ಕರೋನ ಕಾಲದ ಕಲಾ ಕೋವಿದರ ಈ-ಜಗತ್ತು

Author : ಎಚ್. ಎ. ಅನಿಲ್‌ಕುಮಾರ್

Pages 18

₹ 97.00




Year of Publication: 2020
Published by: ಟೆಕ್ ಫಿಜ್ ಇಂಕ್
Address: #60/40/2, 10ನೇ ಬಿ ಮುಖ್ಯರಸ್ತೆ 1ನೇ ಬ್ಲಾಕ್ ಜಯನಗರ ಬೆಂಗಳೂರು 560011 \n
Phone: 9902026518

Synopsys

ಲೇಖಕ ಎಚ್.ಎ. ಅನಿಲ್‌ಕುಮಾರ್ ಅವರ ಲೇಖನ ಕೃತಿ ʻಕರೋನ ಕಾಲದ ಕಲಾ ಕೋವಿದರ ಈ-ಜಗತ್ತುʼ. ಇಡೀ ಜಗತ್ತನ್ನೇ ನಿಶ್ಯಬ್ದಮಾಡಿದ ಸಾಂಕ್ರಾಮಿಕ ವ್ಯಾಧಿ ಕೊರೋನಾ ಎಲ್ಲರನ್ನೂ ಒಂದೇ ರೀತಿ ಕಾಡಿಲಿಲ್ಲ. ಅಲೆ ಅಲೆಯಾಗಿ ಅಪ್ಪಳಿಸುತ್ತಲೇ ಹಲವು ರೀತಿಯಲ್ಲಿ ಜನರನ್ನು ಕಾಡಿದೆ. ದೃಶ್ಯ ಕಲಾವಿದರಿಗೆ ಇದು ಮೂಲಭೂತವಾದ ಅಗತ್ಯದ ಸಮಸ್ಯೆಗಿಂತಲೂ ಪ್ರಾಥಮಿಕ ಪ್ರೇರಣೆಯಾಗಿ, ಗೃಹಬಂಧನದ ಏಕಾಂಗಿತನದ ಸಮಸ್ಯೆಗಿಂತಲೂ, ಏಕಾಂಗಿತನದ ವರವಾಗಿ, ಸ್ಫೂರ್ತಿಯ ಸೆಲೆಯಾಗಿಯೂ ಒದಗಿಬಂದಿದೆ. ಈ ಹಿನ್ನೆಲೆಯಲ್ಲಿ, ಭೌಗೋಳಿಕವಾಗಿ ಕಲಾವಿದರಲ್ಲಿ ಇರುವ ಏಕತ್ರ-ವೈವಿಧ್ಯತೆಯ ಕುರಿತಾಗಿ ಅನಿಲ್‌ ಕುಮಾರ್‌ ಅವರು ಬರೆದ ಲೇಖನ‌ಗಳನ್ನು ಪುಸ್ತಕದಲ್ಲಿವೆ.

About the Author

ಎಚ್. ಎ. ಅನಿಲ್‌ಕುಮಾರ್

ಎಚ್.ಎ.ಅನಿಲ್ ಕುಮಾರ್ ಕಲಾ ವಿಮರ್ಶಕರು, ಚಿತ್ರಕಲಾ ಪರಿಷತ್ತಿನ ಕಲಾ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಕಲೆಗೆ ಸಂಬಂಧಿಸಿದ ಬರಹಗಳ ಮೂಲಕ ಕನ್ನಡ ಮತ್ತು ಇಂಗ್ಲಿಷ್ ಓದುಗರಿಬ್ಬರಿಗೂ ಪರಿಚಿತರು. ಇವರಿಗೆ ದೆಹಲಿ ಕಲಾ ಶಾಲೆ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಕಲಾ ಶಿಕ್ಷಕರಿಗೆ ನೀಡುವ ಪ್ರತಿಷ್ಠಿತ ಬಿ.ಸಿ.ಸನ್ಯಾಲ್ ಪ್ರಶಸ್ತಿ ನೀಡಿ ಗೌರವಿಸಿದೆ. ಮೊದಲ ಬಾರಿಗೆ ಕರ್ನಾಟಕದ ಕಲಾ ಶಿಕ್ಷಕರೊಬ್ಬರಿಗೆ ಈ ಪ್ರಶಸ್ತಿ ದೊರೆತಿದೆ.  ಶಾಂತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯದ ಕಲಾ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಚಿತ್ರಕಲಾ ಪರಿಷತ್ತಿನ ಹಳೆಯ ವಿದ್ಯಾರ್ಥಿಯೂ ಹೌದು. ಲಂಡನ್‌ನ ರಾಯಲ್ ಕಾಲೇಜ್‌ನಲ್ಲಿ ಸಮಕಾಲೀನ ಕ್ಯುರೇಶನ್ ...

READ MORE

Related Books