ವೃತ್ತಿ ರಂಗದ ಮಹತ್ತರ ನಾಟಕಗಳು

Author : ಗುಡಿಹಳ್ಳಿ ನಾಗರಾಜ

Pages 398

₹ 200.00




Year of Publication: 2003
Published by: ಕರ್ನಾಟಕ ನಾಟಕ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು
Phone: 08022237484

Synopsys

ಕರ್ನಾಟಕದ ನಾಟಕ ವೃತ್ತಿರಂಗದ ಪ್ರಮುಖ ನಾಟಕಗಳಲ್ಲಿ ಕೆಲವು ನಾಟಕಗಳ ಕುರಿತು ಈ ಕೃತಿಯು ಚಿತ್ರಣ ನೀಡಿದೆ. ಪ್ರಮುಖವಾಗಿ ಬಾಳಾಚಾರ್ಯ ಸಕ್ಕರಿ - ಶಾಂತಕವಿ ಅವರ ಉಷಾಹರಣ, ವಿದ್ವಾನ್‌ ವೆಂಕಟಾಚಾರ್‌ ಅವರ ಶ್ರೀಕೃಷ್ಣಲೀಲೆ, ಗರುಡ ಸದಾಶಿವರಾಯರ ಶ್ರೀರಾಮಪಾದುಕಾ ಪಟ್ಟಾಭಿಷೇಕ, ಹನುಮಂತರಾವ ಭೀಮರಾವ ಕಂದಗಲ್ಲ ಅವರ ರಕ್ತರಾತ್ರಿ, ಶ್ರೀಕಂಠಶಾಸ್ತ್ರಿ ಅಮರಾಯಧ ಹಿರೇಮಠ ನಲವಡಿ ಅವರ ಸಂಪುರ್ಣ ಹೇಮರೆಡ್ಡಿ ಮಲ್ಲಮ್ಮ ಅವರ ನಾಟಕಗಳು ಇಲ್ಲಿವೆ. ಡಾ. ರಾಮಕೃಷ್ಣ ಮರಾಠೆ ಮತ್ತು ಗುಡಿಹಳ್ಳಿ ನಾಗರಾಜ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ.

About the Author

ಗುಡಿಹಳ್ಳಿ ನಾಗರಾಜ

ವೃತ್ತಿ, ಹವ್ಯಾಸಿ, ಗ್ರಾಮೀಣ ಸೇರಿದಂತೆ ಸಮಗ್ರ ರಂಗಭೂಮಿ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲವರು ಗುಡಿಹಳ್ಳಿ ನಾಗರಾಜ ಅವರು. ರಂಗಭೂಮಿ ಕುರಿತ ಇವರ ಬರಹಗಳು ರಂಗ ಇತಿಹಾಸದಲ್ಲಿ ಹೊಸ ಹಾದಿ ನಿರ್ಮಿಸಿವೆ. ಅಂತಹ ಹದಿನೈದಕ್ಕೂ ಹೆಚ್ಚು ರಂಗಕೃತಿ ರಚಿಸಿದ್ದಾರೆ. ರಂಗತಂಡಗಳ ರೂವಾರಿಯಾಗಿ ರಾಜ್ಯದ ನಾಲ್ಕಾರು ರಂಗತಂಡಗಳ ತೆರೆಯ ಹಿಂದಿನ ಶಕ್ತಿಯಾಗಿ ತೊಡಗಿಸಿಕೊಂಡಿದ್ದು- ಕಡೆಗಣಿಸಲ್ಪಟ್ಟ ನೂರಾರು ಕಲಾವಿದರನ್ನು ಬೆಳಕಿಗೆ ತಂದಿದ್ದಾರೆ. ಮುಖ್ಯವಾಹಿನಿಯಲ್ಲಿ ಅವಕಾಶ ಕಲ್ಪಿಸಿದ್ದಾರೆ. ದಾವಣಗೆರೆ (ಮತ್ತೆ ಈಗ ಬಳ್ಳಾರಿ) ಜಿಲ್ಲೆ ಹರಪನಹಳ್ಳಿ, ತಾಲ್ಲೂಕು ಗುಡಿಹಳ್ಳಿಯ ನಾಗರಾಜ ಅವರು, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಎಂ.ಎ.ಇಂಗ್ಲಿಷ್ ಪದವಿ ಪಡೆದು, ಹರಪನಹಳ್ಳಿಯಲ್ಲಿ ಮೂರು ವರ್ಷ (1980-83) ...

READ MORE

Related Books