ಕಲೆ ಎಂಬುದು ಭಾವನೆಗಳು ಮತ್ತು ಐಡಿಯಾಗಳ ಅಭಿವ್ಯಕ್ತಿ: ಸುಬೋಧ್ ಗುಪ್ತಾ

Date: 03-01-2022

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ದಿಲ್ಲಿ ಮೂಲದ ಇನ್ಸ್ಟಾಲೇಷನ್ಸ್, ಸ್ಕಲ್ಪ್ಚರ್ಸ್, ಪೇಂಟಿಂಗ್, ಪರ್ಫಾರ್ಮೆನ್ಸ್ ಹಾಗೂ ವೀಡಿಯೊ ಆರ್ಟ್ ಕಲಾವಿದ ಸುಬೋಧ್ ಗುಪ್ತಾ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದ: ಸುಬೋಧ್ ಗುಪ್ತಾ (Subodh Gupta)
ಜನನ: 1964
ಶಿಕ್ಷಣ: ಕಾಲೇಜ್ ಆಫ್ ಆರ್ಟ್ಸ್ ಅಂಡ್ ಕ್ರಾಫ್ಟ್ಸ್, ಪಾಟ್ನಾ, ಬಿಹಾರ
ವಾಸ: ದಿಲ್ಲಿ
ಕವಲು: ಕಂಟೆಂಪೊರರಿ ಆರ್ಟ್
ವ್ಯವಸಾಯ: ಇನ್ಸ್ಟಾಲೇಷನ್ಸ್, ಸ್ಕಲ್ಪ್ಚರ್ಸ್, ಪೇಂಟಿಂಗ್, ಪರ್ಫಾರ್ಮೆನ್ಸ್, ವೀಡಿಯೊ

ಸುಬೋಧ್ ಗುಪ್ತಾ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಕಲೆ ಎಂಬುದು ಭಾವನೆಗಳು ಮತ್ತು ಐಡಿಯಾಗಳ ಅಭಿವ್ಯಕ್ತಿ. ಅದರ ಮೂಲಕ ಅರ್ಥವಾಗಿರದ್ದನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯ ಇದೆ ಎಂದು ಹೇಳುವ ಸುಬೋಧ್ ಗುಪ್ತಾ, ದಿನ ಬಳಕೆಗೆ ಲಭ್ಯವಿರುವ ವಸ್ತುಗಳನ್ನೇ ತನ್ನ ಕಲಾಕೃತಿಗಳಲ್ಲಿ ಬಳಸಿಕೊಂಡು, ಅವಕ್ಕೆ ಹೊಸ ಅರ್ಥ ಹೊಮ್ಮಿಸುವುದಕ್ಕೆ ಪ್ರಸಿದ್ಧರು. ತನ್ನ ಸಿಗ್ನೇಚರ್ ಶೈಲಿ ಆಗಿರುವ ದಿನಬಳಕೆಯ ಪಾತ್ರ ಪಗಡಿಗಳನ್ನು ಪೇರಿಸಿ ಶಿಲ್ಪಗಳನ್ನು ರಚಿಸುವ ಬಗ್ಗೆ ಸುಬೋಧ್ ಗುಪ್ತಾ ಹೇಳುವುದು ಹೀಗೆ: Those simple kitchen utensils are a visual paradox of the shiny attractive appearance on the surface and the emptiness inside; they show in a very accessible way the extremities of our time: the nothingness and the exuberance, and on a concrete level, the lack of the most essential ingredient of our life—food and the striking accumulation of hollow expressions of any kind. (ಮಾರ್ಥಾ ನಿಪ್ ಅವರಿಗೆ 2015ರಲ್ಲಿ ನೀಡಿದ ಸಂದರ್ಶನದಲ್ಲಿ)

ಬಿಹಾರದ ಸಣ್ಣ ಹಳ್ಳಿ ಖಗಾವುಲ್‍ನಲ್ಲಿ ರೈಲ್ವೇ ಗಾರ್ಡ್-ಗೃಹಿಣಿ ದಂಪತಿಗೆ ಜನಿಸಿದ ಸುಬೋಧ್ ಶಾಲೆಗೆ ಹೋದದ್ದು ತನ್ನ ಮಾವನ ಮನೆಯಲ್ಲಿದ್ದು. ಹಳ್ಳಿ ಶಾಲೆಯಲ್ಲಿ ಕಲಿತ ಹುಡುಗನಿಗೆ ಬಾಲ್ಯದಲ್ಲಿ ನಾಟಕಗಳ ಹುಚ್ಚು. ಚೆನ್ನಾಗಿ ಚಿತ್ರಗಳನ್ನು ಬರೆಯುತ್ತಿದ್ದ ಕಾರಣಕ್ಕೆ, ಅವರ ತಂಡದ ನಾಟಕಗಳಿಗೆ ಪೋಸ್ಟರ್ ಅವರದೇ. ಹೀಗೆ ನಿಧಾನಕ್ಕೆ ಕಲಾ ಜಗತ್ತಿಗೆ ತೆರೆದುಕೊಂಡ ಸುಬೋಧ್ ಪಾಟ್ನಾ ಕಾಲೇಜಿನಲ್ಲಿ ಕಲಾ ಪದವಿ ಪಡೆಯುವಾಗಲೇ ಅಲ್ಲಿನ ಪತ್ರಿಕೆಗಳಲ್ಲಿ ಪಾರ್ಟ್‌ಟೈಮ್ ಇಲಸ್ಟ್ರೇಟರ್ ಆಗಿಯೂ ಕೆಲಸ ಮಾಡಿದ್ದರು. ಪದವಿ ಗಳಿಸಿಕೊಂಡ ಬಳಿಕ ಅವರು ದಿಲ್ಲಿಗೆ ಬಂದು ನೆಲೆಸಿದರು. ದಿಲ್ಲಿಯಲ್ಲಿ 1999-2000ದ ಹೊತ್ತಿಗೆ ಖೋಜ್ ಸ್ಟುಡಿಯೋ ಮೂಲಕ ಕಲಾ ಜಗತ್ತಿಗೆ ತೆರೆದುಕೊಂಡ ಅವರು ಆ ಬಳಿಕ ಹಂತಹಂತವಾಗಿ ಬೆಳೆಯುತ್ತಾ, ಇಂದು ಭಾರತದ ಪ್ರಸಿದ್ಧ ಕಲಾವಿದರಲ್ಲಿ ಒಬ್ಬರು. ಈಗ ಪ್ರತಿಷ್ಠಿತ ನೇಚರ್ ಮೋರ್ತ್ ಮತ್ತು ಹಾಸರ್ ಅಂಡ್ ವಿರ್ಥ್ ಕಲಾ ಗ್ಯಾಲರಿಗಳು ಅವರನ್ನು ಪ್ರತಿನಿಧಿಸುತ್ತಿವೆ.

ಬಾಲ್ಯದ ನೆನಪುಗಳು ಮತ್ತು ಹಳ್ಳಿಯ ಚಿತ್ರಣಗಳನ್ನು ತಲೆಯಲ್ಲಿ ತುಂಬಿಕೊಂಡು ದಿಲ್ಲಿಗೆ ಬಂದಿದ್ದ ಸುಬೋಧ್ ಆರಂಭದಲ್ಲಿ ಯಶಸ್ಸು ಕಾಣಲಿಲ್ಲ. ಅವರು ಪೇಂಟಿಂಗಿನಿಂದ ಶಿಲ್ಪಗಳತ್ತ ತಿರುಗಿದ್ದು 29 Mornings ಎಂಬ ಕಲಾಕೃತಿಯ ಮೂಲಕ. ಆ ಬಳಿಕ, 1997ರಲ್ಲಿ ಅವರು ಖೋಜ್ ಸ್ಟುಡಿಯೋಸ್ ಕಾರ್ಯಾಗಾರಕ್ಕೆಂದು ಸೆಗಣಿ ಬೆರಟಿಗಳನ್ನು ಬಳಸಿ ರಚಿಸಿದ My Mother and Me (1997), ಅವರ ಮೊದಲ ಗಮನಾರ್ಹ ಕೃತಿ. ಅವರು ಮೊದಲ ಬಾರಿಗೆ ಕಲಾಜಗತ್ತಿನಲ್ಲಿ ಸುದ್ದಿಯಾದದ್ದು, ಅವರ Very Hungry God (2006) ಶಿಲ್ಪವನ್ನು 2007ರ ವೆನೀಸ್ ಬಯೆನಾಲ್‌ನಲ್ಲಿ ಪ್ರದರ್ಶಿಸಿದಾಗ. ಕೊಚ್ಚಿ ಬಯೆನಾಲ್‌ನಲ್ಲಿ ಅವರು ಪ್ರದರ್ಶಿಸಿದ What does the vessel contain, that the river does not (2012) ಕಲಾಕೃತಿ, ಬ್ರಿಟನ್ನಿನ ಟೇಟ್ ಗ್ಯಾಲರಿಯಲ್ಲಿ ಪ್ರದರ್ಶಿಸಿದ Line of Control (2008), ಈಗ ದಿಲ್ಲಿಯ NGMAಯಲ್ಲಿ ಶಾಶ್ವತ ಪ್ರದರ್ಶನಕ್ಕೆಂದು ಆಯ್ಕೆ ಆಗಿರುವ Banyan Tree (2014) ಮೊದಲಾದವು ಅವರ ಜನಪ್ರಿಯ ಕಲಾಕೃತಿಗಳು. 2008ರಲ್ಲಿ ಬಿಹಾರದ ನೆರೆ ಸಂತ್ರಸ್ತರ ಪರಿಹಾರಕ್ಕೆಂದು ಅವರು ರಚಿಸಿದ Saat Samundar Paar (2008) ಕಲಾಕೃತಿ, ಸಾಫ್ರನ್‌ಆರ್ಟ್ ಹರಾಜಿನಲ್ಲಿ 3.4ಕೋಟಿ ರೂ.ಗಳಿಗೆ ಹರಾಜಾಗಿತ್ತು.

ಸ್ಟೀಲ್- ಅಲ್ಯುಮೀನಿಯಂ ವಸ್ತುಗಳ ಜೊತೆ ನಾನು ಸುದೀರ್ಘಕಾಲ ಕೆಲಸ ಮಾಡಿದ್ದೇನಾದರೂ ಪ್ರತೀ ಬಾರಿ ಅವು ಹೊಸ ಹೊಸ ಅರ್ಥಗಳನ್ನು ಹೊರಹೊಮ್ಮಿಸುತ್ತಾ ಬಂದಿವೆ. ಪ್ರತೀ ಬಾರಿ ನನಗೆ ಹೊಸ ಮಗ್ಗುಲುಗಳು ದೊರೆತಿವೆ. ಈ ಹಂತದ ತನಕದ ಬೆಳವಣಿಗೆಗಳನ್ನು ನಾನು ಸಹಜವಾದ ಮತ್ತು ಸಾವಯುವವಾದ ಬೆಳವಣಿಗೆ ಎಂದೇ ಭಾವಿಸಿದ್ದೇನೆ ಎನ್ನುತ್ತಾರೆ (Ocula ಮ್ಯಾಗಝೀನಿಗಾಗಿ ಟೆಸ್ ಮಾಂಡರ್ ಅವರಿಗೆ ನೀಡಿದ ಸಂದರ್ಶನದಲ್ಲಿ, 2017) ಪ್ರಸಿದ್ಧ ಕಲಾವಿದೆ ಭಾರತೀ ಖೇರ್ ಅವರನ್ನು ಮದುವೆಯಾಗಿರುವ ಸುಬೋಧ್ ದಿಲ್ಲಿ ಹೊರವಲಯದ ಗುರ್ಗಾಂವ್‌ನಲ್ಲಿ ನೆಲೆಸಿದ್ದಾರೆ.

ಸುಬೋಧ್ ಗುಪ್ತಾ ಅವರ ಜೊತೆ ದೂರದರ್ಶನ್ ಮಾತುಕತೆ :

ಸುಬೋಧ್ ಗುಪ್ತಾ ಬಗ್ಗೆ ಪರಿಚಯ ಚಿತ್ರ:

ಚಿತ್ರ ಶೀರ್ಷಿಕೆಗಳು:

ಸುಬೋಧ್ ಗುಪ್ತಾ ಅವರ Bihari (1999)

ಸುಬೋಧ್ ಗುಪ್ತಾ ಅವರ Birth of a Star (2016)

ಸುಬೋಧ್ ಗುಪ್ತಾ ಅವರ Et tu, Duchamp?, (2009), black bronze

ಸುಬೋಧ್ ಗುಪ್ತಾ ಅವರ Everything is inside (2004)

ಸುಬೋಧ್ ಗುಪ್ತಾ ಅವರ Jal mein Kumbh, Kumbh mein Jal hai (2012)

ಸುಬೋಧ್ ಗುಪ್ತಾ ಅವರ My mother and me (2014)

ಸುಬೋಧ್ ಗುಪ್ತಾ ಅವರ People Tree (2018)

ಸುಬೋಧ್ ಗುಪ್ತಾ ಅವರ Still Steal Steel -1, (2007)

ಸುಬೋಧ್ ಗುಪ್ತಾ ಅವರ Terminal (2010)

ಸುಬೋಧ್ ಗುಪ್ತಾ ಅವರ Three Cows (2008)

ಸುಬೋಧ್ ಗುಪ್ತಾ ಅವರ Untitled, (2010), oil on canvas

ಸುಬೋಧ್ ಗುಪ್ತಾ ಅವರ When soak becomes spill (2008)

ಸುಬೋಧ್ ಗುಪ್ತಾ ಅವರ Yantra (2017)

ಈ ಅಂಕಣದ ಹಿಂದಿನ ಬರೆಹಗಳು:
ಭಾರತದಲ್ಲಿ ವೀಡಿಯೊ ಆರ್ಟ್‌ಗೆ ಹಾದಿ ತೆರೆದ ನಳಿನಿ ಮಲಾನಿ
ಮಹಾನಗರಕ್ಕೊಂದು ದೃಶ್ಯಭಾಷೆ ಕಟ್ಟಿಕೊಟ್ಟ ಜಿತೀಶ್ ಕಲ್ಲಟ್
ಸಾಂಸ್ಕೃತಿಕ ವೈರುಧ್ಯದ ಪದರುಗಳ ಅಭಿವ್ಯಕ್ತಿ: ಶೀಲಾಗೌಡ
ಅಕ್ಷರಗಳನ್ನು ಅಮೂರ್ತಗೊಳಿಸುವ ಗ್ಲೆನ್ ಲೈಗನ್
ಕಲೆಯ ಪ್ರಜಾತಾಂತ್ರೀಕರಣ – ಡೊನಾಲ್ಡ್ ಜಡ್
ಕಲೆಯ ಅತಿರೇಕದ ಮಿತಿಗಳನ್ನು ವಿಸ್ತರಿಸಿದ ಕ್ರಿಸ್ ಬರ್ಡನ್:
"ದಾ ಷಾನ್ ಝಿ” ಯ “ಕ್ಸಿಂಗ್‌ವೇಯಿ ಈಷು” ಮುಂಗೋಳಿ - ಝಾಂಗ್ ಹುವಾನ್
ಕಟ್ಟಕಡೆಯ ಸರ್ರಿಯಲಿಸ್ಟ್ – ಲಿಯೊನೊರಾ ಕೇರಿಂಗ್ಟನ್
ಸ್ಟ್ರೀಟ್ ಟು ಗ್ಯಾಲರಿ – ಕೀತ್ ಹೆರಿಂಗ್:
ನಾನು ಮ್ಯಾಟರಿಸ್ಟ್: ಕಾರ್ಲ್ ಆಂದ್ರೆ:
ಫೊಟೋಗ್ರಫಿಯನ್ನು ಸಮಕಾಲೀನ ಆರ್ಟ್ ಮಾಡಿದ ವಿಕ್ ಮ್ಯೂನಿಸ್
ನನ್ನದೇ ಸಂಗತಿಗಳಿವು: ಆದರೆ ಕೇವಲ ನನ್ನವಲ್ಲ– ಶಿರಿನ್ ನೆಹಶಾತ್
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
ಸದಭಿರುಚಿ ಎಂಬುದು ಆಧುನಿಕ ಬದುಕಿನ ಶಾಪ – ಗಿಲ್ಬರ್ಟ್ ಮತ್ತು ಜಾರ್ಜ್
ಆನೆಲದ್ದಿ ಮತ್ತು ಕ್ರಿಸ್ ಒಫಿಲಿ
ನಿಸರ್ಗ ನನ್ನ ಸಹಶಿಲ್ಪಿ – ಆಂಡಿ ಗೋಲ್ಡ್ಸ್‌ವರ್ದಿ
ಫಿಗರೇಟಿವ್ ಚಿತ್ರಗಳು ಕೂಡಾ ಇಂದು ಪ್ರಸ್ತುತ – ಪೀಟರ್ ಡಾಯ್
ಕಾನ್ಸೆಪ್ಚುವಲ್ ಆರ್ಟ್‌ನ ಜನಕ – ಸೊಲ್ ಲೆವಿಟ್
ಮನುಷ್ಯ ಆಗಿರೋದು ಅಂದ್ರೆ ಏನು?- ವಿಲಿಯಂ ಕೆಂಟ್ರಿಜ್
“ಸೂಪರ್ ಫ್ಲ್ಯಾಟ್” ಐ ಕ್ಯಾಂಡಿಗಳ ತಕಾಷಿ ಮುರಾಕಾಮಿ
ಅಲ್ಲಿರುವುದು ನನ್ನಮನೆ – ದೊ ಹೊ ಸುಹ್
ದಿ ಲೈಫ್ ಆಫ್ CB: ಅರ್ಥಾತ್, ಕ್ರಿಷ್ಚಿಯನ್ ಬೋಲ್ತನಸ್ಕಿ
ಅಸೆಂಬ್ಲಿಗಳಲ್ಲಿ “ಬಾಕತನ” ತೋರಿಸಿದ ಅರ್ಮಾನ್
ಪ್ರಾಮಾಣಿಕತೆಯೇ ಸೌಂದರ್ಯ- ಜೊರ್ಗ್ ಇಮ್ಮೆಂದ್ರಾಫ್
ನಾಗರೀಕತೆಯ ಒಡಕಿಗೆ ಕನ್ನಡಿ ಹಿಡಿದ ಡೊರಿಸ್ ಸಾಲ್ಸೆದೊ
ಕಾನ್ಸೆಪ್ಚುವಲ್ ಆರ್ಟ್‌ಗೆ ತಳಪಾಯ –ರಾಬರ್ಟ್ ರಾಷನ್‌ಬರ್ಗ್
ಡಿಜಿಟಲ್ ಜಗತ್ತಿನಲ್ಲಿ ಒರಿಜಿನಲ್‌ನ ಹುಡುಕಾಟ – ಥಾಮಸ್ ರಫ್
ಕಲೆ ಜಗತ್ತನ್ನು ಬದಲಾಯಿಸಲೇ ಬೇಕೆಂದಿಲ್ಲ- ಫಿಯೊನಾ ಹಾಲ್
ಜಾಗತೀಕರಣದ ಆಟಗಳ ಬೆನ್ನಟ್ಟಿರುವ ಇಂಕಾ ಶೋನಿಬೇರ್
ಅರ್ಥವಂತಿಕೆಗಾಗಿ ಅರ್ಥ ಕಳೆದುಕೊಳ್ಳಬೇಕೆಂಬ- ಗು ವೆಂಡಾ
ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು- ನಿಯೊ ಆವ್
ಕಲೆ ಒಂದು ಉತ್ಪನ್ನವಲ್ಲ ಪ್ರಕ್ರಿಯೆ- ನಾಮನ್ ಬ್ರೂಸ್
‘ಇನ್ಫಾರ್ಮೇಷನ್ ಸೂಪರ್ ಹೈವೇ’ ಹೊಳಹು- ನಾಮ್ ಜುನ್ ಪಾಯಿಕ್
ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್
ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್
ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್
ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್
“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್
ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್
ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’
ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್
ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್
ಬಾರ್ಬರಾ ಕ್ರುಗರ್‌ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್
ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್
ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್
“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”
“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”
ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್
ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ
“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”
“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”
“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”
“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”
“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”
“ಒಳಗಣ ಅನಂತ ಮತ್ತು ಹೊರಗಣ ಅನಂತ”
“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ
ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ
ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್
ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್
ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’
ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ
ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್
ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ
ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ
ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...