ಆತ್ಮೀಯರು

Author : ಎಚ್.ಎಂ. ಮರುಳಸಿದ್ದಯ್ಯ

Pages 228

₹ 150.00




Year of Publication: 2013
Published by: ನಿರುತಾ ಪ್ರಕಾಶನ
Address: #326, 2ನೇ ಮಹಡಿ, ಸಿಂಡಿಕೇಟ್‌ ಬ್ಯಾಂಕ್‌ ಎದುರು, ಎಐಟಿ ಕಾಲೇಜು ಹತ್ತಿರ, ಕೆಂಗುಂಟೆ, ಮಲ್ಲತ್ತಹಳ್ಳಿ, ಬೆಂಗಳೂರು-56005
Phone: 9980066890

Synopsys

ಎಚ್.ಎಂ. ಮರುಳಸಿದ್ಧಯ್ಯರವರು ತಮ್ಮ ಜೀವನದಲ್ಲಿ ಆತ್ಮೀಯ ಸ್ನೇಹಿತರೊಟ್ಟಿಗೆ ಕಳೆದ ಮಧುರ ಕ್ಷಣಗಳನ್ನು, ಅವರೊಂದಿಗಿನ ಒಡನಾಟಗಳನ್ನು ಪುಸ್ತಕ ರೂಪಕ್ಕೆ ತಂದಿದ್ದಾರೆ. ಇದರಲ್ಲಿ ಕಾಲೇಜಿನಸ್ನೇಹಿತ ರಾಮಚಂದ್ರರಿಂದ ಹಿಡಿದು `ಗೊತ್ತಿಗೆ ಹಚ್ಚಿದ’ ಗುರು ಗೋಯಲ್‍ರವರೆಗೂ ಇರುವ ಚಿತ್ರಣಗಳನ್ನು ಕಾಣಬಹುದು. ಈ ಕೃತಿಯಲ್ಲಿ ಲೇಖಕರು ತಮ್ಮ ಸ್ನೇಹಿತರ ಇಡೀ ಜೀವನದ ವಿವರಗಳನ್ನೇನೂ ಕೊಟ್ಟಿಲ್ಲ. ಆದರೆ ಅವರ ಜೀವನದ ತುಣುಕುಗಳನ್ನು ಜ್ಞಾಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂಬುದು ಈ ಕೃತಿಯಲ್ಲಿ ಕಂಡು ಬರುತ್ತದೆ. 

About the Author

ಎಚ್.ಎಂ. ಮರುಳಸಿದ್ದಯ್ಯ
(29 July 1931)

ಅಧ್ಯಾಪಕ, ಸಂಶೋಧನ, ಮಾರ್ಗದರ್ಶನ, ಪ್ರಯೋಗಶೀಲ, ಹಿರಿಯ ಲೇಖಕರಾದ ಮರುಳಸಿದ್ದಯ್ಯನವರು ಕನ್ನಡದಲ್ಲಿ ಸಮಾಜಕಾರ್ಯ ಸಾಹಿತ್ಯ ಸೃಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಆರು ದಶಕಗಳಿಂದ ಸಮಾಜಕಾರ್ಯ, ಶಿಕ್ಷಣ, ಕ್ಷೇತ್ರಕಾರ್ಯ, ಸಂಘಟನೆ, ಸಾಹಿತ್ಯ ರಚನೆ, ಇತ್ಯಾದಿಗಳಲ್ಲಿ ತೊಡಗಿಕೊಂಡಿರುವ ಅವರು ನಿರ್ಮಲ ಕರ್ನಾಟಕ, ಪಂಚಮುಖಿ ಅಭ್ಯುದಯ ಮಾರ್ಗ, ಸ್ವಸ್ತಿ ಗ್ರಾಮ ಯೋಜನೆ, ಹಲವು ಕಾರ್ಯ ಯೋಜನೆಗಳ ಮೂಲಕ ಎಚ್. ಎಮ್. ಎಮ್. ಸಮಾಜ ಕಾರ್ಯಕ್ಕೆ ಹೊಸದೊಂದು ಆಯಾಮವನ್ನು ಒದಗಿಸಿದ್ದಾರೆ. ಡಾ. ಎಚ್.ಎಂ. ಮರುಳಸಿದ್ದಯ್ಯ ಅವರು ಸಮಾಜಶಾಸ್ತ್ರ (ಮೈಸೂರು ವಿ ವಿ) ಮತ್ತು ಸಮಾಜಕಾರ್ಯ (ದಿಲ್ಲಿ ವಿಶ್ವವಿದ್ಯಾಲಯ) ಎಮ್. ಎ. ಪಡೆದಿರುವದಲ್ಲದೆ ಸಮಾಜಕಾರ್ಯದಲ್ಲಿ ವಾರಣಾಸಿಯ ಮಹಾತ್ಮ ...

READ MORE

Related Books