ಹೈದ್ರಾಬಾದ ಕರ್ನಾಟಕದ ರಂಗಭೂಮಿ

Author : ವಿಜಯಶ್ರೀ ಸಬರದ

Pages 172

₹ 130.00

Buy Now


Published by: ಕನ್ನಡ ಅಧ್ಯಯನ ಸಂಸ್ಥೆ
Address: ಗುಲ್ಬರ್ಗ ವಿಶ್ವವಿದ್ಯಾಲಯ, ಕಲಬುರ್ಗಿ

Synopsys

ನಾಟಕ ಸಾಹಿತ್ಯ ಮತ್ತು ರಂಗಭೂಮಿ ಸಂಬಂಧಿಸಿದಂತೆ ಕೃತಿಗಳ ಸಂಖ್ಯೆ ಕಡಿಮೆ. ಅದರಲ್ಲಿಯೂ, ಹೈದರಾಬಾ‌ದ್‌ ಕರ್ನಾಟಕದ ರಂಗಭೂಮಿ ಕುರಿತ ಕೃತಿಗಳು ಇಲ್ಲವೇ ಇಲ್ಲ ಎನ್ನುವಂತಿದೆ. ಈ ಕೃತಿಯು ಕೊರತೆಯನ್ನು ಕೃತಿ ನೀಗಿಸುತ್ತದೆ. ಹೈದರಾಬಾದ್ ಭಾಗದ ಗ್ರಾಮೀಣ, ವೃತ್ತಿ ಹಾಗೂ ಹವ್ಯಾಸಿ ರಂಗಭೂಮಿ, ಕಂಪನಿಗಳು ಹಾಗೂ ನಾಟಕಕಾರರ ಪರಿಚಯ ಈ ಕೃತಿಯಲ್ಲಿದೆ. ಮುಂಬೈ ಕರ್ನಾಟಕ ಭಾಗದಲ್ಲಿ ನಾಟಕ ಕಂಪನಿಗಳು ಹುಟ್ಟಿಕೊಂಡ ಎರಡು ದಶಕಗಳ ನಂತರ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ರಂಗಭೂಮಿ ಚಟುವಟಿಕೆಗಳು ಹೇಗೆ ಗರಿಗೆದರಿದವು ಎಂಬುದನ್ನು ಸಂಪಾದಕಿ ವಿವರಿಸಿದ್ದಾರೆ.  ಹೈದರಾಬಾದ್‌ ಕರ್ನಾಟಕದ  ಎಲ್ಲ ಜಿಲ್ಲೆಗಳಲ್ಲಿ ಇದ್ದ ನಾಟಕ ಕಂಪನಿಗಳನ್ನು ಕೃತಿಯಲ್ಲಿ ನೀಡಲಾಗಿದೆ.

 

About the Author

ವಿಜಯಶ್ರೀ ಸಬರದ
(01 February 1957)

ಮಹಿಳೆಯರ ಶೋಷಣೆ ಮತ್ತು ಸ್ತ್ರೀಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ತಮ್ಮ ಖಚಿತ ಅಭಿಪ್ರಾಯ ಮಂಡಿಸುವ ಲೇಖಕಿ ವಿಜಯಶ್ರೀ ಸಬರದ. ಅವರು ಜನಿಸಿದ್ದು 1957ರ ಫೆಬ್ರುವಿರ 1ರಂದು. ತಂದೆ ಗುಣವಂತರಾವ ಪಾಟೀಲ. ತಾಯಿ ಸಂಗಮ್ಮ. ಪ್ರಾರಂಭಿಕ ಶಿಕ್ಷಣ ಹಾಗೂ ಕಾಲೇಜು ಪದವಿ ಶಿಕ್ಷಣವನ್ನು ಬೀದರ್‌ನಲ್ಲಿ ಪಡೆದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ’ಅನುಪಮಾ ನಿರಂಜನರ ಕಾದಂಬರಿಗಳು; ಒಂದು ಅಧ್ಯಯನ” ಎಂಬ ಪ್ರಬಂಧ ಮಂಡಿಸಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್‌.ಡಿ. ಪದವಿ ಪಡೆದರು. ಬೀದರ್‌ನ ಅಕ್ಕ ಮಹಾದೇವಿ ಮಹಿಳಾ ವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ ...

READ MORE

Related Books