ಅಪೂರ್ವ

Author : ಅರ್.ಕೆ. ಶಾನಭೋಗ

Pages 78

₹ 40.00




Year of Publication: 2000
Published by: ನಿರ್ಮಲ ಪ್ರಕಾಶನ
Address: ಸಂತೋಷ ಸಾಗರ, ಗೋವಿನ ಪುರ, ತಿಪಟೂರು-572 202

Synopsys

ಆರ್.ಕೆ. ಶಾನಭೋಗ ಅವರು ಮಕ್ಕಳಿಗಾಗಿ ಬರೆದ ನಾಟಕ-ಅಪೂರ್ವ. ಮಕ್ಕಳ ಸಾಹಿತ್ಯ ರೂಪುಗೊಳ್ಳುತ್ತಿದೆ ಎಂದರೂ ಕಡಿಮೆ. ಅದರಲ್ಲೂ ಮಕ್ಕಳ ನಾಟಕಗಳು ಕಡಿಮೆ. ತೀರಾ ಸರಳ ಸಂಭಾಷಣೆಗಳು, ಸನ್ನಿವೇಶಗಳ ಜೋಡಣೆ, ಮನರಂಜನೆ ಜೊತೆಗೆ ಬೋಧನೆಯೂ ಇರುವುದು ಮಕ್ಕಳ ನಾಟಕದ ಪ್ರಮುಖ ಲಕ್ಷಣ. ಈ ಎಲ್ಲ ನಿಟ್ಟಿನಿಂದ ಎಚ್ಚರವಹಿಸಿ ಲೇKಕ ಆರ್.ಕೆ. ಶಾನಭೋಗ ಅವರು ರಚಿಸಿದ ಕೃತಿ.

ಬಡ ಹುಡುಗಿ ಅಪೂರ್ವ. ಅವಳ ಕರವಸ್ತ್ರ ಗಾಳಿಗೆ ಹಾರಿ ಗಿಡದ ಪೊಟರೆಗೆ ಸಿಕ್ಕಿಹಾಕಿಕೊಳ್ಳುತ್ತದೆ. ಗಿಡ ಹತ್ತಿ ನೋಡಿದರೆ ಏನಾಶ್ಚರ್ಯ? ಈ ಪೊಟರೆಯೊಳಗೆ ಏನಿತ್ತು? ಅದು ಅದ್ಭುತ ಲೋಕ. ಇದರ ಸುತ್ತ ನಾಟಕದ ಕಥಾ ವಸ್ತು ಸುತ್ತುತ್ತದೆ. ಮಕ್ಕ:ಳಿಗಾಗಿ ಬರೆದ ರಮ್ಯ ನಾಟಕ. ನಿಸರ್ಗದ ವೈಚಿತ್ಯ್ರಗಳ ಬಗ್ಗೆ ಈ ನಾಟಕ ಉತ್ತಮ ಸಂದೇಶ ನೀಡುತ್ತದೆ.

About the Author

ಅರ್.ಕೆ. ಶಾನಭೋಗ
(04 July 1957)

ರಾಜಗೋಪಾಲ ಕೃಷ್ಣರಾವ್ ಶಾನಭೋಗ (ಆರ್.ಕೆ. ಶಾನಭೋಗ) ಅವರು ಧಾರವಾಡದವರು. (ಜನನ: 04-07-1957)  ಬಿ.ಕಾಂ ಪದವೀಧರರು. ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕಾರಿಯಾಗಿ ನಿವೃತ್ತರು. ‘ಅಪೂರ್ವ -ಇವರ ಮೊದಲ ಮಕ್ಕಳ ನಾಟಕವಾಗಿದ್ದು ಕರ್ನಾಟಕ ರಾಜ್ಯ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಮಕ್ಕಳ ರತ್ನ ಪ್ರಶಸ್ತಿ ಪಡೆದಿದೆ.  ‘ಪಾರಿತೋಷ’ ಎಂಬುದು ಇವರ ನಾಟಕ .ರಾಜ್ಠದಲ್ಲಿ ಹಲವು ಪ್ರದರ್ಶನಗಳನ್ನು ಕಂಡಿದೆ.  ಅಂಟಾರ್ಕಟಿಕಾ-ಇದು ಮೊದಲ ಮಕ್ಕಳ ಕಾದಂಬರಿ . 2012ರಲ್ಲಿ ಉಪ್ಪಿನಕಾಯಿಯ ಅತ್ತೆ ಎಂಬ ಮಕ್ಕಳ ನಾಟಕವಾಗಿದ್ದು, ಮಕ್ಕಳ ಕವನಗಳನ್ನು ಸಹ ರಚಿಸಿದ್ದಾರೆ. 2001ನೇ ವರ್ಷದ ಸಾಹಿತ್ಯ ಅಕಾಡೆಮಿಯ ಮಕ್ಕಳ ಸಾಹಿತ್ಯ ಸಂಚಿಕೆಯ ಗೌರವ ಸಂಪಾದಕರಾಗಿದ್ದರು. ಮಹಾರಾಷ್ಟ್ರ ರಾಜ್ಯದ ...

READ MORE

Related Books