ಅಭಿನಯ ಕಲಿಸಲು ಸಾಧ್ಯವಿಲ್ಲ

Author : ಮೌನೇಶ್ ಬಡಿಗೇರ್‌

Pages 184

₹ 220.00




Year of Publication: 2022
Published by: ಥಿಯೇಟರ್‍ ತತ್ಕಾಲ್ ಬುಕ್ಸ್

Synopsys

ಲೇಖಕ ಮೌನೇಶ್ ಬಡಿಗೇರ್‌ ಅವರು ಅಭಿನಯ ಕಲೆಯ ಬಗ್ಗೆ ಬರೆದಿರುವ ಲೇಖನ ಸಂಕಲನ ‘ಅಭಿನಯ ಕಲಿಸಲು ಸಾಧ್ಯವಿಲ್ಲ’. ಅಭಿನಯದ ಆಸಕ್ತಿಯಿಂದ ಇಂದು ಅನೇಕರು ಅನೇಕ ಹಿನ್ನೆಲೆಗಳಿಂದ ರಂಗಭೂಮಿಗೆ ಬರುತ್ತಿದ್ದಾರೆ. ಹಲವು ಹವ್ಯಾಸಿ ರಂಗತಂಡಗಳಿಗೆ ಸೇರಿಕೊಂಡು ಅನೇಕ ನಿರ್ದೇಶಕರ ಕೈಕೆಳಗೆ ಬೇರೆ ಬೇರೆ ನಾಟಕಗಳ ಥರೇವಾರಿ ಪಾತ್ರಗಳನ್ನು ಮಾಡುತ್ತ ಮಾಡುತ್ತ ತಮ್ಮಷ್ಟಕ್ಕೆ ತಾವೇ ತಿಳಿದಷ್ಟು ಅಭಿನಯವನ್ನು ಕಲಿಯುತ್ತಾ ಹೋಗುತ್ತಾರೆ. ಇನ್ನೂ ಅನೇಕರಿಗೆ ಟಿವಿ ಧಾರಾವಾಹಿ, ಸಿನಿಮಾಗಳಲ್ಲಿ ಅವಕಾಶ ಸಿಕ್ಕು ಅಲ್ಲಿಗೂ ಹೋಗಿ ಕೆಲಸ ಮಾಡುತ್ತಿದ್ದಾರೆ. ಆದರೆ ನಾಟಕ ಕಟ್ಟುವ ತಯ್ಯಾರಿಯಲ್ಲಿ, ಅದರ ಪ್ರದರ್ಶನದ ಒತ್ತಡದ ಗಡಿಬಿಡಿಯಲ್ಲಿ, ಹಾಗೂ ಧಾರಾವಾಹಿಯ, ಸಿನಿಮಾಗಳ ಯಾಂತ್ರಿಕತೆಯ ತಳಮಳದಲ್ಲಿ ಅಭಿನಯದ ಅನೇಕ ಸೂಕ್ಷ್ಮವಾದ ಪಾಠಗಳಿಂದ ಅವರು ವಂಚಿತರಾಗಿರುತ್ತಾರೆ. "ಅಭಿನಯ ಕಲಿಸಲು ಸಾಧ್ಯವಿಲ್ಲ" ಎಂಬ ಪ್ರಸ್ತುತ ಪುಸ್ತಕವು ಅಂತಹ ಅನೇಕ ನಟನಟಿಯರಿಗೆ ತಮ್ಮೊಳಗಿನಿಂದಲೇ ತಮ್ಮನ್ನು ತಾವು ತಯಾರಿ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತದೆ. ಅಭಿನಯ ಕಲೆಯನ್ನು ಗಂಭೀರವಾಗಿ ತೆಗೆದುಕೊಳ್ಳಲು ಬಯಸುವ ಅಥವಾ ಈಗಾಗಲೇ ತೆಗೆದುಕೊಂಡಿರುವ, ರಂಗಭೂಮಿಯ ವೃತ್ತಿಪರರೂ, ಟಿವಿ, ಸಿನಿಮಾ ನಟನಟಿಯರೂ ಹಾಗೂ ತಂತ್ರಜ್ಞರು ಅವಶ್ಯವಾಗಿ ಓದಲೇಬೇಕಾದ ಪುಸ್ತಕವಿದು.

About the Author

ಮೌನೇಶ್ ಬಡಿಗೇರ್‌

ರಂಗನಿರ್ದೇಶಕ, ನಟ ಮೌನೇಶ್‌ ಬಡಿಗೇರ್‌ ಕತೆಗಾರ ಕೂಡ. ’ಮಾಯಾ ಕೋಲಾಹಲ’ ಪ್ರಕಟಿತ ಕತೆಗಳ ಸಂಕಲನ. ಸೂಜಿದಾರ’ ಎಂಬ ಚಿತ್ರ ನಿರ್ದೇಶಿಸಿದ್ದಾರೆ. ಕನ್ನಡ ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಮೌನೇಶ್‌ ಅಭಿನಯ ಕಲಿಕೆಯ ಕಾರ್ಯಾಗಾರ ನಡೆಸುತ್ತಿದ್ದಾರೆ. ʻಮಾಯಾಕೋಲಾಹಲʼ ಸಂಕಲನಕ್ಕೆ 2015ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ, ಟೊಟೊ ಪುರಸ್ಕಾರ', 'ಡಾ. ಯು ಆರ್ ಅನಂತಮೂರ್ತಿ ಪುರಸ್ಕಾರ', `ಬಸವರಾಜ ಕಟ್ಟಿಮನಿ ಪುರಸ್ಕಾರ ಪಡೆದಿದ್ದಾರೆ.  “ವಿಶಾಂಕೇ ಅರ್ಥಾತ್ ವಿಧ್ವಂಸಕ ಶಾಂತಿ ಕೇಂದ್ರ' ('ರಂಗಭೂಮಿ' ಉಡುಪಿ ನಡೆಸಿದ 'ಡಾ. ಹೆಚ್. ಶಾಂತಾರಾಮ್ ವಿಶ್ವ ಕನ್ನಡ ನಾಟಕ ರಚನಾ ಸ್ಪರ್ಧೆ'ಯಲ್ಲಿ ಪ್ರಥಮ ಬಹುಮಾನ ಪಡೆದ ಕೃತಿ) ಹಾಗೂ ...

READ MORE

Related Books