ಬೇಂದ್ರೆ ರಂಗಗೀತೆಗಳು

Author : ದ.ರಾ. ಬೇಂದ್ರೆ (ಅಂಬಿಕಾತನಯದತ್ತ)

Pages 152

₹ 120.00




Year of Publication: 2007
Published by: ಶ್ರೀಮಾತಾ ಪ್ರಕಾಶನ
Address: ವಿಶ್ವಶ್ರಮ ಚೇತನ, ಹುಬ್ಬಳ್ಳಿ-580 003

Synopsys

ಕವಿ ಎಂದು ಸಾಹಿತ್ಯ ಪ್ರಿಯರಿಗೆ ಚಿರಪರಿಚಿತರಿರುವ ಬೇಂದ್ರೆಯವರು ನಾಟಕಕಾರರು ಕೂಡ. ಅವರ ಹದಿನೈದು ನಾಟಕಗಳು ಪ್ರಕಟವಾಗಿವೆ. ನಾಟಕದ ಭಾಗವಾಗಿ ಬೇಂದ್ರೆಯವರು ಕವಿತೆಗಳನ್ನು ರಚಿಸಿದ್ದರು. ಅವುಗಳನ್ನು ರಂಗಗೀತೆಗಳು ಎಂದು ವಿಂಗಡಿಸಿ ಕವಿಪುತ್ರ ವಾಮನ ಬೇಂದ್ರೆಯವರು ಸಂಗ್ರಹಿಸಿ ಪ್ರಕಟಿಸಿದ ಸಂಕಲನ. ಈ ಸಂಕಲನದಲ್ಲಿ ಬೇಂದ್ರೆಯವರು ನಾಟಕಗಳಿಗಾಗಿ ರಚಿಸಿದ ಗೀತೆಗಳನ್ನು ಸೇರಿಸಲಾಗಿದೆ.

About the Author

ದ.ರಾ. ಬೇಂದ್ರೆ (ಅಂಬಿಕಾತನಯದತ್ತ)
(31 January 1896 - 26 October 1981)

ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ 1896ರ ಜನವರಿ 31ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ (1913) ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (1918) ಪದವಿ ಪಡೆದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. (1935) ಪದವಿ ಪೂರ್ಣಗೊಳಿಸಿದರು. ಗದುಗಿನ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ವೃತ್ತಿ ಆರಂಭಿಸಿದ ಅವರು ನಂತರ ಹುಬ್ಬಳ್ಳಿಯ ನ್ಯೂ ...

READ MORE

Related Books