ಅಲೀಬಾಬ ಮತ್ತು ನಲ್ವತ್ತು ಕಳ್ಳರು-ಪುಷ್ಪರಾಣಿ- ಕಿಟ್ಟಿಕತೆ

Author : ಚಂದ್ರಶೇಖರ ಕಂಬಾರ

Pages 120

₹ 95.00




Year of Publication: 2011
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 26617100, 26617755

Synopsys

ಅಲೀಬಾಬ ಮತ್ತು ನಲ್ವತ್ತು ಕಳ್ಳರು-ಪುಷ್ಪರಾಣಿ- ಕಿಟ್ಟಿಕತೆ

ಚಂದ್ರಶೇಖರ ಕಂಬಾರರ 'ಅಲೀಬಾಬ ಮತ್ತು ನಲ್ವತ್ತು ಕಳ್ಳರು' ಹಾಗೂ ’ಪುಷ್ಪರಾಣಿ’ ಮತ್ತು ’ಕಿಟ್ಟಿಕತೆ’ ಎಂಬ ಮೂರು ನಾಟಕಗಳ ಸಂಕಲನ.

ಅಲೀಬಾಬ ಮತ್ತು ನಲ್ವತ್ತು ಕಳ್ಳರು

ಅಲಿಬಾಬಾ ಮತ್ತು ನಲ್ವತ್ತು ಕಳ್ಳರು ನಾಟಕದಲ್ಲಿ ವಿದೇಶಿ ಜನಪದ ಕತೆಗೆ ಸ್ಥಳೀಯ ಆವರಣ ಕಲ್ಪಿಸಲಾಗಿದೆ.  ಗಣೇಶನ ಪೂಜೆಯ ಲಾಡು ಕಳುವಾಗಿರುವ ಸಮಯದಲ್ಲಿಯೇ ಮಲ್ಲಾಪುರದ ಮಂತ್ರಿಯ ಮಗಳು ಮರ್ಜಿನಾ 'ಕಳ್ಳಕಳ್ಳ' ಎಂದು ಚೀರುತ್ತ ಬಂದು ಕಾಪಾಡಲು ಕೋರುತ್ತಾಳೆ.  ಸೂತ್ರಧಾರ ಅವಳಿಗೆ ಮೇಳದಲ್ಲಿ ಒಂದಾಗಲು ಸೂಚಿಸುತ್ತಾನೆ. ಅದೇ ಸಮಯಕ್ಕೆ ಕಳ್ಳರ ನಾಯಕ ಹಸನ್ ಬಂದು ಹುಡುಗಿಯ ಬಗ್ಗೆ ಕೇಳುವುದಲ್ಲದೆ ತನಗೊಬ್ಬ ಕಳ್ಳ ಬೇಕಾಗಿದ್ದಾನೆ ಎಂದು ಗಣೇಶ ಪಾತ್ರಧಾರಿಯನ್ನು ಕರೆದುಕೊಂಡು ಹೋಗುತ್ತಾನೆ.

ಅಲೀಬಾಬನ ಅಣ್ಣ ಖಾಸಿಂ ಸ್ಥಿತಿವಂತನಿದ್ದರೂ ತಮ್ಮನಿಗೆ ಸಹಾಯ ಮಾಡದವ. ಅಲೀಬಾಬನಿಗೆ ಅಕಸ್ಮಾತಾಗಿ ಚಿನ್ನ ದೊರೆತು ಶ್ರೀಮಂತನಾಗುತ್ತಾನೆ. ಅಣ್ಣ ಖಾಸಿಂ ತಮ್ಮನಿಗಿಂತ ಮೂರು ಪಟ್ಟು ಶ್ರೀಮಂತನಾಗಬೇಕೆಂದು ಆಸೆಪಟ್ಟು ಸಾವು ತಂದುಕೊಳ್ಳುತ್ತಾನೆ. ಕೊನೆಯಲ್ಲಿ ಮರ್ಜಿನಾ ತನ್ನ ತಂದೆಯ ಹಂತಕರನ್ನುಹಾಗೂ ನಾಟಕದ ಪ್ರಾರಂಭದಲ್ಲಿ ಅಪರಹಣಕ್ಕೆ ಒಳಗಾಗಿದ್ದ ಗಣೇಶನ ಪಾತ್ರಧಾರಿಯ ಸಹಾಯದಿಂದ ನಾಶ ಮಾಡುತ್ತಾಳೆ. ಇದೊಂದು ಮಕ್ಕಳ ನಾಟಕವೂ ಹೌದು.


ಪುಷ್ಪರಾಣಿ

ಪರಿಸರದ ಪ್ರಜ್ಞೆಯನ್ನು ಕೇಂದ್ರವಾಗಿಟ್ಟುಕೊಂಡು ರಚಿಸಿದ ನಾಟಕವಿದು. ಸಮಕಾಲೀನ ಸಮಸ್ಯೆಯನ್ನು ಜನಪದ ಕತೆಯ ಧಾಟಿಯಲ್ಲಿ ನಿರೂಪಿಸಲಾಗಿದೆ. ಪ್ರಕೃತಿ ಪ್ರೇಮಿಯಾಗಿರುವ ಸೋಮರಾಯ ಶಿವಪುರದ ಅರಸ. ಅವನು ಬೆಳೆಸಿದ ಉಪವನದ ಮರಗಳನ್ನು ವೈರಿಯ ಸೈನಿಕರು ನಾಶ ಮಾಡಲು ಯತ್ನಿಸುತ್ತಾರೆ. ರಾಜನಿಗೆ ವಿಷಯ ತಿಳಿದು, ವೈರಿಗಳಿಂದ ಮರಗಳನ್ನು ರಕ್ಷಿಸುತ್ತಾನೆ. ಉಪವನದ ಒಂದು ಎಳೆಯ ಮರ ಆರಸನನ್ನು ಆಕರ್ಷಿಸುತ್ತದೆ. ಅದರ ಬಗ್ಗೆ ವನಪಾಲಕನನ್ನು ವಿಚಾರಿಸಿದಾಗ 'ಈ ಎಳೆಯ ಮರ ನನ್ನ ಸಾಕು ಮಗಳು, ಹೆಸರು ಪುಷ್ಪರಾಣಿ, ವನರಾಣಿಯ ಮಗಳು, ಪುಷ್ಪರಾಣಿ ನಾಲ್ಕು ಚಿಕ್ಕ ಕಲ್ಲುಗಳನ್ನು ಕೊಡುತ್ತಾಳೆ ಒಂದು ಕಲ್ಲು ಒಗೆದರೆ ಮರವಾಗುವಳು. ಎರಡನೆಯದಕ್ಕೆ ಹೂಬಿಡುವಳು. ಮೂರನೆಯದಕ್ಕೆ ಹೂ ಉದುರುವುದು, ನಾಲ್ಕನೆಯ ಕಲ್ಲು ಒಗೆದಾಗ ಪುನಃ ಹುಡುಗಿಯಾಗುವಳು' ಎಂದು ವಿವರಿಸುತ್ತಾನೆ. ಅರಸನಿಗೆ ಆಶ್ಚರ್ಯ. ಆಗ ವನಪಾಲಕ ಅವನು ಹೇಳಿದ್ದನ್ನು ಪ್ರಯೋಗಿಸಿ ತೋರಿಸುತ್ತಾನೆ. ಪುಷ್ಪರಾಣಿಯ ಮೇಲೆ ಮೋಹಗೊಳ್ಳುವ ಸೋಮರಾಯ, ಮದುವೆಯಾಗಿ ಅವಳನ್ನು ಅರಮನೆಗೆ ಕರೆತರುತ್ತಾನೆ.

ಸೋಮರಾಯನ ಮೊದಲಿನ ಮಹಾರಾಣಿ ಮತ್ತು ಸೇವಕಿಯರು ನಾಗರಿಕ ಜೀವನದ ರೀತಿ ರೀವಾಜುಗಳನ್ನು ತಿಳಿಯದ ಅವಳ ಮುಗ್ಧತೆ ಕಂಡು ಕುಚೇಷ್ಟೆ ಮಾಡುವರು. ರಾಜನ ಮೊದಲ ರಾಣಿಗೆ ಸವತಿ ಮತ್ಸರ ಕಾಡುತ್ತದೆ. ಅವಳು ತಂದೆಗೆ ಪತ್ರ ಬರೆದು ಮಾಂಡಲಿಕರೊಂದಿಗೆ ಸೋಮರಾಯನ ರಾಜ್ಯದ ಮೇಲೆ ಯುದ್ಧ ಮಾಡಲು ಕೋರುತ್ತಾಳೆ. ಅವಳ ತಂದೆ ಯುದ್ಧಕ್ಕೆ ಬರುತ್ತಾನೆ. ಮಹಾರಾಣಿಗೆ ಪುಷ್ಪರಾಣಿಯನ್ನು ನೋಡಿಕೊಳ್ಳಲು ಹೇಳಿ ರಾಜ ಕಾಳಗಕ್ಕೆ ಹೋಗುತ್ತಾನೆ, ಪುಷ್ಪರಾಣಿಯ ಪೂರ್ವಾಪರ ಕೆದಕುವ ರಾಣಿ, ಅದರಂತೆ ನಡೆದುಕೊಳ್ಳುವಂತೆ ಹೇಳುತ್ತಾಳೆ. ಪುಷ್ಪರಾಣಿ ಮತ್ತೆ

ಮರವಾಗುತ್ತಾಳೆ. ಮಹಾರಾಣಿ ನಾಲ್ಕನೇ ಕಲ್ಲು ಎಸೆಯದೇ ನಿಲ್ಲಿಸುತ್ತಾಳೆ. ಮರವಾಗಿಯೇ ಪುಷ್ಪರಾಣಿ ನಿಲ್ಲುವಳು. ಆಗ ಮರಕಡಿಯುವಂತೆ ರಾಣಿ ಆಜ್ಞಾಪಿಸುತ್ತಾಳೆ. ಯುದ್ಧ ಗೆದ್ದು ಮರಳಿ ಬಂದ ರಾಜ ವಿಚಾರಿಸಿದಾಗ ವಿಷಯ ತಿಳಿದು ದುಃಖಿತನಾಗುವನು. ಮಹಾರಾಣಿ ೪ನೇ ಕಲ್ಲು ಎಸೆದಾಗ ಪುಷ್ಪರಾಣಿ ಪುನಃ ಹಣ್ಣಾಗುತ್ತಾಳೆ.


ಕಿಟ್ಟಿಕತೆ

ಆಧುನಿಕತೆಯ ಜೀವನಕ್ಕೆ ಮನ ಸೋತು ತಮ್ಮ ಜೀವನದ ಇತಿಮಿತಿಗಳನ್ನು ಮೀರಿ ಬಯಸುವ ಜನತೆಯ ಬದುಕಿನ ಚಿತ್ರಣ ’ಕಿಟ್ಟಿ ಕತೆ’ ನಾಟಕದಲ್ಲಿದೆ.

ನಾಟಕದ ’ಕಿಟ್ಟಿ’ ಮಹಾಚತುರ. ಬುದ್ಧಿ ಭಾವಗಳ, ದೇಹ ಆತ್ಮಗಳ ಸಮಗ್ರ ಅಖಂಡ ಅನುಭವ ತಿಳಿದವ. ತನ್ನ ಸಂಪರ್ಕದಲ್ಲಿ ಬರುವ ಇತರ ಜನಗಳ ಮನೋಭಿಲಾಷೆ, ದೌರ್ಬಲ್ಯ ಅರಿಯುವ ಸಾಮರ್ಥ್ಯ ಉಳ್ಳವ. ತನ್ನ ಸಾಮರ್ಥ್ಯದಿಂದ ಜನವರನ್ನು ಮೋಸ ಮಾಡುವವ. ಕುಂಬಾರಿ, ಶೆಟ್ಟಿ ಮುದುಕಿ, ಮಗ, ನರ್ತಕಿ ಇವರೆಲ್ಲಾ ಒಂದಲ್ಲಾ ಒಂದು ರೀತಿಯಲ್ಲಿ ಅನಿರೀಕ್ಷಿತವಾದ ಅಪೇಕ್ಷೆಗಳನ್ನು ಮುಂದೆ ಮಾಡಿಕೊಂಡು ಸ್ವತಃ ತಾವೇ ಮೋಸ ಹೋಗುತ್ತಾರೆ. ತಮ್ಮ ಆಸೆ- ಆಕಾಂಕ್ಷೆಗಳು ಅಭಿರುಚಿಗಳನ್ನು ಇತಿಮಿತಿಯಲ್ಲಿ ಇರಿಸಿಕೊಳ್ಳದ್ದಕ್ಕೆ ಸಿಗಲಾರದ್ದಕ್ಕೆ ಹಂಬಲಿಸುತ್ತಾರೆ. ಕೊನೆಗೆ ನಾಟಕ ಕೊನೆಯ ಹಂತಕ್ಕೆ ಬಂದಾಗ ತಾವು ಮೋಸ ಹೋಗಿದ್ದರ ಅರಿವು ಆಗುತ್ತದೆ. ತಮ್ಮ ಅಭಿಲಾಷೆಗಳನ್ನು ಈಡೇರಿಸಿಕೊಳ್ಳಲು ಪರಿಹರಿಸಿಕೊಳ್ಳಲು ಮತ್ತೇ ಕಿಟ್ಟಿಯ ಕಡೆಗೆ ಹೋಗುತ್ತಾರೆ. ಅದಕ್ಕೆ ಅವನು ಧಾರ್‍ಮಿಕ ಮಾರ್ಗವನ್ನು ತೋರಿಸುತ್ತಾನೆ. ಅದು ಕೂಡ ವಂಚನೆಯಿಂದಲೇ ಕೂಡಿದಾಗಿರುತ್ತದೆ. ಇಡೀ ನಾಟಕ ಆಧುನಿಕ ಜೀವನದ ವಿವಿಧ ಮುಖಗಳನ್ನು ಇಲ್ಲಿ ಕಣ್ಣು ಮುಂದೆ ನಿಲ್ಲಿಸುತ್ತದೆ. ಮನುಷ್ಯನ ದುರಾಸೆ ವಿಸ್ತೃತವಾಗಿ ಬೆಳೆದು ಎಲ್ಲರೂ ಮೋಸದ ಬಲೆಯಲ್ಲಿ ಸಿಕ್ಕು ಸಂಕಟಪಡುವುದನ್ನು ಚಿತ್ರಿಸುತ್ತದೆ.

 

About the Author

ಚಂದ್ರಶೇಖರ ಕಂಬಾರ
(02 January 1937)

ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಜಾನಪದ ವಿದ್ವಾಂಸರಾದ   ಚಂದ್ರಶೇಖರ ಕಂಬಾರರು ಜನಿಸಿದ್ದು 1937 ಜನವರಿ 2 ರಂದು, ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ.  ಅವರ ವಿದ್ಯಾಬ್ಯಾಸ ಗೋಕಾಕ್, ಬೆಳಗಾವಿ ಮತ್ತು ಧಾರವಾಡದಲ್ಲಿ ನಡೆಯಿತು.  ಗೋಕಾಕ ಮತ್ತು ಬೆಳಗಾವಿಯ ಬ್ರಿಟಿಷರ ಭಯದ ನೆರಳು ಆವರಿಸಿದ್ದ ಪರಿಸರದಿಂದ ಲೇಖಕನಾಗಿ ಮೈಪಡೆದ ಕಂಬಾರರ ಬಾಲ್ಯದ ಆತಂಕಗಳು ಅವರ ಕೃತಿಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ.  ಉನ್ನತ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬಂದು ಎಂ.ಎ ಮತ್ತು  ಪಿ.ಎಚ್.ಡಿ ಪದವಿಗಳನ್ನು ಪಡೆದರು.  ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ (1968-69), ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (1971-1991) ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿದರು.  ಹಂಪಿಯ ...

READ MORE

Related Books