ಏನೂ ಇಲ್ಲದೆ ಗೊಂದಲ

Author : ಎಲ್.ಎಸ್. ಶೇಷಗಿರಿರಾವ್

₹ 55.00




Year of Publication: 2017
Published by: ಸಪ್ನ ಬುಕ್ ಹೌಸ್
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-560001
Phone: 08040114455

Synopsys

Much Ado About Nothing ಎಂಬುದು ಶೆಕ್ಸ್ ಪಿಯರ್ ನ ವೈನೋದಿಕ ನಾಟಕ ಪೈಕಿ ಒಂದು. ಲೇಖಕ ಪ್ರೊ.ಎಲ್.ಎಸ್. ಶೇಷಗಿರಿರಾವ್ ಅವರು ಮಕ್ಕಳಿಗೆ ಈ ನಾಟಕವನ್ನು ಒಂದು ಸಣ್ಣ ವೃತ್ತಾಂತವಾಗಿ ಪರಿವರ್ತಿಸಿದ್ದಾರೆ. ಸಿಸಿಲಿಯಲ್ಲಿರುವ ಮೆಸಿನ್ ಎಂಬ ಗ್ರಾಮದಲ್ಲಿ ನಾಟಕ ನಡೆಯುತ್ತದೆ. ಪ್ರೇಮಿಗಳ ಎರಡು ಜೋಡಿಗಳು ಲಿಯೋನೆಟ್ ಎಂಬುವರ ಮನೆಯಲ್ಲಿ ಭೇಟಿಯಾಗುತ್ತಾರೆ. ಬೆನೆಡಿಕ್ ಮತ್ತು ಬ್ರಿಯಾಟ್ರಿಕ್ ಎಂಬುದು ಒಂದು ಜೋಡಿ. ಕ್ಲಾಡಿಯೊ ಮತ್ತು ಹೀರೋ ಮತ್ತೊಂದು ಜೋಡಿ. ಬೆನೆಡಿಕ್ -ಬ್ರಿಯಾಟ್ರಿಕ್ ತಾವಿಬ್ಬರ ಪರಸ್ಪರ ಪ್ರೇಮಿಸುವುದಾಗಿ ಹೇಳಿಕೊಂಡರೆ ಕ್ಲಾಡಿಯೋ ಹಾಗೂ ಹೀರೋ ಪರಸ್ಪರ ಬೇರೆ ಬೇರೆಯಾಗುತ್ತಾರೆ. ಇದು ನಾಟಕದ ಅನಿರೀಕ್ಷಿತ ತಿರುವು. ಇಂತಹ ಒಂದು ಗಂಭೀರ ಸನ್ನಿವೇಶವನ್ನು ಮಕ್ಕಳಿಗೆ ಸರಳವಾಗಿ ತಿಳಿಯುವ ಹಾಗೆ ನಾಟಕವನ್ನು ಸಂಕ್ಷಿಪ್ತಗೊಳಿಸಲಾಗಿದೆ.

About the Author

ಎಲ್.ಎಸ್. ಶೇಷಗಿರಿರಾವ್
(16 February 1925 - 20 December 2019)

ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಎಲ್.ಎಸ್. ಶೇಷಗಿರಿರಾವ್ ಅವರು ಪ್ರಬುದ್ಧ ವಿಮರ್ಶಕರೆಂದೇ ಖ್ಯಾತರು. ತಂದೆ ಸ್ವಾಮಿರಾವ್- ತಾಯಿ ಕಮಲಾಬಾಯಿ. 1925ರ ಫೆಬ್ರುವರಿ 16ರಂದು ಜನಿಸಿದರು. ಬೆಂಗಳೂರು ಮೈಸೂರುಗಳಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ನಾಗಪುರ ವಿ.ವಿ.ಯಲ್ಲಿ ಇಂಗ್ಲಿಷ್ ಎಂ.ಎ. ಪದವೀಧರರಾದರು. ಕಾಲೇಜು ಶಿಕ್ಷಣ ಇಲಾಖೆಗೆ ಸೇರಿ ಕೋಲಾರ, ಮಡಿಕೇರಿ, ಬೆಂಗಳೂರುಗಳಲ್ಲಿ ಕಾಲೇಜು ಅಧ್ಯಾಪಕರಾಗಿ ಕೊನೆಯಲ್ಲಿ ಕೆಲವುಕಾಲ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು. 1947-50ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷರಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಥಮ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ...

READ MORE

Related Books