ಅಂತರಂಗ ಅನುಸಂಧಾನ

Author : ಚಂದ್ರಮತಿ ಸೋಂದಾ

Pages 264

₹ 200.00




Year of Publication: 2017
Published by: ಭಾರತಿ ಪ್ರಕಾಶನ
Address: ಸರಸ್ವತೀಪುರಂ, ಮೈಸೂರು 570009

Synopsys

ರಾಜಕೀಯ , ಸಮಾಜ ಸೇವೆ, ಹಾಗೂ ಪತ್ರಿಕೋದ್ಯಮ ಪರಿಸರದಲ್ಲಿಯೇ ಬೆಳೆದ ಪ್ರೊ. ರಾಮೇಶ್ವರಿ ವರ್ಮ ಅವರು ಶೈಕ್ಷಣಿಕ, ರಂಗಭೂಮಿ, ಮತ್ತು ದೃಶ್ಯ ಮಾಧ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ವೈಯಕ್ತಿಕ ಜೀವನದಲ್ಲಿ ಕ್ರಾಂತಿಕಾರಕ ನಿರ್ಧಾರವನ್ನು ಕೈಗೊಂಡರೆ ಸಾರ್ವಜನಿಕ ಜೀವನದಲ್ಲಿ ಸ್ನೇಹ, ವಿಶ್ವಾಸ, ಹಾಗೂ ಸಂಬಂಧಗಳನ್ನು ಕಾಪಾಡಿಕೊಳ್ಳಬಹುದು ಎಂಬ ನಿಲುವನ್ನು ತಳೆದವರು.

ಜಾತಿ , ಸ್ವಜನ ಪಕ್ಷಪಾತ, ರಾಜಕೀಯದಿಂದ ತುಂಬಿರುವ ವಿಶ್ವವಿದ್ಯಾಲಯದ ವಾತಾವರಣದಲ್ಲಿ ಪ್ರಾಧ್ಯಾಪಕಿಯಾಗಿಯೂ ತಮ್ಮ ತನವನ್ನು ಉಳಿಸಿಕೊಂಡವರು.  ರಾಮೇಶ್ವರಿ ವರ್ಮ  ಅವರಿಗೆ ಗೌರವ ಸಮರ್ಪಣೆಯಾಗಿ ’ಅಂತರಂಗ ಅನುಸಂಧಾನ’ ಕೃತಿಯನ್ನು ಡಾ. ಹೇಮಲತ ಎಚ್.ಎಂ ಮತ್ತು ಡಾ. ಚಂದ್ರಮತಿ ಸೋಂದಾ ಅವರು ಸಂಪಾದಿಸಿ ಪ್ರಕಟಿಸಿದ್ದಾರೆ.

About the Author

ಚಂದ್ರಮತಿ ಸೋಂದಾ
(06 August 1954)

ಸ್ತ್ರೀವಾದಿ ನೆಲೆಗಟ್ಟಿನಲ್ಲಿ ಚಿಂತನಾ ಕೃತಿಗಳನ್ನು ರಚಿಸುವಲ್ಲಿ ಚಂದ್ರಮತಿ ಸೋಂದಾ ರವರು ಪ್ರಮುಖರಾಗಿರುತ್ತಾರೆ. 1954 ಆಗಸ್ಟ್ 06 ರಂದು ಜನಿಸಿದ ಅವರು ಉಪನ್ಯಾಸಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಚಿಪ್ಪೊಡೆದ ಮೌನ, ಮಾನಸಿ ಮಾನಸ (ಸ್ತ್ರೀವಾದಿ ಸಾಹಿತ್ಯ), ಜಯಲಕ್ಷ್ಮಿದೇವಿ, ವ್ಯಕ್ತಿ, ಅಭಿವ್ಯಕ್ತಿ (ಸಂಪಾದನೆ), ನೆರಳು ಬೆಳಕು (ಅನುವಾದ ಹಿಂದಿಯಿಂದ), ನಾರೀಮಿಡಿತ (ಅಂಕಣಬರಹ). ...

READ MORE

Related Books