ಎಲ್ಲವೂ ಒಳ್ಳೆಯದು ಮುಕ್ತಾಯವೂ ಒಳ್ಳೆಯದೇ

Author : ಎಲ್.ಎಸ್. ಶೇಷಗಿರಿರಾವ್

₹ 55.00




Year of Publication: 2017
Published by: ಸಪ್ನ ಬುಕ್ ಹೌಸ್
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು
Phone: 08040114455

Synopsys

All's Well Thats Ends Well-ಎಂಬುದು ಶೆಕ್ಸ್ ಪಿಯರ್ ನ ನಾಟಕ. ಶೆಕ್ಸ್ ಪಿಯರ್ ಮಕ್ಕಳ ಕಥಾಲೋಕ ಸರಣಿಯಡಿ ಈ ಕೃತಿ ಪ್ರಕಟಿಸಿದೆ. ಪ್ರೊ. ಎಲ್.ಎಸ್. ಶೇಷಗಿರಿರಾವ್ ಅವರು ಈ ನಾಟಕವನ್ನು `ಎಲ್ಲವೂ ಒಳ್ಳೆಯದು ಮುಕ್ತಾಯವೂ ಒಳ್ಳೆಯದೇ’ ಶೀರ್ಷಿಕೆಯಡಿ  ಸಣ್ಣ ವೃತ್ತಾಂತವಾಗಿಸಿ, ಮಕ್ಕಳಿಗೆ ತಿಳಿಯುವ ಹಾಗೆ ಸರಳ ಭಾಷೆಯಲ್ಲಿ ರಚಿಸಿದ್ದಾರೆ. ಒಬ್ಬ ಪ್ರಸಿದ್ಧ ವೈದ್ಯನ ತಬ್ಬಲಿ ಮಗಳು (ಹೆಲನ್) ಹಾಗೂ ಅವಳ ಪೋಷಕಳ ಮಗನ (ಬರ್ ಟ್ಯ್ರಾಮ್) ಮಧ್ಯೆ ಇರುವ ಸಂಬಂಧವು ಈ ನಾಟಕ ವಸ್ತು. ಹೆಲನ್ ಗೆ ಪ್ರೇಮವಿದ್ದು, ಬರ್ ಟ್ಯ್ರಾಮ್ ನಲ್ಲಿ ಅವಳ ಬಗ್ಗೆ ಪ್ರೇಮವಿರದು. ಆದರೂ, ಆತನೇ ತನ್ನ ಪತ್ನಿಯನ್ನಾಗಿಸಲು ಏನೆಲ್ಲ ಕಸರತ್ತು ಮಾಡುತ್ತಾಳೆ. ಆದದ್ದೆಲ್ಲವೂ ಒಳಿತೇ ಆಗುತ್ತದೆ. ಆಗುವುದೆಲ್ಲವೂ ಒಳಿತೇ ಆಗುವುದು ಎಂಬ ಭಗವದ್ಗೀತೆಯ ಸಂದೇಶವು ಈ ನಾಟಕದ ವಸ್ತುವೂ ಆಗಿದೆ. ಲಲಿತ ಶೈಲಿಯ ಚಿತ್ರಗಳು ಮಕ್ಕಳನ್ನು ಸೆಳೆಯುತ್ತವೆ.

About the Author

ಎಲ್.ಎಸ್. ಶೇಷಗಿರಿರಾವ್
(16 February 1925 - 20 December 2019)

ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಎಲ್.ಎಸ್. ಶೇಷಗಿರಿರಾವ್ ಅವರು ಪ್ರಬುದ್ಧ ವಿಮರ್ಶಕರೆಂದೇ ಖ್ಯಾತರು. ತಂದೆ ಸ್ವಾಮಿರಾವ್- ತಾಯಿ ಕಮಲಾಬಾಯಿ. 1925ರ ಫೆಬ್ರುವರಿ 16ರಂದು ಜನಿಸಿದರು. ಬೆಂಗಳೂರು ಮೈಸೂರುಗಳಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ನಾಗಪುರ ವಿ.ವಿ.ಯಲ್ಲಿ ಇಂಗ್ಲಿಷ್ ಎಂ.ಎ. ಪದವೀಧರರಾದರು. ಕಾಲೇಜು ಶಿಕ್ಷಣ ಇಲಾಖೆಗೆ ಸೇರಿ ಕೋಲಾರ, ಮಡಿಕೇರಿ, ಬೆಂಗಳೂರುಗಳಲ್ಲಿ ಕಾಲೇಜು ಅಧ್ಯಾಪಕರಾಗಿ ಕೊನೆಯಲ್ಲಿ ಕೆಲವುಕಾಲ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು. 1947-50ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷರಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಥಮ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ...

READ MORE

Related Books