ಕುವೆಂಪು ನಾಟಕಗಳು ಮುಂದಿಡುವ ರಂಗಕಲ್ಪನೆ

Author : ಉತ್ಥಾನ ಭಾರೀಘಾಟ್

Pages 96

₹ 40.00




Year of Publication: 2016
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560095
Phone: 119 - 23183311, 23183312

Synopsys

ಮಹಾಕವಿ ಕುವೆಂಪು ಅವರ ಪ್ರತಿಭೆ ಕೇವಲ ಕವಿತೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಮಹಾಕಾವ್ಯ-ಮಹಾಕಾದಂಬರಿಗಳ ಹಾಗೆ ಪುಟ್ಟಪ್ಪನವರು ಸಣ್ಣಕತೆ, ಕವಿತೆ, ನಾಟಕ ಪ್ರಕಾರಗಳಲ್ಲಿಯೂ ಅನನ್ಯ ಸಾಧನೆ ಮಾಡಿದ್ದಾರೆ.

ಕುವೆಂಪು ಅವರ ಸ್ಮಶಾನ ಕುರುಕ್ಷೇತ್ರ, ಚಂದ್ರಹಾಸ, ಬಿರುಗಾಳಿ, ಶೂದ್ರ ತಪಸ್ವಿ ಮತ್ತಿತರ ನಾಟಕಗಳು ಕನ್ನಡ ನಾಟಕ-ರಂಗಭೂಮಿಗೆ ನೀಡಿದ ಮಹತ್ವದ ಕೊಡುಗೆಗಳಾಗಿವೆ. ಉತ್ಥಾನ ಬಾರೀಘಾಟ್ ಅವರು ಕುವೆಂಪು ಅವರ ನಾಟಕಗಳ ಮೂಲಕ ರಂಗದ ಪರಿಕಲ್ಪನೆಯನ್ನು ಕಟ್ಟಿಕೊಡಲು ಈ ಕೃತಿಯಲ್ಲಿ ಪ್ರಯತ್ನ ಮಾಡಿದ್ದಾರೆ. ಕುವೆಂಪು ಅವರ ರಂಗಭೂಮಿಯ ಚಿಂತನೆಗಳನ್ನು ಅವರದೇ ನಾಟಕಗಳ ಮೂಲಕ ಕಟ್ಟಿಕೊಡುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.

About the Author

ಉತ್ಥಾನ ಭಾರೀಘಾಟ್

ರಂಗನಿರ್ದೇಶಕ ಉತ್ಥಾನ ಭಾರೀಘಾಟ್‌ ಅವರು ಪುಣೆ ಫಿಲಂ ಅಂಡ್‌ ಟೆಲಿವಿಷನ್ ಇನ್ಸ್‌ಟಿಟ್ಯೂಟ್‌ ನಲ್ಲಿ ಅಧ್ಯಯನ ನಡೆಸಿದವರು. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದ ಅವರು ಮಣಿಪಾಲ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ (ಎಂ.ಎ.) ಪದವಿ ಪಡೆದಿದ್ದಾರೆ. ಉತ್ಥಾನ ಅವರಿಗೆ ಪುಣೆಯಲ್ಲಿ ವಿದ್ಯಾರ್ಥಿಯಾಗಿದ್ದ ಅತ್ಯುತ್ತಮ ಚಿತ್ರಕತೆ ರಚಿಸಿದ್ದಕ್ಕಾಗಿ ಫೆಲೋಶಿಪ್‌ ದೊರೆತಿತ್ತು. ಕೆ. ವಿ. ಅಕ್ಷರ ರಚಿಸಿದ ’ಸಹ್ಯಾದ್ರಿ ಕಾಂಡ’ ಸೇರಿದಂತೆ ಹಲವು ನಾಟಕಗಳನ್ನು ನಿರ್ದೇಶಿಸಿದ್ದಾರೆ. ...

READ MORE

Related Books