ಎಚ್.ವೈ. ರಾಜಗೋಪಾಲ

Author : ನಟರಾಜು ಎಸ್. ಎಮ್

Pages 252

₹ 250.00




Year of Publication: 2019
Published by: ಕನ್ನಡ ಸಾಹಿತ್ಯ ರಂಗ
Address: ಯು.ಎಸ್.ಎ.

Synopsys

ಡಾ.ಎಚ್.ವೈ ರಾಜಗೋಪಾಲ್, ಅಮೆರಿಕನ್ನಡಿಗ. ಅಮೆರಿಕದ ಪೂರ್ವಭಾಗದಲ್ಲಿರುವ ಫಿಲೆಡೆಲ್ಫಿಯಾ ನಗರದ ನಿವಾಸಿಯಾಗಿದ್ದ ಅವರು, ತಮ್ಮ ಜೀವನದುದ್ದಕ್ಕೂ ಕನ್ನಡ ಭಾಷೆಯ ಒಳಿತಿಗಾಗಿಯೇ ಚಿಂತಿಸಿದವರು. ಅಲ್ಲಿನ ಇತರ ಕನ್ನಡ ಕಟ್ಟುವ ಸಹೃದಯರ  ಜೊತೆಗೂಡಿ ಕೆಲಸಮಾಡುತ್ತಾ ಬಂದರು. ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಬರಹಗಳನ್ನು ಬರೆಯುತ್ತಿದ್ದರು.

ಸುಸಂಸ್ಕೃತ, ಒಳ್ಳೆಯ ನಡತೆಯ, ಇತರರ ಬಗ್ಗೆ ಸೌಜನ್ಯ ಮತ್ತು ಗೌರವದಿಂದ ನಡೆದುಕೊಳ್ಳುವ, ನಿಯಮಗಳನ್ನು ತಪ್ಪದೇ ಪಾಲಿಸುವ ವ್ಯಕ್ತಿಯೊಬ್ಬನ ಚಿತ್ರ ಕಣ್ಮುಂದೆ ಬರುತ್ತದೆ. ಇವೆಲ್ಲ ಗುಣಗಳನ್ನು ಹೊಂದಿದ್ದವರು ಎಚ್.ವೈ. ರಾಜಗೋಪಾಲ್.

ಇವರ ಬಗ್ಗೆ ಪ್ರಖ್ಯಾತ ಲೇಖಕಿ ವೈದೇಹಿಯವರ ಮಾತುಗಳು ಹೀಗಿವೆ’-  ’ರಾಜಗೋಪಾಲ್ ಅವರು ಅಮೆರಿಕದಲ್ಲಿ ಮತ್ತು ನಮ್ಮೂರಲ್ಲಿ ವೇದಿಕೆಯ ಮೇಲೆ ಮಾತಾಡಿರುವುದನ್ನು ನಾಲ್ಕು ಬಾರಿ ಕೇಳಿದವಳು ನಾನು ಅವರ ಕನ್ನಡ ಭಾಷಣವೆಂದರೆ ಅದು ಸಂಪೂರ್ಗಿ ಕನ್ನಡದಲ್ಲಿಯೇ ನಡೆದ ಭಾಷಣ, ಸಹಜವಾಗಿ ಹೊಮ್ಮಿ ಹೊಮ್ಮಿ ಬರುವ ಕನ್ನಡ ಶಬ್ದಗಳಿಂದ ಕೂಡಿದ ಭಾಷಣ, ನಮ್ಮ ಕನ್ನಡ ಭಾಷೆ ಅಷ್ಟು ಚೆಲುವಾಗಿದೆಯೇ ಎಂದು ಕನ್ನಡನಾಡಿನಲ್ಲಿಯೇ ಉಸಿರಾಡುವ ನಾವೇ ಅಂದುಕೊಳ್ಳಬೇಕು, ಅಂತಹ ಮಾತುಗಾರಿಕೆ ಅವರದು’ ಎಂದು ವಿಶ್ವಾಸದ ನುಡಿಗಳನ್ನು ಹಂಚಿಕೊಂಡಿದ್ದಾರೆ. 

ರಾಜಗೋಪಾಲ್, ಉದ್ಯೋಗದ ನಿಮಿತ್ತ ಅಮೆರಿಕಕ್ಕೆ ಹೋಗಿ ಅಲ್ಲಿಯೇ ನೆಲೆನಿಂತರು. ಆನಂತರದ ದಿನದಲ್ಲಿ ಅಮೆರಿಕದಲ್ಲಿರುವ ಕನ್ನಡಿಗರನ್ನು ಸಂಘಟಿಸಿದರು. ಅವರಲ್ಲಿ ನಾಟಕದ ಹುಚ್ಚು ಇರುವವರು ಎಷ್ಟು ಜನ? ಸಂಗೀತ-ನೃತ್ಯದಲ್ಲಿ ಮನಸ್ಸಿಟ್ಟವರು ಎಷ್ಟು ಜನ? ಸಾಹಿತ್ಯ ರಚನೆಯಲ್ಲಿ ಕಾವ್ಯ ರಚನೆ-ವಿಮರ್ಶೆಯ ಕುರಿತು ಆಸಕ್ತಿ ಹೊಂದಿರುವವರು ಎಷ್ಟು ಜನರೆಂದು ಪತ್ತೆ ಹಚ್ಚಿ ಅವರನ್ನೆಲ್ಲ ಒಂದೆಡೆ ಸೇರಿಸಿದರು. ಕನ್ನಡದ ಸಾಹಿತ್ಯ ಕೃತಿಗಳನ್ನು ಕುರಿತ ಚರ್ಚೆಗೆಂದೇ ಅಮೆರಿಕದಲ್ಲಿ ಕನ್ನಡ ಸಾಹಿತ್ಯ ರಂಗವನ್ನು ಹುಟ್ಟುಹಾಕಿದರು. ಗಣ್ಯರ ಉಪನ್ಯಾಸ, ಒಂದು ಕೃತಿಯ ಕುರಿತು ಚರ್ಚೆ ಏರ್ಪಡಿಸಿ ಅದನ್ನೆಲ್ಲ ಪ್ರಕಟಿಸುವ ಸಾಹಸಕ್ಕೂ ಮುಂದಾದರು. ದೂರದ ಅಮೆರಿಕದಲ್ಲಿದ್ದುಕೊಂಡೇ ಸದ್ದಿಲ್ಲದೇ ಕನ್ನಡ ಸೇವೆ ಮಾಡಿದ್ದ ಈ ಸಾಧಕನ ವ್ಯಕ್ತಿ ಚಿತ್ರವನ್ನು ಲೇಖಕರಾದ ಡಾ. ಮೈ,ಶ್ರೀ ನಟರಾಜ  ಮತ್ತು ತ್ರಿವೇಣಿ ಶ್ರೀನಿವಾಸರಾವ್ ಸಮಗ್ರವಾಗಿ ಸಂಗ್ರಹಿಸಿ ಪುಸ್ತಕ ರೂಪಕ್ಕೆ ತಂದಿದ್ದಾರೆ. 

Related Books