ಕನ್ನಡ ರಂಗಭೂಮಿ ನೆಡೆದುಬಂದ ದಾರಿ

Author : ಬಿ. ಪುಟ್ಟಸ್ವಾಮಯ್ಯ



Year of Publication: 1983
Published by: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ
Address: ನೃತುಂಗ ರಸ್ತೆ, ಬೆಂಗಳೂರು- 560002

Synopsys

ಲೇಖಕ ಬಿ. ಪುಟ್ಟಸ್ವಾಮಯ್ಯ ಅವರು ಬರೆದ ಇತಿಹಾಸ ಕೃತಿ ʼ ಕನ್ನಡ ರಂಗಭೂಮಿ ನಡೆದು ಬಂದ ದಾರಿʼ. ಪುಸ್ತಕವು ಇಲ್ಲಿ ನಾಡಿನ ಸಂಸ್ಕೃತಿ, ನಾಟಕ, ಸಂಗೀತ, ಚಿತ್ರಕಲೆಗಳಿಗೆ ಸಿಕ್ಕ ಅವಕಾಶ ಹಾಗೂ ಅವುಗಳು ನಡೆದು ಬಂದ ದಾರಿಯನ್ನು ಹೇಳುತ್ತದೆ. ಲೇಖಕರು ಹೇಳುವಂತೆ, ಕನ್ನಡ ರಂಗಭೂಮಿಗೆ ಮೈಸೂರಿನ ಅರಸುಮನೆತನವು ಸಲ್ಲಿಸಿದ ಸೇವೆ ಅಪಾರ. ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಅವರ ಆಶ್ರಿತ ಅಳಿಯ ಲಿಂಗರಾಜ ಅರಸರು ಸುಮಾರು 70 ಯಕ್ಷಗಾನ ನಾಟಕ ಗಳನ್ನು ರಚಿಸಿದರು. ದಿವಂಗತ ಚಾಮರಾಜ ಒಡೆಯರು, ನನ್ನ ಪ್ರಾಯ ವಾಗಿದ್ದ ನಾಟಕಕಲೆಯ ಉದ್ಧಾರಕ್ಕಾಗಿ ತಮ್ಮ ರಾಜಧನವನ್ನು ವೆಚ್ಚಮಾಡಿ ನಾಟಕ ಸಂಸ್ಥೆಯೊಂದನ್ನು ಸ್ಥಾಪಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರು ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದು ಖಾಸಗಿ ನಾಟಕ ಸಂಸ್ಥೆಗಳಿಗೆ ವಿಶೇಷ ಪ್ರೋತ್ಸಾಹ ಕೊಟ್ಟರು. ಕರ್ನಾಟಕದ ಯಾವುದೇ ಭಾಗದಲ್ಲಿಯಾದರು ಒಳ್ಳೆಯ ನಾಟಕವಾಡುತ್ತಿದ್ದಾರೆಂದು ತಿಳಿದರೆ ಸ್ವತಃ ಅರಸರೇ ಆ ಸಂಸ್ಥೆಯನ್ನು ಮೈಸೂರಿಗೆ ಕರೆಸಿಕೊಂಡು, ವಚನ ಬಂಗಲೆಯ ನಾಟ್ಯ ಶಾಲೆಯಲ್ಲಿ ನಾಟಕ ಆಡಿಸಿ, ವೆಚ್ಚ, ಪಾರಿತೋಷಕಗಳನ್ನು ನೀಡಿ ಗೌರವಿಸುತ್ತಿದ್ದರು. ಕನ್ನಡ ರಂಗಭೂಮಿಯ ಸ್ವರ್ಣಯುಗವೆಂದು ಕರೆದಿರುವ ಈ ಶತಮಾನದ ಮೊದಲ ಅರ್ಧಭಾಗದ ರಂಗಭೂಮಿಯ ಇತಿಹಾಸ ಮೈಸೂರು ಅರಸರಿಂದ ಪ್ರಭಾವಿತವಾಯಿತೆಂದರೆ ಅತಿಶಯೋಕ್ತಿಯಲ್ಲ.

About the Author

ಬಿ. ಪುಟ್ಟಸ್ವಾಮಯ್ಯ
(27 May 1897 - 25 January 1984)

ಕನ್ನಡ ನಾಟಕ ಸಾಹಿತ್ಯ ಮತ್ತು ಕಾದಂಬರಿ ಲೋಕಕ್ಕೆ ತಮ್ಮ ವಿಶಿಷ್ಟ ಕೊಡುಗೆಗಳ ಮೂಲಕ ಗಮನ ಸೆಳೆದವರು ಬಿ. ಪುಟ್ಟಸ್ವಾಮಯ್ಯ. ಪತ್ರಿಕೋದ್ಯಮಿ, ನಾಟಕಕಾರ, ಕಾದಂಬರಿಕಾರ, ಕಥೆಗಾರ, ಕವಿಯಾಗಿ ಅನುಪಮ ಕೊಡುಗೆ ನೀಡಿದ ಪುಟ್ಟಸ್ವಾಮಯ್ಯ ಅವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. 1897ರ ಮೇ 27ರಂದು ಜನಿಸಿದ ಪುಟ್ಟಸ್ವಾಮಿ ಅವರ ತಂದೆ ಬಸಪ್ಪಯವರು ರೇಷ್ಮೆ ವ್ಯಾಪಾರಿಯಾಗಿದ್ದರು. ತಾಯಿ ಬಸಮ್ಮ. ಬೆಂಗಳೂರಿನ ಸುಲ್ತಾನ್‌ಪೇಟೆ ಹಿಂದೂ ಎ.ವಿ. ಶಾಲೆಯಲ್ಲಿ  ಆರಂಭಿಕ ಶಿಕ್ಷಣ ಪಡೆದರು. ನಂತರ ಹೆಚ್ಚಿನ ಅಧ್ಯಯನಕ್ಕಾಗಿ ಸೈಂಟ್ ಜೋಸೆಫ್ ಕಾಲೇಜ್ ಸೇರಿದರು. ಕಾಲೇಜಿನಲ್ಲಿದ್ದ ದಿನಗಳಲ್ಲಿಯೇ ತಂದೆಯವರನ್ನು ಕಳೆದುಕೊಂಡದ್ದರಿಂದ ಕುಟುಂಬದ ಜವಾಬ್ದಾರಿ ಹೊರಬೇಕಾಯಿತು. ಅದರಿಂದಾಗಿ ...

READ MORE

Related Books