ರಂಗಪ್ರಯೋಗ

Author : ಕೆ.ವಿ. ಅಕ್ಷರ

Pages 184

₹ 210.00




Year of Publication: 2012
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಪ್ರಸ್ತುತ ಪುಸ್ತಕವು ರಂಗ ಅಭಿನಯ, ರಂಗ ತಂತ್ರಗಳು ಮತ್ತು ರಂಗ ಸಿದ್ಧತೆ ಎನ್ನುವ ಮೂರು ಭಾಗಗಳಲ್ಲಿ ರಂಗಭೂಮಿಯ ಪ್ರಾಯೋಗಿಕ ಅಂಗಾಂಶಗಳನ್ನು ಕುರಿತ ಪರಿಚಯಾತ್ಮಕ ಚರ್ಚೆ ನಡೆಸುತ್ತದೆ. ಪ್ರತಿಯೊಂದೂ ರಂಗಾಂಶದ ಐತಿಹಾಸಿಕ ಹಿನ್ನೆಲೆ, ಸಮಕಾಲೀನ ರಂಗಭೂಮಿಯಲ್ಲಿ ಆಯಾ ರಂಗಾಂಶಗಳನ್ನು ಯೋಜಿಸುವ ಮತ್ತು ನಿರ್ವಹಿಸುವ ವಿಧಾನಗಳು ಹಾಗೂ ಆಯಾ ರಂಗಾಂಶದ ವೈವಿಧ್ಯಮಯ ಸಾಧ್ಯತೆ-ಶೈಲಿಗಳು -- ಇವುಗಳನ್ನು ಆರಂಭದ ರಂಗಕರ್ಮಿಗಳಿಗೆ ಮತ್ತು ಆಸಕ್ತರಿಗೆ ಉಪಯುಕ್ತವಾಗುವಂತೆ ಇಲ್ಲಿ ನಿರೂಪಿಸಲಾಗಿದೆ.

About the Author

ಕೆ.ವಿ. ಅಕ್ಷರ

ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಿಂದ ರಂಗಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕೆ.ವಿ. ಅಕ್ಷರ ಅವರು ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಅಧ್ಯಾಪಕ. ಖ್ಯಾತ ರಂಗ ನಿರ್ದೇಶಕರಾಗಿರುವ ಅವರು ಸೃಜನಶೀಲ ಸಾಹಿತಿ, ನಾಟಕ, ಕವನ, ಪ್ರಬಂಧಗಳನ್ನು ರಚಿಸಿದ್ದಾರೆ.  ಸಹ್ಯಾದ್ರಿಕಾಂಡ, ಚೂರಿಕಟ್ಟೆ (ನಾಟಕಗಳು), ಹದಿಹರೆಯದ ಹಾಡುಗಳು (ಕವನ ಸಂಕಲನ), ರಂಗಪ್ರಪಂಚ, ರಂಗಪ್ರಯೋಗ, ರಂಗ ಅನ್ವೇಷಣೆ, ರಂಗಭೂಮಿ- ಪೂರ್ವ ಪಶ್ಚಿಮ (ರಂಗಕೃತಿ), ಮಾವಿನ ಮರದಲ್ಲಿ ಬಾಳೆಹಣ್ಣು (ವಿಮರ್ಶೆ). ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್ (2000) ಲಭಿಸಿದೆ. ...

READ MORE

Related Books