‘ಪಾತ್ರ ಹಾಕುವುದು’ ಎಂದಾಯಿತು. ಇದಕ್ಕೆ ‘ಸೋಗು’ ಎಂಬ ಇನ್ನೊಂದು ಪದವೂ ಕನ್ನಡದಲ್ಲಿ ಬಳಕೆಯಲ್ಲಿದೆ. ಬಣ್ಣ ಹಾಕಿ ರಂಗದ ಮೇಲೆ ಬರುವುದು ‘ಪಾತ್ರ’. ಬದುಕಿನಲ್ಲಿ, ಸಮಾಜದಲ್ಲಿ ಅಸಹಜವಾಗಿ ನಡೆದುಕೊಳ್ಳುವುದಕ್ಕೂ, ಮುಚ್ಚಿಟ್ಟು ನಡೆಯುವುದಕ್ಕೂ ‘ಪಾತ್ರ ಮಾಡ್ತಾರೆ’ ಅಂದರೆ ‘ನಾಟಕ’ ಮಾಡ್ತಾರೆ’ ಅನ್ನೊ ಅರ‍್ತ ಬೆಳೆಯಿತು. ನಮ್ಮ ಸಮಾಜದಲ್ಲಿ ಪಾತ್ರದವರನ್ನೆ ಎಲ್ಲೆಡೆ ನೋಡುತ್ತೇವೆ. ಹೀಗೆ ಬಣ್ಣ ಹಾಕುವುದು ಪಾತ್ರವಾಯಿತು. ಮುಂದುವರೆದು ಬಣ್ಣಬಣ್ಣದ ಮಯ್ಯಿ ಹೊತ್ತು ಹಾರುವ ‘ಪಾತರಗಿತ್ತಿ’ ಬಂದಿತು. ಹುಳುವೊಂದಕ್ಕೆ ಈ ಹೆಸರು ಬಂದಿತು. ಹೀಗಿದ್ದ ಈ ಪದ, ಬಾಶೆಯಲ್ಲಿ ನಡೆದ ಕೆಲವು ನಿಯತ ಬದಲಾವಣೆಗಳಲ್ಲಿ ಬದಲಾಗುತ್ತ ಬರುತ್ತದೆ. ವಿಜಾತಿ ಒತ್ತಕ್ಕರಗಳನ್ನು ಒಡೆಯುವುದು ಕನ್ನಡದಲ್ಲಿ ಸಹಜ. ಹಾಗಾಗಿ ‘ಪಾತ್ರ’ ಇದು ‘ಪಾತರ’ ಎಂದಾಗಿರುತ್ತದೆ. ಮುಂದೆ ಪ್>ಹ್ ಬೆಳವಣಿಗೆಯಲ್ಲಿ ‘ಪಾತರ’ ‘ಹಾದರ’ ಎಂದಾಯಿತು. ತ್>ದ್ ಬದಲಾವಣೆ, ಗೋಶ>ಅಗೋಶ ಬೆಳವಣಿಗೆ ಕನ್ನಡದಲ್ಲಿ ಸಹಜ. ಇದೆ ದಾರಿಯಲ್ಲಿ ‘ಪಾತರಗಿತ್ತಿ’>‘ಹಾದರಗಿತ್ತಿ’ ಎಂದಾಯಿತು. ಸಮಾಜ ಗಂಡುಕೇಂದ್ರಿತವಾಗಿ ಬೆಳೆಯುತ್ತಿದ್ದಂತೆ ಆಟದಲ್ಲಿ, ನಾಟಕದಲ್ಲಿ ಪಾತ್ರ ಮಾಡುವ ಹೆಂಗಸರನ್ನು ಬೇರೆ ಅನೀತಿ ಕೆಲಸಕ್ಕೆ ಬಳಸಿಕೊಳ್ಳತೊಡಗಿತು. ಈಗ ಹೊಸತಾಗಿ ಬೆಳೆದ ಈ ಅನೀತಿಗೆ ಪದ ಬೇಕಾಗಿ, ‘ಹಾದರ’ ಆ ಜಾಗವನ್ನು ತುಂಬಿತು. ಮುಂದೆ ಪಾತ್ರ ಮಾಡುವ ‘ಪಾತ್ರದಾರಿ’ ಬೇರೆಯಾಗಿ ಬದಲಾದ ಅನೀತಿಯ ಕೆಲಸವಾಗಿ ಬೆಳೆದ ಹಾದರ ಮಾಡುವ ‘ಹಾದರಗಿತ್ತಿ’ ಬೇರೆಯಾಯಿತು. 'ಪಾತರಗಿತ್ತಿ' ಅದಾಗಲೆ ಬೇರೆಯಾಗಿದ್ದಿತು.

ಅಕ್ಕಮಹಾದೇವಿ ‘ಹಾದರವನಾಡುವೆನು ಹರನೊಡನೆ’ ಎಂದಾಗ ಆಕೆಯ ಕಾಲದಲ್ಲಿ ಯಾವ ಅರ‍್ತವನ್ನು ಈ ಪದ ಹೊಂದಿದ್ದಿತು, ಅಕ್ಕಮಹಾದೇವಿಯ ವಚನದಲ್ಲಿ ಈ ಪದ ಯಾವ ಅರ‍್ತದೊಡನೆ ಬಳಕೆಯಾಗಿದ್ದಿತು ನಮಗೆ ಗೊತ್ತಿಲ್ಲ. ಆ ಪದದ ಇಂದಿನ ಅರ‍್ತದಲ್ಲಿಯೆ ಆ ಪದವನ್ನು ಅರ‍್ತ ಮಾಡಿಕೊಂಡು ಸೋಲುವ ಸ್ತಿತಿ ಇಂದಿನ ಓದು ಮತ್ತು ಇಂದಿನ ವಿದ್ವತ್ತಿನ ಸಮಸ್ಯೆಯಾಗಿರಬೇಕು. ಇರಲಿ, ‘ಹರನೊಡನೆ ಹಾದರವನಾಡುವ’.

ಈ ಅಂಕಣದ ಹಿಂದಿನ ಬರೆಹಗಳು:
ಹೊಲದಲ್ಲಿ ಕನ್ನಡ ಮತ್ತು ಇತಿಹಾಸದ ಅರಿವು
ಅಡುಗೆಮನೆಯ ಬಾಶಿಕ ಜಗತ್ತು ಇಲ್ಲವೆ ಅಡುಗೆಮನೆ ಕನ್ನಡ
ಪದಕೋಶದ ಬದುಕು
ಕನ್ನಡ ಪದಕೋಶ ಎಶ್ಟು ದೊಡ್ಡದು?
ಪದಕೋಶ: ಶಬ್ದಪಾರಮಾರ‍್ಗಮಶಕ್ಯಂ
ಕನ್ನಡ ಒಳನುಡಿಗಳು ಹೇಗೆ ಬಿನ್ನ?
ಕನ್ನಡ ಒಳನುಡಿಗಳ ಪಸರಿಕೆ ಅರಿಯುವುದು ಹೇಗೆ?

ಕನ್ನಡ ಒಳನುಡಿಗಳು ಎಶ್ಟು ಹಳೆಯವು?
ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ

ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾ

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...