ಆಂಟನಿ ಮತ್ತು ಕ್ಲಿಯೋಪಾಟ್ರ

Author : ಎಲ್.ಎಸ್. ಶೇಷಗಿರಿರಾವ್

₹ 55.00




Year of Publication: 2017
Published by: ಸಪ್ನ ಬುಕ್ ಹೌಸ್
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-560001
Phone: 08040114455

Synopsys

Antony and Cleopatra-ಶೆಕ್ಸ್ ಪಿಯರ್ ನ ಪ್ರಸಿದ್ಧ ನಾಟಕಗಳ ಪೈಕಿ ಒಂದು. ಪ್ರೇಮ ಮತ್ತು ಯುದ್ಧದ ತೀವ್ರತೆಯನ್ನು ಹೇಳುತ್ತದೆ. ಇದೊಂದು ಗಂಭೀರ ನಾಟಕವಾಗಿದೆ. ನಾಟಕವು ಪ್ರಾಚೀನ ರೋಮ್ ಹಾಗೂ ಈಜಿಪ್ತ್ ನಲ್ಲಿ ನಡೆಯುತ್ತದೆ. ಈ ನಾಟಕದ ಮೂಲ ವಸ್ತು ರೋಮ್ ನಗರದಿಂದ ಆಯ್ದುಕೊಳ್ಳಲಾಗಿದೆ. ರೋಮ್ ಚರಿತ್ರೆಯ ವಾಸ್ತವಿಕ ಘಟನೆ ಎನ್ನಬಹುದು. ರೋಮ್ ನ ಹಿರಿಯ ಸೈನ್ಯಾಧಿಕಾರಿ ಆಂಟನಿ ಹಾಗೂ ಈಜಿಪ್ತ್ ನ ರಾಣಿ ಕ್ಲಿಯೋಪಾಟ್ರ. ಇವರಿಬ್ಬರ ಸುತ್ತ ಪ್ರೇಮದ ಕಥೆ ಇದೆ. ತನ್ನ ಪ್ರೇಮ ಹಾಗೂ ಕರ್ತವ್ಯ ಈ ಎರಡಕ್ಕೂ ಅಷ್ಟೇ ಮಹತ್ವವನ್ನು ಕಾಯ್ದುಕೊಂಡು ಹೋಗುವ ವಸ್ತು ಇಲ್ಲಿದೆ. ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಸರಳ ಭಾಷೆಯಲ್ಲಿ ಸಣ್ಣ ವೃತ್ತಾಂತವಾಗಿ ನಾಟಕವನ್ನು ಪರಿವರ್ತಿಸಲಾಗಿದೆ.

About the Author

ಎಲ್.ಎಸ್. ಶೇಷಗಿರಿರಾವ್
(16 February 1925 - 20 December 2019)

ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಎಲ್.ಎಸ್. ಶೇಷಗಿರಿರಾವ್ ಅವರು ಪ್ರಬುದ್ಧ ವಿಮರ್ಶಕರೆಂದೇ ಖ್ಯಾತರು. ತಂದೆ ಸ್ವಾಮಿರಾವ್- ತಾಯಿ ಕಮಲಾಬಾಯಿ. 1925ರ ಫೆಬ್ರುವರಿ 16ರಂದು ಜನಿಸಿದರು. ಬೆಂಗಳೂರು ಮೈಸೂರುಗಳಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ನಾಗಪುರ ವಿ.ವಿ.ಯಲ್ಲಿ ಇಂಗ್ಲಿಷ್ ಎಂ.ಎ. ಪದವೀಧರರಾದರು. ಕಾಲೇಜು ಶಿಕ್ಷಣ ಇಲಾಖೆಗೆ ಸೇರಿ ಕೋಲಾರ, ಮಡಿಕೇರಿ, ಬೆಂಗಳೂರುಗಳಲ್ಲಿ ಕಾಲೇಜು ಅಧ್ಯಾಪಕರಾಗಿ ಕೊನೆಯಲ್ಲಿ ಕೆಲವುಕಾಲ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು. 1947-50ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷರಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಥಮ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ...

READ MORE

Related Books