ಕಿರುನಾಟಕಗಳು

Author : ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ (ತಿರುಕ)

Pages 46

₹ 145.00




Year of Publication: 1991
Published by: ಅನಾಥಸೇವಾಶ್ರಮ ವಿಶ್ವಸ್ತ ಸಮಿತಿ
Address: ಮಲ್ಲಾಡಿಹಳ್ಳಿ- 577531, ಹೊಳಲ್ಕೆರೆ ತಾಲ್ಲೂಕು

Synopsys

‘ಕಿರುನಾಟಕಗಳು’ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ ಅವರು ಮಕ್ಕಳಿಗಾಗಿ ಬರೆದ ನಾಟಕಗಳ ಸಂಕಲನ. ಈ ಕೃತಿಯಲ್ಲಿ ಭಾರತ್ ಮಾತಾಕೀ ಜೈ! ರಾಷ್ಟ್ರ ಮಾತಾ ಕೀ ಜೈ, ಚಾ ಚಾ ಔಟ್ (ಒಂದು ಕಿರು ಪ್ರಹಸನ), ಚಾಚಾ ನೆಹರು, ಚತುರ ಗಣಪತಿ(ನೃತ್ಯ ರೂಪಕ), ರಸಿಕ ಗಣಪತಿ, ಕೃಷ್ಣ ಗೋಪಿಯರ ನಿರ್ವ್ಯಾಜ ಪ್ರೇಮ, ಅಳ್ಬೇಡ್ರಪ್ಪಾ-ನಗ್ರೀ ನಗ್ರೀ, ಮೃಗ ಪಕ್ಷಿಗಳ ವಾರ್ಷಿಕೋತ್ಸವ ಎಂಬ ಎಂಟು ಮಕ್ಕಳ ನಾಟಕಗಳು ಸಂಕಲನಗೊಂಡಿವೆ.

About the Author

ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ (ತಿರುಕ)
(18 March 1891 - 04 August 1996)

ಕೇರಳದಲ್ಲಿ ಹುಟ್ಟಿ, ಚಿತ್ರದುರ್ಗ ಜಿಲ್ಲೆಯ, ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿ ಹಳ್ಳಿಯಲ್ಲಿದ್ದು, ತಿರುಕ ಎಂ ಕಾವ್ಯನಾಮದೊಂದಿಗೆ ಬೆಳೆದವರು. ತಂದೆ ಅನಂತ ಪದ್ಮನಾಭ ನಂಬೂದರಿ, ತಾಯಿ ಪದ್ಮಂಬಾಳ್. ಈ ಮಗುವಿಗೆ ದೇಹ ವಿಕಾರ ಹಾಗೂ ಮೆದುಳಿನ ಬೆಳವಣಿಗೆ ಸರಿಯಾಗಿರಲಿಲ್ಲ. ಮೂಕಾಂಬಿಕ ದರ್ಶನಕ್ಕೆ ಬಂದಿದ್ದ ದಂಪತಿ ಬಾರಕೂರಿನಲ್ಲಿ ತಂಗಿದ್ದರು. ಆ ಹಾದಿಯಲ್ಲಿ ಉಡುಪಿಗೆ ಹೊರಟಿದ್ದ ಮಂತ್ರಾಲಯದ ಪೀಠಸ್ಥ ಸ್ವಾಮಿಗಳು ಈ ಮಗುವನ್ನು ಕಂಡು ಕೀರ್ತಿವಂತನಾಗುವುದಾಗಿ ಹರಸುತ್ತಾರೆ.  ತಂದೆ ಈ ಮಗುವನ್ನು ಸಾಕಲಾಗದೆ ಅತಿಥೇಯರಾಗಿದ್ದ ನರಸಿಂಹಯ್ಯ – ಪುತಲೀ ಬಾಯಿ ಅವರಿಗೆ ದತ್ಯತು ಕೊಟ್ಟು ಯಾತ್ರೆ ಹೊರಡುತ್ತಾರೆ. ಈ ಮಗು ಮುಂದೆ ರಾಘವೇಂದ್ರ ಎಂದು ನಾಮಕರಣವಾಗುತ್ತದೆ. ಕುಂದಾಪುರದ ಶಾಲೆಗೆ. ...

READ MORE

Related Books