ಕುಮಾರವ್ಯಾಸನ ಕರ್ಣಾಟಭಾರತ ಕಥಾ ಮಂಜರಿ ಪ್ರವೇಶ

Author : ಜಿ.ಎಸ್. ಭಟ್

Pages 108

₹ 75.00




Year of Publication: 2006
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಎಂದು ಕವಿ ಕುವೆಂಪು ಅವರು ಬರೆದಿದ್ದಾರೆ. ಕುಮಾರವ್ಯಾಸ ರಚಿಸಿದ ’ಕರ್ನಾಟ ಭಾರತ ಕಥಾಮಂಜರಿ’ಯು ಕನ್ನಡದ ಅತ್ಯಂತ ಜನಪ್ರಿಯ ಕಾವ್ಯ. ಭಾಮಿನಿ ಷಟ್ಪದಿಯಲ್ಲಿನ ಸರಳ ನಿರೂಪಣೆಯಿಂದ ಓದುಗರಿಗೆ-ಕೇಳುಗರಿಗೆ ಪ್ರಿಯವಾಗುವ ಕಾವ್ಯ. ಕುಮಾರವ್ಯಾಸ ಭಾರತದ ಓದು ಆರಂಭಿಸುವವರನ್ನು ಗಮನದಲ್ಲಿಟ್ಟುಕೊಂಡು ಈ ಕೃತಿ ರಚಿತವಾಗಿದೆ. 

About the Author

ಜಿ.ಎಸ್. ಭಟ್

ಹಿರಿಯ ಲೇಖಕ ಜಿ.ಎಸ್ ಭಟ್ (ಸಾಗರ) 1944ರಲ್ಲಿ ಹೊನ್ನಾವರದ ಗಜನಿ ಮಠದಲ್ಲಿ ಜನಿಸಿದರು. ಸಾಗರದ ಲಾಲ ಬಹುದ್ದೂರ್ ಶಾಸ್ತ್ರೀ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ನಿವೃತ್ತರಾಗಿರುವ ಜಿ.ಎಸ್ ಭಟ್ ಅವರು ಯಕ್ಷಗಾನ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಮತ್ತು ಪರಿಣತಿ ಹೊಂದಿರುವರು. ಇವರು ಯಕ್ಷಗಾನ ಕುರಿತ ಸಂಶೋಧನಾ ಲೇಖನಗಳು, ಕತೆ, ಕವಿತೆ, ಅಂಕಣಗಳಲ್ಲಿ ತಮ್ಮ ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ. ರಂಗಭೂಮಿ, ಯಕ್ಷಗಾನ ವಿದ್ವಾಂಸರಾಗಿರುವ ಅವರು ಸಾಂಸ್ಕೃತಿಕ, ಸಂಘಟಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.  ಕೃತಿಗಳು: ಕುಮಾರವ್ಯಾಸನ ಕರ್ಣಾಟಭಾರತ ಕಥಾ ಮಂಜರಿ ಪ್ರವೇಶ, ರಾಘವಾಂಕನ ಹರಿಶ್ಚಂದ್ರಕಾವ್ಯ ಪ್ರವೇಶ, ಅಕ್ಕಮ್ಮಜ್ಜಿಯ ಗಂಡನೂ ವಾಣಾಸಜ್ಜನ ಹೆಣ್ತಿಯೂ, ಕೆರೆಮನೆ ಶಂಭು ಹೆಗಡೆ ಅಧ್ಯಯನ, ಪಾವೆಂ ಕಸ್ತೂರಿ, ಮಂಜೀ ಮಹಾದೇವನ ಗಂಜೀ ಪುರಾಣ, ನೆನಪಿನ ರಂಗಸ್ಥಳ,    ...

READ MORE

Related Books