ಗುಳಿಯಪ್ಪ ಮತ್ತು ಕೋರೆಹಲ್ಲು

Author : ಕಾತ್ಯಾಯಿನಿ ಕುಂಜಿಬೆಟ್ಟು

Pages 120

₹ 100.00




Year of Publication: 2018
Published by: ನಿವೇದಿತಾ ಪ್ರಕಾಶನ
Address: ಬೆಂಗಳೂರು

Synopsys

ಗುಳಿಯಪ್ಪ ಮತ್ತು ಕೋರೆಹಲ್ಲು - ಈ ಕೃತಿಯು ಕಾತ್ಯಾಯಿನಿ ಕುಂಜಿಬೆಟ್ಟು ಅವರು ರಚಿಸಿದ ಮಕ್ಕಳ ಎರಡು ನಾಟಕಗಳ ಸಂಕಲನವಾಗಿದೆ. ನಿದ್ರಾನಗರಿ ಮಕ್ಕಳ ನಾಟಕದ ಮೂಲಕ ನಾಟಕಕ್ಷೇತ್ರದಲ್ಲಿ ಗಟ್ಟಿಯಾದ ಹೆಜ್ಜೆಯನ್ನೇ ಇಟ್ಟಿದ್ದಾರೆ. ‘ಮೊಲಂ ಸಿಂಹಮಂ ಕೊಂದ ಕತೆ’, ಹಿಮಮಣಿ, ಗುಳಿಯಪ್ಪ, ಕೋರೆಹಲ್ಲು ನಾಟಕಗಳು ಮಕ್ಕಳ ಮನಕ್ಕೆ ಲಗ್ಗೆ ಇಟ್ಟಿವೆ. ಮಕ್ಕಳ ನಾಟಕಗಳ ಕೊರತೆಯನ್ನು ಎದುರಿಸುತ್ತಿರುವ ಕನ್ನಡ ರಂಗಭೂಮಿಗೆ ಗುಳಿಯಪ್ಪ ಮತ್ತು ಕೋರೆಹಲ್ಲು ನಾಟಕಗಳು ವಿಶೇಷ ಕೊಡುಗೆಯಾಗಿವೆ.

About the Author

ಕಾತ್ಯಾಯಿನಿ ಕುಂಜಿಬೆಟ್ಟು

ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ಹುಟ್ಟೂರು ಉಡುಪಿಯ ಕಾಪು ಬಳಿಯ ಕರಂದಾಡಿ, ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಮುಂಬೈ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯದಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ “ವಿಶಾರದ' ಪದವಿ.  ತುಳು ಕಾದಂಬರಿ 'ಕಬರ್ಗತ್ತಲೆ'ಗೆ ತುಳುಕೂಟ(ರಿ) ಉಡುಪಿಯ 'ಪಣಿಯಾಡಿ ಪ್ರಶಸ್ತಿ’,  ಕನ್ನಡ ಕಾದಂಬರಿ 'ತೊಗಲುಗೊಂಬೆ'ಗೆ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ 'ಮಲ್ಲಿಕಾ' ಪ್ರಶಸ್ತಿ ಹಾಗೂ ಮೂಡಬಿದರೆಯ ವರ್ಧಮಾನ ಪ್ರತಿಷ್ಠಾನದ 'ಯುವ ವರ್ಧಮಾನ ಪ್ರಶಸ್ತಿ'; 'ಒಳದನಿಯ ಪಲುಕುಗಳು' ವಿಮರ್ಶಾಕೃತಿಗೆ ಕ.ಸಾ.ಪ. ಲೀಲಾವತಿ ಗುರುಸಿದ್ದಪ್ಪ ಸಿಂಧೂರ ದತ್ತಿ ಪ್ರಶಸ್ತಿ, ಡಾ. ದ. ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ದ.ರಾ.ಬೇಂದ್ರೆ ...

READ MORE

Related Books