ನಮ್ಮಿಬ್ಬರ ನಡುವೆ

Author : ರೇಣುಕಾ ನಿಡಗುಂದಿ

₹ 50.00




Published by: ದೆಹಲಿ ಕರ್ನಾಟಕ ಸಂಘ
Address: ದೆಹಲಿ ಕರ್ನಾಟಕ ಸಂಘ, ಸೆಕ್ಟರ್‍ 12, ರಾವ್‍ ತುಲಾರಾಮ್‍ ಮಾರ್ಗ್, ಆರ್‍.ಕೆ. ಪುರಂ, ನವದೆಹಲಿ 110022

Synopsys

ರೇಣುಕಾ ನಿಡಗುಂಡಿಯವರು ಕವನಗಳ ಸಂಕಲನ. ಸಂಬಂಧಗಳ ನಡುವಿನ ಸಖ್ಯವನ್ನು ಮತ್ತು ಆ ಸಖ್ಯದಿಂದ ಪಡೆದುದುಕೊಳ್ಳುವ ಸಂಭ್ರಮದ ಕ್ಷಣಗಳನ್ನು ಕವನಗಳ ರೂಪದಲ್ಲಿ ಓದುಗರಿಗೆ ತಲುಪಿಸಿದ್ದಾರೆ ರೇಣುಕಾ ಅವರು. ಸಂಬಂಧಗಳ ನಡುವಿನ ಮನಸ್ಥಿತಿಯ ಕುರಿತಾದ ಭಾವಗಳನ್ನು ಮತ್ತು ಸಂಬಂಧಗಳಲ್ಲಿ ಅಡಗಿರುವ ಭಾವನೆಗಳನ್ನು ಹೊರತರುವ ಪ್ರಯತ್ನ ಕವಯಿತ್ರಿಯದು. ಸಂಬಂಧಗಳಿಗೆ ಕೊನೆಯಿಲ್ಲ. ಹಾಗೇ ನೋಡಿದರೆ ಯಾವುದೇ ಸಂಬಂಧಗಳಿಗೆ ಕೂಡ ಇಂತಹದ್ದೇ ಆರಂಭ ಇದೆ ಎಂದು ಸ್ಪಷ್ಟವಾಗಿ ಹೇಳಲು ಅಸಾಧ್ಯ. ಅಂತಹ ಕಾಲವೆಂಬ ಮಾಯೆಗೆ ಸಿಲುಕದ ಸಿಕ್ಕಿದರೂ, ವ್ಯಾಖ್ಯಾನಿಸಲಾಗದಂತಹ ಸಂಬಂಧಗಳ ಕುರಿತು ಭಾವಾತ್ಮಕವಾಗಿ ಹಾಗೂ ಕಾವ್ಯಾತ್ಮಕವಾಗಿ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಪುಸ್ತಕವನ್ನು ಓದಿ ಮುಗಿಸಿದಾಗ ಈ ಆರಂಭ ಮತ್ತು ಕೊನೆಯ ಜಂಜಾಟಗಳಿಂದ ಮುಕ್ತವಾದ ಸಂಬಂಧದ ವಿವರಣೆಯನ್ನು ‘ನಮ್ಮಿಬ್ಬರ ನಡುವೆ’ ಪುಸ್ತಕ ನೀಡುತ್ತದೆ. ಉತ್ಕಟ ಪ್ರೇಮವನ್ನೂ, ಅದರ ಅಲೌಕಿಕ ಮಾಯೆಯನ್ನೂ ಈ ಸಂಕಲನದಲ್ಲಿನ ಕವನಗಳು ಸಂಭ್ರಮಿಸುತ್ತವೆ. ದೆಹಲಿ ಕರ್ನಾಟಕ ಸಂಘ ಪ್ರಕಟಿಸಿರುವ ಈ ಕವನ ಸಂಕಲನವು ಓದುಗರಲ್ಲಿ ಕವನಗಳ ಕುರಿತಾಗಿ ಮತ್ತಷ್ಟು ಅಭಿಮಾನ ಹುಟ್ಟಿಸುವುದರಲ್ಲಿ ಸಂಶಯವಿಲ್ಲ.

About the Author

ರೇಣುಕಾ ನಿಡಗುಂದಿ

ರೇಣುಕಾ ನಿಡಗುಂದಿಯವರು ಮೂಲತಹ ಧಾರವಾಡದವರು. ಮೂರು ದಶಕದಿಂದಲೂ ದೆಹಲಿಯಲ್ಲಿ ವಾಸ, ಖಾಸಗೀ ಕಂಪನಿಯೊಂದರಲ್ಲಿ ಉದ್ಯೋಗ, ದೆಹಲಿ ಕರ್ನಾಟಕ ಸಂಘದ 'ಮುಖವಾಣಿ 'ಅಭಿಮತ' ದ ಸಂಪಾದಕ ಬಳಗದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದಾರೆ, ಡಾ.ಪುರುಷೋತ್ತಮ ಬಿಳಿಮಲೆಯವರ ಸಂಪಾದಕತ್ವದಲ್ಲಿ " ರಾಜಧಾನಿಯಲ್ಲಿ ಕರ್ನಾಟಕ" ಪುಸ್ತಕವನ್ನು ಸಂಪಾದಿಸಿದ್ದು ಅನೇಕ, ಕಥೆ, ಕವನ, ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಮಾಸಿಕಗಳಲ್ಲಿ ಪ್ರಕಟಗೊಂಡಿವೆ. 'ಓ ಮನಸೇ' ದೈಮಾಸಿಕ ಪತ್ರಿಕೆಯಲ್ಲಿ 'ರಾಜಧಾನಿ ಮೇಲ್' ಅಂಕಣ ಬರೆಹ ಬರೆಯುತ್ತಿದ್ದರು. ಬಿಡುಗಡೆಯಾದ ಕೃತಿಗಳು - ಮೊದಲ ಕವನ ಸಂಕಲನ " ಕಣ್ಣ ಕಣಿವೆ" 2008 ( ಪ್ರಗತಿ ಗ್ರಾಫಿಕ್ಸ್), “ದಿಲ್ಲಿ ಡೈರಿಯ ...

READ MORE

Related Books