ಶಾಲಾ ಅಂಗಳಕ್ಕೆ ಮಕ್ಕಳ ನಾಟಕಗಳು ಸಂಪುಟ-2

Author : ಬಿ.ವಿ. ರಾಜಾರಾಂ

Pages 148

₹ 72.00




Year of Publication: 2011
Published by: ಬಿ.ವಿ. ರಾಜಾರಾಂ
Address: # 263, 6ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-560 010
Phone: 9448069667

Synopsys

ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದ ಡಾ. ಬಿ.ವಿ.ರಾಜಾರಾಂ ಅವರು ಸುವರ್ಣ ಕರ್ನಾಟಕದ ನೆನಪಿಗಾಗಿ ( ಮೊದಲ ವರ್ಷ 2008) 50 ನಾಟಕಗಳನ್ನು ಸಂಪಾದಿಸಿದ್ದು, ಅವುಗಳಿಗೆ ಶಾಲಾ ಅಂಗಳದಲ್ಲಿ ಮಕ್ಕಳ ನಾಟಕಗಳು’ ಶೀರ್ಷಿಕೆ ನೀಡಿ 8 ಸಂಪುಟಗಳಲ್ಲಿ ಪ್ರಕಟಿಸಿದ್ದರು. ನಂತರ ಅವರ ಅವಧಿಯ ಕೊನೆಯ ವರ್ಷದ ಹೊತ್ತಿಗೆ ಈ ರೀತಿಯ ನಾಟಕಗಳು ಕೃತಿ ರೂಪದಲ್ಲಿ ಒಟ್ಟು 15 ಸಂಪುಟಗಳಾಗಿ ಪ್ರಕಟಗೊಂಡಿವೆ. ವಿವಿಧ ಲೇಖಕರು ಮಕ್ಕಳ ಮನೋವಿಕಾಸದ ದೃಷ್ಟಿಯಿಂದ ಬರೆದ ಇಲ್ಲಿಯ ನಾಟಕಗಳು ಪುರಾಣವನ್ನು ನೆನಪಿಸುತ್ತವೆ. ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರವನ್ನುಸೂಚಿಸುತ್ತವೆ. ಸೌಹಾರ್ದದ ಬದುಕಿನ ಅನಿವಾರ್ಯತೆ ಹಾಗೂ ಅಗತ್ಯವನ್ನು ಪ್ರತಿಪಾದಿಸುತ್ತವೆ. ಮಕ್ಕಳ ಮನಸ್ಸಿಗೆ ಮುದ ನೀಡುವುದು ಮಾತ್ರವಲ್ಲ; ಅವರ ಕಾಲ್ಪನಿಕ ಲೋಕವನ್ನು ವಿಸ್ತರಿಸುತ್ತವೆ. ಈ ಬೃಹತ್ ಯೋಜನೆಯ ಸಂಪುಟ-2ರ ಕೃತಿ ಇದು.

About the Author

ಬಿ.ವಿ. ರಾಜಾರಾಂ

ನಟ, ರಂಗಕರ್ಮಿ ಬಿ.ವಿ. ರಾಜಾರಾಂ ಅವರು ಕನ್ನಡ ರಂಗಭೂಮಿಯ ಅದ್ಭುತ ನಟರು. ಕಿರುತೆರೆ ಹಿರಿತೆರೆಗಳಲ್ಲಿಯೂ ನಡಿಸಿರುವ ಇವರು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ಮೈಸೂರಿನ ರಂಗಾಯಣದ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿರುವ ಇವರಿಗೆ ಕರ್ನಾಟಕ ರಾಜ್ಯೋತ್ಸವ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ. ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿದ್ದ ಇವರು ಮಕ್ಕಳಿಗಾಗ ‘ಶಾಲಾ ಅಂಗಳಕ್ಕೆ ಮಕ್ಕಳ ನಾಟಕಗಳು; ಕೃತಿಯನ್ನು ರಚಿಸಿದ್ದಾರೆ.  ...

READ MORE

Related Books