ಚಾವುಂಡರಾಯ ವಿರಚಿತ ಚಾವುಂಡರಾಯ ಪುರಾಣ

Author : ಎಂ.ಎ. ಜಯಚಂದ್ರ

Pages 474

₹ 250.00




Year of Publication: 2012
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560072
Phone: 080-22107774

Synopsys

ಸಂಸ್ಕೃತದಲ್ಲಿ ಜಿನಸೇನ ಗುಣಭದ್ರರಿಂದ ರಚಿತವಾದ ಮಹಾಪುರಾಣದ ಸಂಗ್ರಹರೂಪವೇ ಚಾವುಂಡರಾಯನಿಂದ ರಚನೆಗೊಂಡ ಕನ್ನಡ ಮಹಾಪುರಾಣ. ರೂಢಿಯಲ್ಲಿ ಚಾವುಂಡರಾಯ ಪುರಾಣವೆಂದು ಇದು ಪ್ರಖ್ಯಾತಿಯಾಗಿದೆ. ಚಾವುಂಡರಾಯ ತನಗಿಂತ ಪೂರ್ವದಲ್ಲಿದ್ದ ಈ ಮಹಾಪುರಾಣಕಾರರಿಂದ ಪ್ರಭಾವಗೊಂಡು ತನಗೆ ಆಧಾರವಾದ ಮಹಾಪುರಾಣಗಳು ಸಂಸ್ಕೃತ ಪದ್ಯರೂಪದಲ್ಲಿದ್ದರೂ, ಕನ್ನಡ ಗದ್ಯದಲ್ಲಿ ಇವರು ಸಂಗ್ರಹಿಸಿದ್ದಾರೆ. ತೀರ್ಥಂಕರರ ಪುರಾಣದ ಮೊದಲು ಆ ತೀರ್ಥಂಕರರನ್ನು ಸ್ತುತಿಸುವ ಕಂದಪದ್ಯಗಳಿರುವುದು ಈ ಕೃತಿಯ ಹೆಚ್ಚುಗಾರಿಕೆಯಾಗಿದೆ.

About the Author

ಎಂ.ಎ. ಜಯಚಂದ್ರ
(30 January 1944)

ಎಂ.ಎ. ಜಯಚಂದ್ರ ಜೈನಸಾಹಿತ್ಯದ ಜಾನಪದ ವಿದ್ವಾಂಸರಾದ ಜಯಚಂದ್ರರವರು ಹುಟ್ಟಿದ್ದು ಮಂಡ್ಯದಲ್ಲಿ 1944 ಜನವರಿ 30 ರಂದು. ತಂದೆ ಎಂ.ಡಿ. ಆದಿರಾಜಯ್ಯ, ತಾಯಿ ಜಯಮ್ಮ. ಪ್ರಾರಂಭಿಕ ಶಿಕ್ಷಣ ಮಂಡ್ಯ. ಬೆಂಗಳೂರಿನ ವಿಜಯ ಕಾಲೇಜಿನಿಂದ ಪಡೆದ ಬಿ.ಎಸ್ಸಿ. ಪದವಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ. ಹಾಗೂ ‘ಪ್ರಾಚೀನ ಕನ್ನಡ ಜೈನ ಸಾಹಿತ್ಯದಲ್ಲಿ ಜಾನಪದ ಕಥೆಗಳು: ಒಂದು ಅಧ್ಯಯನ’ ಎಂಬ ಮಹಾಪ್ರಬಂಧ ಮಾಡಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್‌.ಡಿ.ಪದವಿ. ಬೋಧಕರಾಗಿ ಸೇರಿದ್ದು ಸರಕಾರಿ ಮಂಡ್ಯ ಕಾಲೇಜಿನಲ್ಲಿ. ಶಿಕಾರಿಪುರ, ಚಿಕ್ಕಬಳ್ಳಾಪುರ, ಬೆಂಗಳೂರಿನ ವಿಜಯಾ ಕಾಲೇಜು, ಮಹಾರಾಣಿ ಮಹಿಳಾ ಕಲಾ ಕಾಲೇಜು ಮತ್ತು ಮಂಡ್ಯದ ...

READ MORE

Related Books