ಕೊಪ್ಪಳ ಜಿಲ್ಲಾ ರಂಗಮಾಹಿತಿ

Author : ವಿಠ್ಠಪ್ಪ ಗೋರಂಟ್ಲಿ

Pages 132

₹ 60.00




Year of Publication: 2017
Published by: ಕರ್ನಾಟಕ ನಾಟಕ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು
Phone: 08022237484

Synopsys

ಕೊಪ್ಪಳ ಜಿಲ್ಲೆಯ ರಂಗಭೂಮಿ ಚಟುವಟಿಕೆಗಳ ಕುರಿತು ಮಾಹಿತಿ ನೀಡುವ ಕೃತಿ ಇದು. ಮುಖ್ಯವಾಗಿ ಜಿಲ್ಲೆಯ ವೃತ್ತಿ ರಂಗಭೂಮಿಯ ಸಂಕ್ಷಿಪ್ತ ಇತಿಹಾಸ, ಹವ್ಯಾಸಿ ರಂಗಭೂಮಿಯ ಸಂಕ್ಷಿಪ್ತ ಇತಿಹಾಸ, ಪ್ರಸಿದ್ಧ ನಾಟಕಕಾರ, ನಿರ್ದೇಶಕರ, ನಟರ ಕುರಿತು ಅವಲೋಕನ, ಯಲಬುರ್ಗಿ ತಾಲೂಕಿನ ಕಲಾವಿದರು, ಗಂಗಾವತಿ ತಾಲೂಕಿನ ಕಲಾವಿದರು, ಜಿಲ್ಲೆಯ ರಂಗಮಂದಿರಗಳ ಕುರಿತು ಈ ಕೃತಿಯು ಸಮಗ್ರ ಮಾಹಿತಿ ನೀಡುತ್ತದೆ.

About the Author

ವಿಠ್ಠಪ್ಪ ಗೋರಂಟ್ಲಿ

ವಿಠ್ಠಪ್ಪ ಗೋರಂಟ್ಲಿ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಕಿನ್ನಾಳದ ಭಾಗ್ಯನಗರದವರು. ನಾಲ್ಕನೇ ತರಗತಿಯವರೆಗೆ ಮಾತ್ರ ಓದು. ಬಡತನದ ಮಧ್ಯೆಯೇ ನೇಕಾರಿಕೆಯ ಕಸುಬು ಹೊಂದಿದ್ದರು.  ಪಿ.ಬಿ. ಧುತ್ತರಗಿ ಅವರ ನಾಟಕ ತಾಯಿ ಕರುಳು’ ನಲ್ಲಿ ಸರಸ್ವತಿ ಎಂಬ ಸ್ತ್ರೀ ಪಾತ್ರದ ಮೂಲಕ ರಂಗ ಪ್ರವೇಶಿಸಿದರು. ಸದಾಣಂಧ ಜ್ಞಾನ ಯೋಗಾಶ್ರಮ ಸ್ಥಾಪಿಸಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.  ಕನ್ನಡ ಪತ್ರಿಕೆಗಳಿಗೆ ಪತ್ರಗಳನ್ನು ಬರೆಯುತ್ತಲೇ ಲೇಖನಗಳನ್ನು ಬರೆಯುವ ಸಾಮರ್ಥ್ಯ ಪಡೆದುಕೊಂಡ ವಿಠ್ಠಪ್ಪ ಗೋರಂಟ್ಲಿ ಅವರು, ಮುಂದೆ  ಲಂಕೇಶ್ ಪತ್ರಿಕೆಯಲ್ಲಿ ಜನಪರ ಕಾಳಜಿಯ ಲೇಖನಗಳನ್ನು ಬರೆಯುತ್ತಾ ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸುತ್ತಾ ಬಂದವರು. ರಾಜ್ಯೋತ್ಸವ ಪ್ರಶಸ್ತಿ ...

READ MORE

Related Books