ಶಿವರುದ್ರ

Author : ಕಲ್ಯಾಣರಾವ ಜಿ. ಪಾಟೀಲ

Pages 410

₹ 350.00




Year of Publication: 2013
Published by: ಪ್ರತೀಕ ಪ್ರಕಾಶನ
Address: # ಮಹಾತ್ಮ ಬಸವೇಶ್ವರ ಕಾಲೋನಿ, ಕಲಬುರಗಿ

Synopsys

ಪ್ರೊ. ಶಿವರುದ್ರಪ್ಪ ಜಿ. ಮೇಳಕುಂದಿಯವರು ಕಲಬುರ್ಗಿಯ ಶರಣ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರು ಮತ್ತು ಪ್ರಾಂಶುಪಾಲರಾಗಿದ್ದರು. ಪ್ರೊ. ಕಲ್ಯಾಣರಾವ ಜಿ. ಪಾಟೀಲ ಸಂಪಾದಕರು, ಡಾ. ವಿಜಯಕುಮಾರ ದೇವಪ್ಪ ಹಾಗೂ ಡಾ. ಶಾಂತಾ ಅಷ್ಟಿಗೆ ಸಹ ಸಂಪಾದಕರು. ಸಂಪಾದಕರಿಗೆ ಪ್ರೊ. ಶಿವರುದ್ರಪ್ಪ ಜಿ. ಮೇಳಕುಂದಿಯವರು ಗುರುಗಳು. 2012ರಲ್ಲಿ ಅಪಘಾತದಲ್ಲಿ ನಿಧನರಾದ ತಮ್ಮ ಗುರುಗಳ ನೆನಪಿಗಾಗಿ ‘ಶಿವರುದ್ರ’ ಸ್ಮರಣ ಸಂಪುಟ ಸಿದ್ಧವಾಗಿದೆ.

ಎಸ್.ಜಿ. ಮೇಳಕುಂದಿಯವರು ಶಿಸ್ತು, ಸರಳತೆ, ಸಹಜತೆ, ಸೌಜನ್ಯತೆ, ಸಮನ್ವಯತೆ, ಸೌಹಾರ್ದತೆ, ಸತತ ಪರಿಶ್ರಮ ಜೀವನ ಶ್ರದ್ಧೆ ಮತ್ತು ಸಾಮಾಜಿಕ ಪ್ರಜ್ಞೆಗಳಿಗೆ ಪ್ರತೀಕ. ಅವರು ಏರಿದ ಮೆಟ್ಟಿಲುಗಳು, ಇಟ್ಟ ಹೆಜ್ಜೆಯ ಗುರುತುಗಳು, ತೋರಿದ ದಾರಿ, ಹೇಳಿದ ಮಾತುಗಳು ನಡೆಸಿದ ಸಂವಾದಗಳು ಸದಾ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಅವರ ರೂಪು ನಮ್ಮೆಲ್ಲರ ಹೃದಯದಲ್ಲಿ ಹಚ್ಚ ಹಸಿರಾಗಿ ಉಳಿದಿವೆ. ಪ್ರೊ. ಎಸ್.ಜಿ.ಎಂ. ಎಂದೂ ಯಾವುದೇ ತರಹದ ಮೂಢನಂಬಿಕೆಗಳಿಗೆ ಆಸ್ಪದ ಕೊಟ್ಟವರಲ್ಲ. ಎಂದಿಗೂ ನಕಾರಾತ್ಮಕವಾಗಿ ಆಲೋಚಿಸಿದವರಲ್ಲ. ಅಹಂಕಾರ, ದರ್ಪ ತೋರಿದವರಲ್ಲ. ಆದರೆ ಎದುರಿನವರಿಗೆ ಮುಲಾಜಿಲ್ಲದೆ ತಪ್ಪು ತಿಳಿಸಿ ಹೇಳುವ ನೇರ ನಿಷ್ಠುರ ಸ್ವಭಾವದವರಾಗಿದ್ದರು. ತಮ್ಮ ವೈಯಕ್ತಿಕ ಜೀವನದಲ್ಲಿ ವೃತ್ತಿ ಪ್ರವೃತ್ತಿಯಲ್ಲಿ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಕುಂದಿಲ್ಲದಂತೆ ಬದುಕಿದವರು ಎಂದು ಸಂಪಾದಕರು ತಮ್ಮ ಗುರುಗಳ ವ್ಯಕ್ತಿತ್ವ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸ್ಮರಣ ಸಂಚಿಕೆಯ ಈ  ಗ್ರಂಥಕ್ಕೆ “ಶಿವರುದ್ರ” ಎಂದು ಹೆಸರಿಟ್ಟಿರುವುದು ಔಚಿತ್ಯಪೂರ್ಣ. ಪ್ರೊ. ಎಸ್.ಜಿ.ಎಂ ನಿವೃತ್ತರಾದಾಗ ಅವರ ಆತ್ಮೀಯ ವಿದ್ಯಾರ್ಥಿ ಬಳಗ “ರಚನಾ” ಅಭಿನಂದನ ಗ್ರಂಥವನ್ನು ಸಮರ್ಪಿಸಿತ್ತು. ನಂತರ, ಹತ್ತು ಹಲವು ಕಡೆಯಿಂದ ಅವರ ಬಗೆಗೆ ಕವನಗಳನ್ನು, ಲೇಖನಗಳನ್ನು ಮತ್ತು ಅವರ ವ್ಯಕ್ತಿತ್ವಕ್ಕೆ ಸರಿ ಹೊಂದುವ ಶರಣ ಸಾಹಿತ್ಯ, ಸಮಾಜ, ಶಿಕ್ಷಣ, ಸಂಸ್ಕೃತಿಗಳಿಗೆ ಸಂಬಂಧಿಸಿದ ಲೇಖನಗಳನ್ನು ಆಹ್ವಾನಿಸಿ, ಅವುಗಳನ್ನು ಕಲೆಹಾಕಿದ ಪ್ರಯತ್ನವೇ ಈ ಸ್ಮರಣ ಸಂಚಿಕೆ.

ಪ್ರೊ. ಎಸ್.ಜಿ. ಮೇಳಕುಂದಿಯವರಿಗೆ ಗೌರವ ನುಡಿನಮನ ಸಲ್ಲಿಸಿದ ಹದಿನಾರು ಕವನಗಳಿವೆ. ಶಿವರುದ್ರ ವೀಣೆ ಎಂಬ 2ನೇ ಭಾಗದಲ್ಲಿ ಪ್ರೊ. ಮೇಳಕುಂದಿಯವರ ವ್ಯಕ್ತಿತ್ವ ಮತ್ತು ಸಾಂಸ್ಕøತಿಕ ಸಾಧನೆಯ ವಿವಿಧ ಆಯಾಮಗಳನ್ನು ಕುರಿತು ಅವರ ಆತ್ಮೀಯ ಸ್ನೇಹಿತರು, ಬಂಧುಗಳು, ಮಿತ್ರರು, ಅಭಿಮಾನಿ ವಿದ್ಯಾರ್ಥಿಗಳು ಬರೆದಿರುವ ಹದಿನೇಳು ಲೇಖನಗಳಿವೆ. ಶರಣ ಸೌರಭ ಎಂಬ 3ನೇ ಭಾಗದಲ್ಲಿ ಪ್ರೊ. ಮೇಳಕುಂದಿಯವರಿಗೆ ಆಪ್ತವಾಗಿರುವ ಶರಣ ಸಾಹಿತ್ಯದ ವಿವಿಧ ಮಜಲುಗಳನ್ನು ಬಿತ್ತರಿಸುವ ಹದಿನೇಳು ಲೇಖನಗಳಿವೆ. ಸಮಾಜ, ಸಂಸ್ಕೃತಿ ಶಿಕ್ಷಣ ಎಂಬ 3ನೇ ಭಾಗದಲ್ಲಿ ಗ್ರಾಮೀಣ ಜನಜೀವನದ ಸ್ಥಿತಿ-ಗತಿ, ಆರೋಗ್ಯ, ಸ್ತ್ರೀ ಶಿಕ್ಷಣ, ಭಾಷಾ ಶಿಕ್ಷಣ, ವೈಚಾರಿಕತೆಗೆ ಸಂಬಂಧಿಸಿದ ಒಂಬತ್ತು ಲೇಖನಗಳು ಸಂಗ್ರಹವಾಗಿವೆ. ಒಟ್ಟಿನಲ್ಲಿ , ಪ್ರೊ. ಮೇಳಕುಂದಿಯವರು ಯಾವ ಮೌಲ್ಯಗಳಿಗಾಗಿ ತಮ್ಮ ಜೀವನದುದ್ದಕ್ಕೂ ಪರಿಶ್ರಮಿಸಿರುವರೋ ಅವರ ಆಲೋಚನೆ ಮತ್ತು ಆಶಯಗಳಿಗೆ ಅನುಗುಣವಾಗಿರುವ ವಿಚಾರಗಳನ್ನು ಕ್ರೋಢಿಕರಿಸಿದ ಸಾಂದರ್ಭಿಕ ಸಂಸ್ಮರಣ ಸಂಪುಟವಿದು.

About the Author

ಕಲ್ಯಾಣರಾವ ಜಿ. ಪಾಟೀಲ

ಲೇಖಕ ಡಾ. ಕಲ್ಯಾಣರಾವ ಜಿ. ಪಾಟೀಲ ಅವರು ಮೂಲತಃ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಸೊಂತ ಸಮೀಪದ ಸರಪೋಷ್ ಕಿಣಗಿ ಗ್ರಾಮದವರು. ತಂದೆ- ಗುರುಪಾದಪ್ಪ ಮಾಲಿಪಾಟೀಲ, ತಾಯಿ- ಮಹಾದೇವಿಯಮ್ಮ. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ  ಹಾಗೂ ಹಿರಿಯ ಮಾಧ್ಯಮಿಕ ಶಿಕ್ಷಣವನ್ನು ಪಕ್ಕದೂರಾದ ಚೇಂಗಟಾದಲ್ಲಿ ಪೂರ್ಣಗೊಳಿಸಿದರು. ಪ್ರೌಢಶಾಲೆಯಿಂದ ಪದವಿಯವರೆಗೂ ಕಲಬುರಗಿಯ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ನಂತರ  ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಿಂದ ಕಾಲೇಜಿಗೆ ಪ್ರಥಮ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಹತ್ತನೇ ರ್‍ಯಾಂಕಿನೊಂದಿಗೆ ಬಿ.ಎ. ಪದವಿ ಪಡೆದರು. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎರಡನೆಯ ರ್‍ಯಾಂಕಿನೊಂದಿಗೆ ಎಂ.ಎ ಪದವಿ ಹಾಗೂ ಮೂರನೇ ರ್‍ಯಾಂಕಿನೊಂದಿಗೆ ಎಂ.ಫಿಲ್ ಪದವಿ  ಹಾಗೂ ಡಾ. ಎಂ.ಎಂ. ...

READ MORE

Related Books