ಕಾವೇರಿ ಅವರ ಚಿತ್ರ ಪುಸ್ತಕ ‘ಚಿಟ್ಟೆ’. ಅವರು 3ನೇ ತರಗತಿಯಲ್ಲಿ ಓದುತ್ತಿದ್ದಾಗ ಈ ಚಿತ್ರಗಳನ್ನು ಒಂದು ನಿರೂಪಣಾ ಚೌಕಟ್ಟಿನೊಳಗೆ ಚಿತ್ರಿಸಿದ್ದರು, ಎಲ್ಲರ ಪುಸ್ತಕ ಪ್ರಕಾಶನವು ಈ ಪುಸ್ತಕವನ್ನು 'ಮಕ್ಕಳು ರೂಪಿಸಿದ ಚಿತ್ರ ಪುಸ್ತಕ' ಎಂಬ ಸರಣಿಯಲ್ಲಿ, ಮೊದಲ ಪುಸ್ತಕವಾಗಿ ಪ್ರಕಟಿಸುತ್ತಿದೆ. ಮಕ್ಕಳನ್ನು ಹದ್ದುಬಸ್ತಿನಲ್ಲಿಡಬೇಕು ಎಂಬ ಸಾಮಾಜಿಕ ವ್ಯವಸ್ಥೆಯೊಳಗೆ ಚಿತ್ರಗಳು ಮಾತ್ರ ನಿಷ್ಠುರವಾಗಿ ಸತ್ಯಗಳನ್ನು ಹೇಳಬಲ್ಲವು. ಸುತ್ತಮುತ್ತಲಿನ ಸಮಾಜವನ್ನು ಹೆಚ್ಚು ಸಹ್ಯಗೊಳಿಸಬೇಕು ಎಂದಾದರೆ ಮಕ್ಕಳ ಸೃಜನಶೀಲತೆಗೆ ದಾರಿ ಮಾಡಿಕೊಡಬೇಕು.
©2022 Book Brahma Private Limited.