ಡಾ.ಎಂ.ಎಂ.ಕಲಬುರ್ಗಿ ಸಂಶೋಧನ ಸಾಹಿತ್ಯ

Author : ವೀರಣ್ಣ ದಂಡೆ

Pages 150




Year of Publication: 2016
Published by: ಡಾ. ಬಿ.ಡಿ.ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರ
Address: ಅನುಭವ ಮಂಟಪ, ಬಸವ ಸಮಿತಿ, ಕಲಬುರ್ಗಿ

Synopsys

ಕಲಬುರ್ಗಿ ಅವರ ಹತ್ಯೆ ಬಳಿಕ ಅವರ ಸ್ಮರಣಾರ್ಥ ಗುಲ್ಬರ್ಗಾದ ಬಸವ ಸಮಿತಿಯ ಡಾ. ಬಿ.ಡಿ.ಜತ್ತಿ ವಚನಾಧ್ಯಯನ ಮತ್ತು ಸಂಶೋಧನ ಕೇಂದ್ರವು ವಿಚಾರ ಸಂಕಿರಣವೊಂದನ್ನು ಏರ್ಪಡಿಸಿತ್ತು. ಮುಖ್ಯವಾಗಿ ಅದು ಸಂಶೋಧನಾ ಸಾಹಿತ್ಯವನ್ನೇ ಕೇಂದ್ರೀಕರಿಸಿತ್ತು. ಈ ಸಂದರ್ಭದಲ್ಲಿ ಒಟ್ಟು ೧೮ ಪ್ರಬಂಧಗಳು ಮಂಡನೆಯಾದವು. ಅವುಗಳನ್ನೆಲ್ಲಾ ಸಂಪಾದಿಸಿ ’ಡಾ.ಎಂ.ಎಂ.ಕಲಬುರ್ಗಿ ಸಂಶೋಧನ ಸಾಹಿತ್ಯ’ ಕೃತಿ ಹೊರತಂದಿದ್ದಾರೆ ಡಾ. ವೀರಣ್ಣ ದಂಡೆ. ಕಲಬುರ್ಗಿ ಅವರ ಬದುಕು -ಸೇವೆ, ಅವರ ಶರಣ ಶಾಸ್ತ್ರಸಾಹಿತ್ಯ ಸಂಶೋಧನೆ, ಅವರ ಸಾಹಿತ್ಯ ಸಂಶೋಧನೆ, ಅವರ ಶರಣ ಅಧ್ಯಯನಗಳ ಕುರಿತು ಕೃತಿ ಪ್ರಸ್ತಾಪಿಸುತ್ತದೆ. ಅವರ ಸಂಶೋಧನೆ ಬಗೆಗೆ ಬಂದ ಕೃತಿಗಳಲ್ಲೇ ಅತ್ಯುತ್ತಮವಾದುದು ಎಂಬ ಹೆಗ್ಗಳಿಕೆಯೂ ಈ ಕೃತಿಗೆ ಸಂದಿದೆ.

About the Author

ವೀರಣ್ಣ ದಂಡೆ
(02 November 1951)

ಜಾನಪದ ತಜ್ಞ, ಸಂಶೋಧಕ ವೀರಣ್ಣ ದಂಡೆಯವರು ಹುಟ್ಟಿದ್ದು ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಸಲಗರ ಗ್ರಾಮದಲ್ಲಿ. ತಂದೆ ಶರಣಪ್ಪ ದಂಡೆ, ತಾಯಿ ಬಂಡಮ್ಮ. ಪ್ರಾರಂಭಿಕ ಶಿಕ್ಷಣ ಸಲಗರ. ಬಿ.ಎ, ಎಂ.ಎ. ಪದವಿ ಕಲಬುರ್ಗಿ. “ಕಲಬುರ್ಗಿ ಜಿಲ್ಲೆಯ ಜನಪದ ಕಥೆಗಳ ಆಶಯ ಮತ್ತು ಮಾದರಿಗಳು” ಮಹಾಪ್ರಬಂಧ ಮಂಡಿಸಿ ಕಲಬುರ್ಗಿ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದರು. 1984ರಲ್ಲಿ ಉದ್ಯೋಗಕ್ಕಾಗಿ ಸೇರಿದ್ದು ಬೋಧನಾವೃತ್ತಿ. ಅಧ್ಯಾಪಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಣೆ. ಸಹಾಯ ಸಂಶೋಧಕರಾಗಿ ಉತ್ತರ ಕನ್ನಡದ ಏಳು ಜಿಲ್ಲೆಗಳ ಪ್ರವಾಸ. ಜಾನಪದ ವೈದ್ಯಕೋಶ ಸಂಶೋಧನಾ ಯೋಜನೆಯಡಿ ಕ್ಷೇತ್ರ ಸಹಾಯಕರ ಕಾರ್ಯ. ನಾಲ್ಕು ...

READ MORE

Related Books