ಬೆಂಗಳೂರು ನಗರ ಜಿಲ್ಲಾ ರಂಗಮಾಹಿತಿ

Author : ಲಕ್ಷ್ಮಣ ಕೊಡಸೆ

Pages 296

₹ 200.00




Year of Publication: 2018
Published by: ಕರ್ನಾಟಕ ನಾಟಕ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು
Phone: 08022237484

Synopsys

ಬೆಂಗಳೂರು ನಗರ ಜಿಲ್ಲೆಯ ರಂಗಮಾಹಿತಿಯನ್ನು ಈ ಪುಸ್ತಕದಲ್ಲಿ ದಾಖಲಿಸುವ ಪ್ರಯತ್ನವಿದು. ಕನ್ನಡ ಹವ್ಯಾಸಿ ರಂಗಭೂಮಿಗೆ ಒಂದು ಮಾರ್ಗದರ್ಶಿ ಪಾತ್ರವನ್ನು ರೂಪಿಸಿದ್ದು ಬೆಂಗಳೂರಿನ ರಂಗಚಟುವಟಿಕೆಗಳು. 60-70 ರ ದಶಕದಲ್ಲಿ ಆರಂಭಗೊಂಡ ಈ ರಂಗಚಳವಳಿ ಇಂದಿಗೂ ಬೃಹತ್ತಾಗಿ ನಡೆಯುತ್ತಿದೆ. ಬೆಂಗಳೂರು ನಗರದಲ್ಲಿ ಆಗಾಗ್ಗೆ ಮೊಕ್ಕಾಂ ಮಾಡುತ್ತಿದ್ದ ಗುಬ್ಬಿ ತಂಡ, ಕೆ. ಹಿರಣ್ಣಯ್ಯ ಮಿತ್ರ ಮಂಡಳಿ ಮುಂತಾದ ವೃತ್ತಿ ಕಂಪನಿಗಳ ಜೊತೆಗೆ ಅಮೆಚೂರ್‌ ಡ್ರಾಮಾಟಿಕ್‌ ಅಸೋಸಿಯೇಶನ್‌ ಸೇರಿದಂತೆ ಅನೇಕ ವಿಲಾಸಿ ರಂಗತಂಡಗಳು ಹವ್ಯಾಸಿ ತಂಡಗಳಾಗಿ ರೂಪಾಂತರಗೊಂಡು, ರಂಗಚಟುವಟಿಕೆಗಳನ್ನು ಹೆಮ್ಮರವಾಗಿ ಬೆಳೆಸಲು ಸಹಕರಿಸಿವೆ.

ಮುಖ್ಯವಾಗಿ ಈ ಕೃತಿಯಲ್ಲಿ ಹೊಸತನದ ಹುಡುಕಾಟದಲ್ಲಿ, ಬೆಂಗಳೂರಿನಲ್ಲಿ ಗುಬ್ಬಿ ಕಂಪನಿಯ ನೆಲೆ, ಬೆಂಗಳೂರು ರಂಗಭೂಮಿ-ರಾ. ಜೆ. ಶ್ರೀನಿವಾಸಮೂರ್ತಿ, ಪೌರಾಣಿಕ ನಾಟಕಗಳ ರಂಗಭೂಮಿ-ಗುಡಿಹಳ್ಳಿ ನಾಗರಾಜ, ಬೆಂಗಳೂರಿನಲ್ಲಿ ಯಕ್ಷಗಾನ-ಶ್ರೀನಿವಾಸ ಸಾಸ್ತಾನ, ಬೆಂಗಳೂರಿನ ಕಾರ್ಮಿಕ ರಂಗಭೂಮಿ, ಬೆಂಗಳೂರಿನಲ್ಲಿ ಆಂಗ್ಲ ರಂಗಭೂಮಿ-ಪ್ರಕಾಶ ಬೆಳವಾಡಿ, ಬೀದಿನಾಟಕ ಚಳವಳಿ-ಕೆ.ವಿ. ನಾಗರಾಜಮೂರ್ತಿ, ಬೆಂಗಳೂರಿನ ರಂಗತಂಡಗಳು-ಶಶಿಧರ್‌ ಭಾರಿಘಾಟ್‌, ಬೆಂಗಳೂರಿನ ರಂಗಮಂದಿರಗಳು-ಕೆ.ವಿ. ನಾಗರಾಜಮೂರ್ತಿ, ತಂಡಗಳ ಪೂರಕ ಮಾಹಿತಿ, ಕರ್ನಾಟಕದಲ್ಲಿ ‘ಭಾರತೀಯ ಜನಕಲಾ ಸಮಿತಿ; (ಇಪ್ಪಾ): ಶಶಿಕಾಂತ ಯಡಹಳ್ಳಿ, ಮಹಿಳೆಯರ ಏಕವ್ಯಕ್ತಿ ಪ್ರದರ್ಶನ: ಮೀನಾ ಮೈಸೂರು, ರಂಗಸಂಗೀತ: ಶಶಿಧರ ಭಾರಿಘಾಟ್‌, ಇಲ್ಲಿ ಯಾರು ಮುಖ್ಯರಲ್ಲ, ಯಾರೂ ಅಮುಖ್ಯರೂ ಅಲ್ಲ, ಮುನಿರಂಗಪ್ಪ ಎಂಬ ಬಹುರೂಪಿ, ರಂಗಭೂಮಿ, ಪತ್ರಿಕೆಗಳು, ವಿಮರ್ಶೆ ಮುಂತಾದ ವಿಷಯಗಳ ಕುರಿತು ಈ ಕೃತಿಯು ಗಮನಹರಿಸಿದೆ.

About the Author

ಲಕ್ಷ್ಮಣ ಕೊಡಸೆ
(12 April 1953)

ಕತೆಗಾರ, ಪತ್ರಕರ್ತ ಲಕ್ಷ್ಮಣ ಕೊಡಸೆ ಅವರು 1953 ಏಪ್ರಿಲ್ 12ರಂದು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕೊಡಸೆ ಗ್ರಾಮದಲ್ಲಿ ಜನಿಸಿದರು. ತಾಯಿ ಭರ್ಮಮ್ಮ, ತಂದೆ ಕರಿಯನಾಯ್ಕ. ಹುಟ್ಟೂರು ಹಾಗೂ ಹೊಸನಗರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪ್ರಜಾವಾಣಿಯಲ್ಲಿ ಉಪಸಂಪಾದಕರಾಗಿ, ಮುಖ್ಯವರದಿಗಾರರಾಗಿ ಸುದ್ದಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ.  ‘ಅಪ್ಪನ ಪರಪಂಚ, ಕೊಡಚಾದ್ರಿ, ಸಹಪಥಿಕ, ಅವ್ವ, ಬಿ. ವೆಂಕಟಾಚಾರ್ಯ, ಕುವೆಂಪು ಮತ್ತು, ಕನ್ನಡ ವಿಮರ್ಶಾ ವಿವೇಕ, ಹಾಯಿದೋಣಿ’ ಅವರ ಪ್ರಮುಖ ಕೃತಿಗಳು.    ...

READ MORE

Related Books