ಅಜ್ಞಾತ ಮಹಾಪುರುಷ ಅಲಿಗೆ ಪುಟ್ಟಯ್ಯನಾಯಕ

Author : ಬಿ.ಆರ್. ಸತ್ಯನಾರಾಯಣ

Pages 180

₹ 150.00




Year of Publication: 2012
Published by: ದೇಸಿ ಪುಸ್ತಕ
Address: 121, 13ನೆ ಮುಖ್ಯರಸ್ತೆ, ಎಂ.ಸಿ. ಲೇಓಟ್‌, ವಿಜಯನಗರ, ಬೆಂಗಳೂರು-40
Phone: 9845096668

Synopsys

ಕೃಷಿಯಲ್ಲಿ ವಿಭಿನ್ನ ಪ್ರಯೋಗ ಮಾಡುವುದರಲ್ಲಿ ಆಸಕ್ತಿ ಹೊಂದಿದ್ದ ಅಲಿಗೆ ಪುಟ್ಟಯ್ಯ ನಾಯಕರು ಸಾಹಿತ್ಯದಲ್ಲಿಯೂ ವಿಶೇಷ ಆಸಕ್ತಿ ಹೊಂದಿದ್ದರು. ಕುವೆಂಪು ಅವರ ಹತ್ತಿರದ ಬಂಧುವಾಗಿದ್ದ ಪುಟ್ಟಯ್ಯ ನಾಯಕರ ಬಗ್ಗೆ ’ನೆನಪಿನ ದೋಣಿ’ಯಲ್ಲಿ ಸ್ಮರಿಸಿದ್ದಾರೆ. ಅಲಿಗೆ ಪುಟ್ಟಯ್ಯ ನಾಯಕ ಅವರ ಕುರಿತ ಬರಹಗಳನ್ನು ವಿ.ಎಂ. ಕುಮಾರಸ್ವಾಮಿ ಹಾಗೂ ಡಾ.ಬಿ.ಆರ್. ಸತ್ಯನಾರಾಯಣ ಅವರು ’ಅಜ್ಞಾತ ಮಹಾಪುರುಷ ಅಲಿಗೆ ಪುಟ್ಟಯ್ಯನಾಯಕ’ ಕೃತಿಯಲ್ಲಿ ಸಂಪಾದಿಸಿದ್ದಾರೆ. ಅಲಿಗೆ ಪುಟ್ಟಯ್ಯ ನಾಯಕರ ಆಪ್ತರು, ಬಂಧುಗಳು,ಸ್ನೇಹಿತರು ಸ್ಮರಿಸಿ ಬರೆದ 27 ಲೇಖನಗಳು ಈ ಪುಸ್ತಕದಲ್ಲಿವೆ.

ಕವಿ ಕುವೆಂಪು  ಅವರು ತಮ್ಮ ಆತ್ಮಕತೆ ’ನೆನಪಿನ ದೋಣಿಯಲ್ಲಿ’ ಪುಟ್ಟಯ್ಯ ನಾಯಕರ ಬಗ್ಗೆ ಮಾಡಿದ ಟಿಪ್ಪಣಿ ನಾಯಕರ ವ್ಯಕ್ತಿತ್ವ ಮತ್ತು ಮಹತ್ವವನ್ನು ಕಟ್ಟಿಕೊಡುತ್ತದೆ.

’ಅಲಿಗೆ ಪುಟ್ಟಯ್ಯನಾಯಕರು ವಿಶ್ವಾಸವಿಟ್ಟು ನನಗಾಗಿ ನಿಸ್ವಾರ್ಥ ಸೇವಾ ಪ್ರಯತ್ನ ನಡೆಸದೆ ಇದ್ದಿದ್ದರೆ, ಈ ಇಳಿವಯಸ್ಸಿನಲ್ಲಿ ತಮ್ಮ ಸಂಸಾರದ ಕೋಟಲೆಗಳನ್ನೆಲ್ಲ ಬದಿಗಿಕ್ಕಿ ಕಾಡುಮೇಡುಗಳ ಕಾಲುದಾರಿಯಲ್ಲಿ ನಡೆದು ಹೋಗಿ ನೆಂಟರ ಮನೆಗಳಲ್ಲಿ ಹಳೆಯ ದಪ್ತರ ಕಡತಗಳಲ್ಲಿ ಹುಡುಕಿ ತಡಕಿ ಸಂಗ್ರಹಿಸದಿದ್ದರೆ, ನಾನು ಈ ಮುಂದೆ ಬರೆಯಲಿರುವ ನನ್ನ ಜನನ ಜನನಿ ಜನಕರ ಮತ್ತು ಆ ಸಮಯ ಸಂದರ್ಭ ಸನ್ನಿವೇಶಗಳ ಕಥನ ಎಂದೆಂದಿಗೂ ಅಲಿಖಿತವಾಗಿಯೇ ಇರುತ್ತಿತ್ತು. ಈ 'ನೆನಪಿನ ದೋಣಿಯಲ್ಲಿ'ಗೆ ವಿಷಯ ಸಂಗ್ರಹ ಮಾಡುವುದರಲ್ಲಿ ನನಗೆ ಅಮೂಲ್ಯ ನೆರವಿತ್ತಿದ್ದರು. "ಶ್ರೀರಾಮಾಯಣದರ್ಶನಂ' ಮೊದಲುಗೊಂಡು ನನ್ನ ಕೃತಿಗಳನ್ನೆಲ್ಲ ಓದಿದ್ದರು. ಗಾಂಧೀಜಿಯ ಭಕ್ತರಾಗಿಯೂ ಅನೇಕ ಕರ್ಮಕ್ರಿಯೆಗಳಲ್ಲಿ ಭಾಗಿಯಾಗಿದ್ದರು. ನಿಷ್ಠಾವಂತ ಬಾದಿಧಾರಿ. ಒರಿಕೊಡಿಗೆಯಲ್ಲಿ ನಾನು ಭೂಸ್ಪರ್ಶಮಾಡಿದ್ದ ಜಾಗದಲ್ಲಿ ಒಂದು ಏನಾದರೂ ಸ್ಮಾರಕ ಸ್ಥಾಪಿಸಬೇಕೆಂಬುದು ಅವರ ಹಂಬಲವಾಗಿತ್ತು. ಮುಂದುವರಿದ ಕೃಷಿಕರಾಗಿ ಹೆಸರುವಾಸಿಯಾಗಿ ಇತರ ಒಕ್ಕಲುಮಕ್ಕಳಿಗೆ ಆದರ್ಶಪ್ರಾಯರಾಗಿ ಧೈಯವಸ್ತುವಾಗಿದ್ದರು. ಹಿಂದಿಯಲ್ಲಿಯೂ ಪಾಂಡಿತ್ಯವಿತ್ತು. ಅವರನ್ನು ಒಬ್ಬ 'ಅಜ್ಞಾತ ಮಹಾಪುರುಷ' ಎಂದು ಕರೆದರೆ ಸತ್ಯದೂರವಾಗುವುದಿಲ್ಲ. ಆದರೆ ಅವರ ನಿಧನ ಪತ್ರಿಕೆಗಳಿಗೆ ವಾರ್ತೆಯಲ್ಲ. ಅದು 'ಆಪತ್ರಿಕಾ ವಾರ್ತೆ!' ಪತ್ರಿಕೆಗಳ ಬಾಯಿಗೆ ಬಿದ್ದು ಎಂಜಲಾಗದಿರುವ ಅವರ ಬದುಕನ್ನು ಧನ್ಯವೆಂದೇ ಹೇಳಬೇಕು!’

ಪುಟ್ಟಯ್ಯ ನಾಯಕರರ ಬಾಲ್ಯ, ಸಾಂಸಾರಿಕ ಜೀವನ, ಅವರ ವ್ಯಕ್ತಿತ್ವ ಹಾಗೂ  ಅವರ ಮೇಲೆ ಬೀರಿದ ಪ್ರಭಾವ ಕುರಿತು ಲೇಖನಗಳು ವಿವರಿಸುತ್ತವೆ. ಸರಳಜೀವಿ ಹಾಗೂ ಗಾಂಧಿವಾದಿಯಾಗಿದ್ದ ನಾಯಕರಿಗೆ ಗಾಂಧೀಜಿಯವರ ಸರಳತೆ, ಸಚ್ಚಾರಿತ್ರ್ಯ, ಅಹಿಂಸಾವಾದ, ಸತ್ಯಾಗ್ರಹಗಳು ಹೊಸ ಚೈತನ್ಯ ನೀಡಿದ್ದವು. ಗಾಂಧಿ ಪ್ರಭಾವಕ್ಕೆ ಒಳಗಾಗಿದ್ದ ಅಲಿಗೆಯವರು ಸಮಾಜಸೇವೆಯೆಡೆಗೆ ಮನಸ್ಸು ಮಾಡಲು ಕಾರಣವಾಗಿತ್ತು. ಗಾಂಧಿಯವರ ಅಸ್ಪೃಶ್ಯತೆಯ ವಿರುದ್ಧದ ನಿಲುವು ನಾಯಕರು ಅಲಿಗೆಯ ಮನೆಯೊಳಗೆ ಎಲ್ಲರೂ ಮನೆಯೊಳಗೆ ಬರುವ ಅವಕಾಶ ಕಲ್ಪಿಸುವುದಕ್ಕೆ, ಸಹಪಂಕ್ತಿ ಭೋಜನಕ್ಕೆ ಕಾರಣವಾಗಿತ್ತು.
ಪ್ರಗತಿಪರ ಕೃಷಿಕರಾಗಿದ್ದ ನಾಯಕರು ಕೃಷಿಯಲ್ಲಿ ವಿಭಿನ್ನ ಪ್ರಯೋಗ ಮಾಡಿದ್ಡರು. ಆಯುರ್ವೇದವೂ ಗೊತ್ತಿದ್ದ ಅವರು ಸುಸೂತ್ರ ಪ್ರಸವಕ್ಕೆ ಮದ್ದು ಕೊಡುತ್ತಿದ್ದರು. ಹಾವು-ಚೇಳುಗಳ ಕಡಿತಕ್ಕೆ ಔಷಧಿ ನೀಡುತ್ತಿದ್ದ ಅವರು ದನಗಳಿಗೆ ಉಪದ್ರವಕಾರಿಯಾಗಿದ್ದ ಕೆಚ್ಚಲು ಬಾವು, ಜಂತುಹುಳು ಬಾಧೆ ಮುಂತಾದವುಗಳಿಗೂ ಔಷಧಿ ಕೊಡುತ್ತಿದ್ದರು.
ಎಚ್.ಸಿ. ದಯಾನಂದ, ಕೋಣೆಗದ್ದೆ ಪದ್ಮನಾಭ, ಗಣಪಯ್ಯ ನಾಯಕ, ಕೆ.ಆರ್. ದಯಾನಂದ, ರಾಜೇಶ್ವರಿ ತೇಜಸ್ವಿ, ಕಡಿದಾಳು ರಾಮಣ್ಣ, ತಾರಿಣಿ ಚಿದಾನಂದ, ವಿವೇಕಾನಂದ, ಬಿ.ಆರ್. ಸತ್ಯನಾರಾಯಣರ ಲೇಖನಗಳು ನಾಯಕರ ಬಗೆಗೆ ಅಪರೂಪದ ಮಾಹಿತಿ ನೀಡುತ್ವ್ಯತವೆ. ಅನುಬಂಧದಲ್ಲಿ ನೀಡಲಾದ ವಿವರಗಳು ಪೂರಕವಾಗಿವೆ.

About the Author

ಬಿ.ಆರ್. ಸತ್ಯನಾರಾಯಣ

ವೃತ್ತಿಯಿಂದ ಗ್ರಂಥಪಾಲಕರಾಗಿರುವ ಡಾ. ಬಿ.ಆರ್‍. ಸತ್ಯನಾರಾಯಣ ಅವರು ಪ್ರವೃತ್ತಿಯಿಂದ ಸಂಶೋಧಕ- ಲೇಖಕರೂ ಹೌದು. ಕೃಷಿಯಲ್ಲಿ ಆಸಕ್ತರಾಗಿರುವ ಸತ್ಯನಾರಾಯಣ ಅವರು ಹಳ್ಳಿ-ನಗರಗಳ ನಡುವೆ ಓಡಾಡಿದ ಅನುಭವದ ಹಿನ್ನೆಲೆಯಲ್ಲಿ ’ವೈತರಣೀ ದಡದಲ್ಲಿ (ಕವನ ಸಂಕಲನ) ಮತ್ತು ಮುಡಿ (ಕಥಾ ಸಂಕಲನ) ಪ್ರಕಟಿಸಿದ್ದಾರೆ. ಕನ್ನಡ ಛಂದಸ್ಸು: ಸಂಕ್ಷಿಪ್ತ ಪರಿಚಯ, ಕಲ್ಯಾಣದ ಚಾಲುಕ್ಯರು, ಸರಸ್ವತಿ- ವಿಸ್ಮಯ ಸಂಸ್ಕೃತಿ ಸಂಶೋಧನಾ ಕೃತಿ ರಚಿಸಿದ್ದಾರೆ. ಹಿರಿಯ ಸಂಶೋಧಕ ಹಂ.ಪ.ನಾಗರಾಜಯ್ಯ ಅವರ ಕೃತಿಗಳ ಸಾರ ಸೂಚಿ ಹೊಂದಿರುವ ’ಹಂಪನಾ ವಾಙ್ಮಯ’ ಪ್ರಕಟಿಸಿರುವ ಅವರು ಪೇಜತ್ತಾಯ ಅವರ ’ರೈತನಾಗುವ ಹಾದಿಯಲ್ಲಿ’ ಮತ್ತು ’ಕಾಗದದ ದೋಣಿ’ ಕೃತಿಗಳನ್ನು ಸಂಪಾದಕರಾಗಿ ಹೊರ ...

READ MORE

Related Books