ಲಕ್ಷ್ಮೀಶನ ವಚನ ಜೈಮಿನಿಭಾರತ ಸಮಗ್ರ ಗದ್ಯಾನುವಾದ

Author : ಹೆಚ್. ಸಿದ್ದಲಿಂಗಯ್ಯ

Pages 440

₹ 300.00




Year of Publication: 2015
Published by: ಸಂವಹನ
Address: ನಂ.12/1ಎ, ಸಂಜೆ ಬಜಾರ್ ಹಿಂದೆ, ಶಿವರಾಂ ಪೇಟೆ, ಮೈಸೂರು- 570001

Synopsys

‘ಲಕ್ಷ್ಮೀಶನ ವಚನ ಜೈಮಿನಿಭಾರತ’ ಸಮಗ್ರ ಗದ್ಯಾನುವಾದವನ್ನು ಲೇಖಕ ಹೆಚ್. ಸಿದ್ದಲಿಂಗಯ್ಯ ರಚಿಸಿದ್ದಾರೆ. 'ಜೈಮಿನಿ ಭಾರತ ಕನ್ನಡ ಕಾವ್ಯಲೋಕದ ಮಹತ್ವಪೂರ್ಣ ಕೃತಿ. ಇದನ್ನು ರಚಿಸಿದ ಲಕ್ಷ್ಮೀಶ ಕವಿಯು ಕರ್ಣಾಟ ಚೂತವನ ಚೈತ್ರನೂ ಹೌದು; ಚೈತ್ರವನಚೂತನೂ ಹೌದು! - 'ಕಥೆಯೊಳಗೆ ಕಥೆ ಹೇಳುವ ತಂತ್ರದಿಂದ ಸಾಗುವ ಈ ಭಾರತ ಕಾವ್ಯದೊಳಗೆ ರಾಮಾಯಣದ ಸೀತಾ ಪರಿತ್ಯಾಗವೂ ಸ್ಥಾನ ಪಡೆಯುತ್ತದೆ. ಇದು ಕಾವ್ಯಶರೀರದೊಳಗೆ ಮೈವೆತ್ತುನಿಂತ ಮಹೋಪಮೆಯೇ ಸರಿ! ಉಳಿದಂತೆ ಚಂದ್ರಹಾಸಚರಿತ್ರೆ, ಮಯೂರಧ್ವಜ ವೃತ್ತಾಂತ, ಬಬ್ರುವಾಹನ ಕಾಳಗ, ಸುಧನ್ವಮೋಕ್ಷ ಒಂದೊಂದೂ ಭಕ್ತಿ, ವೀರ, ಶೃಂಗಾರಗಳ ರಸಸೋತ! ಭಾಷೆ, ಬಂಧ, ಅಲಂಕಾರ, ಧ್ವನಿಗಳೇ ಮುಂತಾದ ಕಮನೀಯತೆಗಳಿಂದ ಕಂಗೊಳಿಸುವ ಕೆನೆವಾಲು ಕಡೆದ ನವನೀತ! ಪ್ರಸ್ತುತ ಸಿದ್ದಲಿಂಗಯ್ಯ ಅವರು ರಚಿಸಿರುವ ಜೈಮಿನಿಭಾರತದ ಗದ್ಯಾನುವಾದವು ಕಾವ್ಯಾಭ್ಯಾಸಿಗಳಿಗೆ ಒಂದು ಕೈದೀವಿಗೆ, ವಿದ್ಯಾರ್ಥಿಗಳಿಗೆ ಎಂತೋ ಅಂತೆಯೇ ವಿದ್ವಾಂಸರಿಗೂ ನೆರವಾಗಬಲ್ಲ ಒಂದು ಸಾರ್ಥಕ ಪ್ರಯತ್ನ ಎನ್ನುತ್ತಾರೆ ಕೃತಿಗೆ ಬೆನ್ನುಡಿ ಬರೆದಿರುವ ಡಾ. ಕಬ್ಬಿನಾಲೆ ವಸಂತ ಭಾರದ್ವಾಜರು.

About the Author

ಹೆಚ್. ಸಿದ್ದಲಿಂಗಯ್ಯ

ಹೆಚ್. ಸಿದ್ದಲಿಂಗಯ್ಯ ಅವರು ಮೂಲತಃ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಹೊಸಹಳ್ಳಿ ಗ್ರಾಮದವರು. ಅವರದ್ದು ರೈತ ಕುಟುಂಬ. ಹಳ್ಳಿಯಲ್ಲಿ ಪ್ರೌಢಶಾಲೆ ಶಿಕ್ಷಣ, ನಂತರ, ಕಾಲೇಜು ವಿದ್ಯಾಭ್ಯಾಸವನ್ನು ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಮೈಸೂರಿನ ಮಹಾರಾಜಾ ಕಾಲೇಜುಗಳಲ್ಲಿ ಪೂರ್ಣಗೊಳಿಸಿದರು. ಡಾ. ಡಿ.ಎಲ್. ನರಸಿಂಹಾಚಾರ್, ತೀ. ನಂ. ಶ್ರೀಕಂಠಯ್ಯ, ತ.ಸು. ಶಾಮರಾವ್, ಡಾ. ಎಲ್. ಬಸವರಾಜು ಮುಂತಾದ ಅದ್ವಿತೀಯ ವಿದ್ವಾಂಸರ ಮಾರ್ಗದರ್ಶನದಲ್ಲಿ ಕನ್ನಡ ಆನರ್ಸ್ ಮತ್ತು ಎಂ.ಎ. ಪದವೀಧರರು. ಮೈಸೂರು ಧರ್ಮಪ್ರಕಾಶ ಡಿ. ಬನುಮಯ್ಯ ವಾಣಿಜ್ಯ ಮತ್ತು ಕಲಾ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಪ್ರಾಚಾರ್ಯರಾಗಿ ಈಗ ನಿವೃತ್ತರು. ತಮ್ಮ ಸಾಹಿತ್ಯಕ ಪ್ರವೃತ್ತಿಯನ್ನು ಮುಂದುವರಿಸಿದ್ದು, ವ್ಯಾಕರಣ ಕುರಿತು 'ಸಮಗ್ರ ...

READ MORE

Related Books