ಉತ್ತರಾಯಣ

Author : ವ್ಯಾಸರಾಯ ಬಲ್ಲಾಳ

₹ 40.00




Year of Publication: 1969
Published by: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು

Synopsys

ಲೇಖಕ ವ್ಯಾಸರಾಯರ ಬಲ್ಲಾಳ ಅವರ ಕಾದಂಬರಿ ಕೃತಿ ʻಉತ್ತರಾಯಣʼ. ಮುಂಬಯಿ ಮಧ್ಯಮ ಹಾಗು ಮಧ್ಯಮೋತ್ತಮ ವರ್ಗಗಳ ಜೀವನದ ಹಿನ್ನೆಲೆಯಲ್ಲಿ ಕತೆ ಹೆಣೆಯಲಾಗಿದೆ. ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿನ ಸಹೋದರಿಯರಿಬ್ಬರು ಮುಖ್ಯ ಭೂಮಿಕೆಯಲ್ಲಿ ಕಾಣುತ್ತಾರೆ. ಗಂಡ ಮತ್ತು ಪುಟ್ಟ ಮಗುವನ್ನು ಕಳೆದುಕೊಂಡ ನತದೃಷ್ಟ ವಿಧವೆಯಂತಿರುವ ಅಕ್ಕ ರುಕ್ಮಿಣಿ, ತಾನು ಒಲ್ಲದ ಗಂಡನ ಜೊತೆ ಸಂಸಾರದಲ್ಲಿ ತನ್ನ ಕನಸಿನ ಜೀವನವನ್ನು ಕಂಡುಕೊಳ್ಳಲಾರದೆ ಸುತ್ತ ಇರುವ ಸಾಂಪ್ರದಾಯಿಕ ಮತ್ತು ಸಾಮಾಜಿಕ ಕಟ್ಟುಪಾಡುಗಳನ್ನು ಲಕ್ಷಿಸದೆ, ತಾನು ಕಂಡ ಕನಸುಗಳ ಬೆನ್ನು ಹತ್ತಿದ ತಂಗಿ ಹೇಮಾವತಿ ಹಾಗೂ ಭಗ್ನಪ್ರೇಮದ ಫಲವಾಗಿ ಮಾನಸಿಕ ಸ್ತಿಮಿತ ಕಳೆದುಕೊಂಡ ಅಣ್ಣ ಗೋವಿಂದ. ಈ ಇಬ್ಬರು ಸಹೋದರಿಯರ ಮಧ್ಯೆ ಅನಿರೀಕ್ಷಿತವಾಗಿ ರುಕ್ಮಿಣಿ ಕೆಲಸ ಮಾಡುವ ಸಂಸ್ಥೆಯ ಮೇಲಾಧಿಕಾರಿ ವಿದುರ ಮೋಹನ್ ರಾವ್ ಪ್ರವೇಶಿಸುತ್ತಾನೆ. ಬಳಿಕ ಇವರಿಬ್ಬರ ಜೀವನದಲ್ಲಿ ನಡೆಯುವ ಬದಲಾವಣೆಗಳನ್ನು ಕತೆ ಹೇಳುತ್ತಾ ಹೋಗುತ್ತದೆ. ಕತೆಯಲ್ಲಿ ಉಳಿದ ಮುಖ್ಯ ಪಾತ್ರಗಳಾಗಿ ಸಾವಿತ್ರಮ್ಮ, ಅವಿನಾಶ್, ಜೋತ್ಸ್ನಾ, ಆನಂದರಾವ್ ಅವರೂ ಕಾಣಿಸುತ್ತಾರೆ. ಇಲ್ಲಿ ಮನುಷ್ಯ ಸಂಬಂಧಗಳು, ಮುಂಬಯಿ ನಗರ, ಒಂಟಿತನದ ಅನುಭವಗಳಿವೆ.

About the Author

ವ್ಯಾಸರಾಯ ಬಲ್ಲಾಳ
(01 December 1923 - 30 January 2008)

ಆರು ದಶಕಗಳ ಕಾಲ ಸಣ್ಣಕತೆಯ ಪ್ರಕಾರದಲ್ಲಿ ನಿರಂತರವಾಗಿ ತಮ್ಮ ಸೃಜನಶೀಲ ಪ್ರತಿಭೆಯನ್ನು ತೊಡಗಿಸಿಕೊಂಡು ಬಂದಿರುವ ಬಲ್ಲಾಳರು ವಸ್ತುವೈವಿಧ್ಯದಲ್ಲಿ, ಅಭಿವ್ಯಕ್ತ ವಿಧಾನದಲ್ಲಿ ಕನ್ನಡ ಕತಾ ಸಾಹಿತ್ಯಕ್ಕೆ ಸಮೃದ್ಧ ಕೊಡುಗೆ ನೀಡಿದ್ದಾರೆ. ಪ್ರಗತಿಶೀಲ ಚಳುವಳಿಯಿರಬಹುದು, ನವೋದಯ ಸಂಪ್ರದಾಯದ ರೀತಿಯಿರಬಹುದು, ನವ್ಯ ಪ್ರಜ್ಞೆಯ ಪ್ರಭಾವವಿರಬಹುದು- ಈ ಎಲ್ಲವನ್ನೂ ತಮ್ಮ ಸೃಜನಶೀಲ ಪಯಣದಲ್ಲಿ ಬಲ್ಲಾಳರು ಮುಖಾಮುಖಿಯಾಗಿದ್ದಾರೆ. ಆದರೆ ಯಾವ ಪಂಥದ ಜೊತೆಗೂ ತಮ್ಮನ್ನು ಅವರು ಸಮೀಕರಿಸಿಕೊಳ್ಳದೆ ಅನನ್ಯವೆಂಬಂತೆ ಬರೆಯುತ್ತಾ ಬಂದಿದ್ದಾರೆ. ಅವರು 1923 ಡಿಸೆಂಬರ್‌ 01ರಂದು ಉಡುಪಿಯಲ್ಲಿ ಜನಿಸಿದರು. ತಂದೆ ರಾಮದಾಸ, ತಾಯಿ ಕಲ್ಯಾಣಿ. ಮುಂಬಯಿ ಮಹಾನಗರದಲ್ಲಿ ಉದ್ಯೋಗವನ್ನರಿಸದ ಅವರು ವಿದೇಶಿ ತೈಲ ಕಂಪನಿ ಒಂದರಲ್ಲಿ ಶೀಘ್ರಲಿಪಿಕಾರರಾಗಿ ...

READ MORE

Related Books