ಹೊಸ ದೃಷ್ಟಿಯುಳ್ಳ ಶರಣರ ತಾತ್ವಿಕ ನೆಲೆಗಳು         

Date: 17-10-2022

Location: ಬೆಂಗಳೂರು


ಭಕ್ತ-ಮಾಹೇಶ-ಪ್ರಸಾದಿ-ಪ್ರಾಣಲಿಂಗಿ-ಶರಣ-ಐಕ್ಯ ಷಟ್‍ಸ್ಥಲಗಳಿಗೆ ಬಸವಾದಿ ಶರಣರು ಹೊಸ ಆಯಾಮ ನೀಡಿದ್ದಾರೆ. ಲಿಂಗಾಚಾರ-ಶಿವಾಚಾರ-ಸದಾಚಾರ-ಗಣಾಚಾರ-ಭೃತ್ಯಾಚಾರದಂತಹ ಪಂಚಾಚಾರಗಳ ಬಗೆಗೆ ಚಿಂತಿಸಿದ ಶರಣರಲ್ಲಿ ಧಾರ್ಮಿಕ ಸಂಘಟನೆಯ ಶಿಸ್ತನ್ನು ಕಾಣಬಹುದಾಗಿದೆ ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ತಮ್ಮ ಶರಣರ ಧಾರ್ಮಿಕ ಸಿದ್ಧಾಂತಗಳು ಅಂಕಣದಲ್ಲಿ ಶರಣರ ತಾತ್ವಿಕ ನೆಲೆಗಳ ಚರ್ಚೆಯನ್ನು ಎತ್ತಿಕೊಂಡಿದ್ದಾರೆ.

ಶರಣರ ಧಾರ್ಮಿಕ ಪರಿಕಲ್ಪನೆಗಳಾದ ಧರ್ಮ-ದೇವರು-ದೇವಾಲಯ ವಿಶಿಷ್ಟವಾಗಿರುವಂತೆ ಅವರ ತಾತ್ವಿಕ ನೆಲೆಗಳು ಹೊಸ ದೃಷ್ಟಿಯಿಂದ ಕೂಡಿವೆ. 12ನೇ ಶತಮಾನದ ಶರಣರು ಸ್ಥಾಪಿಸಿದ ಲಿಂಗಾಯತ ಧರ್ಮದಲ್ಲಿ ಅಷ್ಟಾವರಣಗಳು, ಷಟ್‍ಸ್ಥಲಗಳು ಮತ್ತು ಪಂಚಾಚಾರಗಳು ತಾತ್ವಿಕ ನಿಲವುಗಳಾಗಿವೆ. ಶರಣರಿಗಿಂತ ಪೂರ್ವದಲ್ಲಿ ಇದ್ದ ಆಗಮಗಳಲ್ಲಿ ಇವುಗಳ ಪ್ರಸ್ತಾಪವಿದೆ. ಆದರೆ ಅಲ್ಲಿದ್ದ ತತ್ವಗಳಿಗೂ ಬಸವಾದಿಶರಣರು ಸೃಷ್ಟಿಸಿದ ತತ್ವಗಳಿಗೂ ತುಂಬ ವ್ಯತ್ಯಾಸವಿದೆ. ಶಿವನ ಪರಿಕಲ್ಪನೆ ಭಾರತೀಯರಿಗೆ ತುಂಬ ಪ್ರಾಚೀನವಾದುದಾಗಿದೆ. ಆದರೆ ಶರಣರು ಒಪ್ಪಿಕೊಂಡ ಶಿವನು ಪುರಾಣದಲ್ಲಿ ತ್ರಿಶೂಲ ಹಿಡಿದ ಶಿವನಲ್ಲ, ಪ್ರತಿ ಸಾಧಕನೊಳಗಡೆಯಿರುವ ಅಂತಃಕರಣದ ಆತ್ಮನೇ ಪರಮಾತ್ಮನಾಗಿದ್ದಾನೆ, ಜೀವನೇ ಶಿವನಾಗಿದ್ದಾನೆ, ನರನೇ ಹರನಾಗಿದ್ದಾನೆ. ಲಿಂಗಾಯತ ಧರ್ಮದಲ್ಲಿ ಅಷ್ಟಾವರಣಗಳೇ ಅಂಗವಾಗಿವೆ, ಪಂಚಾಚಾರಗಳೇ ಪ್ರಾಣವಾಗಿವೆ, ಷಟ್‍ಸ್ಥಲಗಳೇ ಆತ್ಮವಾಗಿದೆ. ಆತ್ಮಸ್ವರೂಪಿಯಾದ ಷಟ್‍ಸ್ಥಲಗಳನ್ನು ಕುರಿತು ಬಸವಾದಿ ಶರಣರು ಹೊಸ ರೀತಿಯಿಂದ ಚಿಂತಿಸಿದ್ದಾರೆ. ಶರಣರಿಗಿಂತ ಪೂರ್ವದಲ್ಲಿದ್ದ ಈ ತತ್ವಗಳು ಹೊರಗಡೆ ಕಾಣ ಸಿಕೊಳ್ಳುವಂತವುಗಳಾಗಿದ್ದವು. ಆದರೆ ಬಸವಾದಿ ಶರಣರು ಲಿಂಗಾಯತ ಧರ್ಮವನ್ನು ಸ್ಥಾಪಿಸಿದ ಮೇಲೆ ಅವುಗಳು ಒಳಗಡೆ ಹೊಳೆಯತೊಡಗಿದವು. ಒಳಗಡೆ ಬೆಳಕು ನೀಡಿದ ಈ ತತ್ವಗಳನ್ನು ಕುರಿತು ಇಲ್ಲಿ ವಿವರವಾಗಿ ಚರ್ಚಿಸಲಾಗಿದೆ. ವಚನಸಾಹಿತ್ಯವು 12ನೇ ಶತಮಾನದಿಂದ 21ನೇ ಶತಮಾನದ ವರೆಗೆ ಬೆಳೆದುಬಂದಿದೆ. ಅಂದಿನಿಂದ ಇಂದಿನವರೆಗೆ ಸಾವಿರಾರು ವಚನಕಾರರಿದ್ದಾರೆ. ಆದರೆ ಲಿಂಗಾಯತ ಧರ್ಮಸ್ಥಾಪನೆಗೆ ಕಾರಣರಾದವರು 12ನೇ ಶತಮಾನದ ಬಸವಾದಿ ಶರಣರು. ಆದುದರಿಂದ ಇಲ್ಲಿ ಕೇವಲ 12ನೇ ಶತಮಾನದ ವಚನಕಾರರ ವಚನಗಳನ್ನು ಆಧರಿಸಿ ಈ ತತ್ವಗಳನ್ನು ವಿವರಿಸಲಾಗಿದೆ. ಬಸವೋತ್ತರ ಯುಗದ ತೋಂಟದ ಸಿದ್ಧಲಿಂಗ ಶಿವಯೋಗಿಗಳು, ಜೇವರ್ಗಿ ಷಣ್ಮುಖ ಶಿವಯೋಗಿಗಳು,ಗಣದಾಸಿವೀರಣ್ಣ ಈ ಮೊದಲಾದವರ ವಚನಗಳಲ್ಲಿ ಬಸವಾದಿ ಶರಣರು ಹೇಳಿರುವ ತತ್ವಗಳೇ ಇವೆ. ಅನೇಕ ಆಧುನಿಕ ವಚನಕಾರರೂ ಕೂಡ ಬಸವಾದಿ ಶರಣರಿಂದ ಪ್ರಭಾವಿತರಾಗಿದ್ದಾರೆ.

ಸ್ಪಷ್ಟತೆಗಾಗಿ ಇಲ್ಲಿ 12ನೇ ಶತಮಾನದ ಬಸವಾದಿ ಶರಣರ ವಚನಗಳನ್ನು ಮಾತ್ರ ಬಳಸಿಕೊಳ್ಳಲಾಗಿದೆ. ಬಸವೋತ್ತರ ಯುಗ ಹಾಗೂ ಆಧುನಿಕಯುಗದ ಕೆಲವು ವಚನಕಾರರಲ್ಲಿ ಈ ವಿಷಯ ಪ್ರಸ್ತಾಪವಾಗಿದ್ದರೂ ಅವುಗಳನ್ನಿಲ್ಲಿ ಉದಾಹರಿಸಿಲ್ಲ. 13ನೇ ಶತಮಾನದ ಹೊತ್ತಿಗೆ “ಸಿದ್ಧಾಂತ ಶಿಖಾಮಣಿ” ರಚನೆಯಾಗಿ ವೀರಶೈವ ಧರ್ಮವೆಂಬ ಹೆಸರು ಚಾಲನೆಗೆ ಬಂದಿರುವುದರಿಂದ ಲಿಂಗಾಯತ ಧರ್ಮದ ತಾತ್ವಿಕ ನಿಲುವುಗಳು ಹೇಗಿದ್ದವೆಂಬುದನ್ನು ತಿಳಿದುಕೊಳ್ಳುವುದು ತುಂಬ ಅಗತ್ಯವಿದೆ. ಆ ನಿಟ್ಟಿನಲ್ಲಿ ಇಲ್ಲಿಯ ಪ್ರಯತ್ನವಿದೆ. ಅಷ್ಟಾವರಣಗಳಾದ ಗುರು-ಲಿಂಗ-ಜಂಗಮ-ಪಾದೋದಕ-ಪ್ರಸಾದ-ವಿಭೂತಿ-ರುದ್ರಾಕಿ-ಮಂತ್ರ

ಇವೆಲ್ಲವುಗಳನ್ನು ಲಿಂಗಾಯತ ಧರ್ಮದಲ್ಲಿ ಒಳಗಡೆ ಕಂಡುಕೊಳ್ಳಲಾಗಿದೆ. ಅದೇ ರೀತಿ ಭಕ್ತ-ಮಾಹೇಶ-ಪ್ರಸಾದಿ-ಪ್ರಾಣಲಿಂಗಿ-ಶರಣ-ಐಕ್ಯ ಷಟ್‍ಸ್ಥಲಗಳಿಗೆ ಬಸವಾದಿ ಶರಣರು ಹೊಸ ಆಯಾಮ ನೀಡಿದ್ದಾರೆ. ಲಿಂಗಾಚಾರ-ಶಿವಾಚಾರ-ಸದಾಚಾರ-ಗಣಾಚಾರ-ಭೃತ್ಯಾಚಾರದಂತಹ ಪಂಚಾಚಾರಗಳ ಬಗೆಗೆ ಚಿಂತಿಸಿದ ಶರಣರಲ್ಲಿ ಧಾರ್ಮಿಕ ಸಂಘಟನೆಯ ಶಿಸ್ತನ್ನು ಕಾಣಬಹುದಾಗಿದೆ. ಲಿಂಗಾಯತ ಧರ್ಮದ ತಾತ್ವಿಕ ನಿಲುವುಗಳು, ಮೊದಲಿದ್ದ ಮತ್ತು ಈಗಿರುವ ತಾತ್ವಿಕ ನಿಲುವುಗಳಿಗಿಂತ ಹೇಗೆ ಭಿನ್ನವಾಗಿವೆಯೆಂಬುದನ್ನು ಇಲ್ಲಿ ಚರ್ಚಿಸಲಾಗಿದೆ.

ಅಷ್ಟಾವರಣಗಳು

ಲಿಂಗಾಯತ ಧರ್ಮದ ತತ್ವಗಳಲ್ಲಿ ಅಷ್ಟಾವರಣಗಳು ಪ್ರಮುಖವಾಗಿವೆ. ಕೇವಲ ಸಾಂಪ್ರದಾಯಿಕ ಆಚರಣೆಗಳಾಗಿದ್ದ ಈ ಧಾರ್ಮಿಕ ನೆಲೆಗಳಿಗೆ ಶರಣರು ಸಿದ್ಧಾಂತದ ರೂಪವನ್ನು ಕೊಟ್ಟರು. ಅವುಗಳನ್ನು ಧಾರ್ಮಿಕ ತತ್ವಗಳನ್ನಾಗಿ ರೂಪಿಸಿದರು. ಈಗಾಗಲೆ ಅಷ್ಟಾವರಣ-ಷಟ್‍ಸ್ಥಲ-ಪಂಚಾಚಾರಗಳ ಬಗೆಗೆ ಅನೇಕ ಲೇಖನಗಳು ಕೃತಿಗಳು ಪ್ರಕಟವಾಗಿವೆ. ಇಲ್ಲಿ ಮತ್ತೆ ಅವುಗಳನ್ನು ವಿವರಿಸುವ ಉದ್ದೇಶವಿಲ್ಲ. ತಮಗಿಂತ ಹಿಂದಿದ್ದ ಅಷ್ಟಾವರಣಗಳನ್ನು ಶರಣರು ಹೇಗೆ ವೈಜ್ಞಾನಿಕ ತಳಹದಿಯ ಮೇಲೆ ಕಟ್ಟಿದರೆಂಬುದನ್ನು ಮಾತ್ರ ಇಲ್ಲಿ ಪ್ರಸ್ತಾಪಿಸಲಾಗಿದೆ.

ಅಷ್ಟಾವರಣಗಳಲ್ಲಿ ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ, ಮಂತ್ರ ಮುಖ್ಯವಾದವುಗಳಾಗಿದೆ. ದೀಕ್ಷೆ ಕೊಡುವವ ಗುರುವಾಗಿದ್ದು, ಗುಡಿಯಲ್ಲಿದ್ದದ್ದು ಲಿಂಗವಾಗಿತ್ತು. ಧರ್ಮಪ್ರಚಾರ ಮಾಡುವವ ಜಂಗಮವಾಗಿದ್ದ, ಭಕ್ತರು ಇಂತಹ ಗುರು-ಲಿಂಗ-ಜಂಗಮರ ಪೂಜಿಸಿ ಪಾದೋದಕ ತೆಗೆದುಕೊಂಡು ಪ್ರಸಾದ ಪಡೆಯುತ್ತಿದ್ದರು. ಪೂಜೆಯ ಸಮಯದಲ್ಲಿ ವಿಭೂತಿ-ರುದ್ರಾಕ್ಷಿ-ಮಂತ್ರಗಳ ಬಳಕೆಯಾಗುತಿತ್ತು. ಹೀಗೆ ಸಾಂಪ್ರದಾಯಿಕವಾಗಿದ್ದ ಈ ಅಷ್ಟಾವರಣಗಳನ್ನು ಶರಣರು ಚಲನಶೀಲಗೊಳಿಸಿದರು. ಹೇಗೆ ಹೊರಗೆ ಕಾಣುವ ದೇವಾಲಯವನ್ನು ನಿರಾಕರಿಸಿ, ತಮ್ಮ ದೇಹವನ್ನೇ ದೇವಾಲಯವನ್ನಾಗಿ ಮಾಡಿಕೊಂಡರೋ ಅದೇ ರೀತಿ ಅಷ್ಟಾವರಣಗಳನ್ನೂ ಕೂಡ ಅವರು ದೇಹವೆಂಬ ದೇವಾಲಯದಲ್ಲಿಯೇ ಕಂಡುಕೊಂಡರು. ತಾನೇ ಗುರು-ಲಿಂಗ-ಜಂಗಮವಾಗಬೇಕು, ತಾನೇ ವಿಭೂತಿ-ರುದ್ರಾಕ್ಷಿ ಧರಿಸಬೇಕು, ತಾನೇ ಮಂತ್ರವ ಜಪಿಸಬೇಕು, ತಾನೇ ಪಾದೋದಕ-ಪ್ರಸಾದವ ಸೇವಿಸಬೇಕೆಂದು ಲಿಂಗಾಯತ ಧರ್ಮ ಹೇಳುತ್ತದೆ. ಅಷ್ಟಾವರಣಗಳು ಹೊರಗಿನವುಗಳಲ್ಲ, ಅವು ಒಳಗಿನವುಗಳು ಎಂದು ಸ್ಪಷ್ಟಪಡಿಸುತ್ತದೆ.

ಶಿವಾಗಮಗಳಲ್ಲಿ ಪ್ರಮುಖವಾದ ಜ್ಞಾನಾಗಮದಲ್ಲಿ ಅಷ್ಟಾವರಣಗಳ ಬಗೆಗೆ ಪ್ರಸ್ತಾಪಿಸಲಾಗಿದೆ. ಆಗಮಗಳು ಬಸವಾದಿ ಶರಣರಿಗಿಂತ ಹಿಂದೆಯೇ ರಚನೆಯಾಗಿವೆ. ಅಲ್ಲಿ ಬಂದಿರುವ ಅಷ್ಟಾವರಣಗಳ ಪ್ರಸ್ತಾಪ ಹೀಗಿದೆ:

“ಗುರುರ್ಲಿಂಗಂ ಜಂಗಮಶ್ಚ ತೀರ್ಥಂ ಚೈವ ಪ್ರಸಾದಕಮ್
ಭಸ್ಮರುದ್ರಾಕ್ಷ ಮಂತ್ರಾಶ್ಚೇತ್ಸಷ್ಟಾವರಣ ಸಂಜ್ಞಿತಾಃ” ||
-ಜ್ಞಾನಾಗಮ (ಕ್ರಿಮಾಪಾದ II - 2)

ಈ ಶ್ಲೋಕದಲ್ಲಿ ಗುರು, ಲಿಂಗ, ಜಂಗಮ, ತೀರ್ಥ, ಪ್ರಸಾದ, ಭಸ್ಮ, ರುದ್ರಾಕ್ಷಿ, ಮಂತ್ರ ಈ ಅಷ್ಟಾವರಣಗಳ ಬಗ್ಗೆ ಉಲ್ಲೇಖಿಸಿ ಇವು ಭವದೋಷಗಳನ್ನು ನಿವಾರಿಸುತ್ತವೆಂದು ಹೇಳುಲಾಗಿದೆ. ಇಲ್ಲಿ ಉಲ್ಲೇಖಿಸಿರುವ ಅಷ್ಟಾವರಣಗಳಿಗೂ, 12ನೇ ಶತಮಾನದಲ್ಲಿ ಶರಣರು ಹೇಳಿರುವ ಅಷ್ಟಾವರಣಗಳಿಗೂ ತುಂಬ ವ್ಯತ್ಯಾಸವಿದೆ. ಜ್ಞಾನಾಗಮದಲ್ಲಿ ಹೇಳಿರುವ ಈ ಅಷ್ಟಾವರಣಗಳು ಪೂಜೆಗೆ ಸಂಬಂಧಿಸಿದ ಭಸ್ಮ-ರುದ್ರಾಕ್ಷಿಗಳಾಗಿವೆ, ತೀರ್ಥ-ಪ್ರಸಾದಗಳಾಗಿವೆ. ಆದರೆ ಬಸವಾದಿ ಶರಣರು ಕಟ್ಟಿಕೊಂಡ ಅಷ್ಟಾವರಣಗಳು ಹೊರಗೆ ಕಾಣುವ ವಸ್ತುಗಳಾಗಿರದೆ, ಒಳಗಡೆ ಬೆಳೆದು ನಿಲ್ಲುವ ಸಾಧ್ಯತೆಗಳಾಗಿವೆ. ಬಸವಾದಿ ಶರಣರು ಸ್ಥಾಪಿಸಿದ ಲಿಂಗಾಯತ ಧರ್ಮದಲ್ಲಿ ಗುರು ಹೊರಗಿರದೆ, ಒಳಗಿನ ಅರಿವಾಗಿ ಬೆಳೆಯುತ್ತದೆ, ಲಿಂಗ ಹೊರಗಿರದೆ ಒಳಗಿನ ಆಚಾರವಾಗಿ ಬೆಳೆಯುತ್ತದೆ ಅದೇರೀತಿ ಜಂಗಮ ಹೊರಗಿರದೆ, ಒಳಗಿನ ಅನುಭಾವವಾಗಿ ಬೆಳೆದುನಿಲ್ಲುತ್ತದೆ.

ಜ್ಞಾನಾಗಮದಲ್ಲಿ ಹೇಳಿದ ಅಷ್ಟಾವರಣಗಳನ್ನೇ ನಂತರ 15 ನೇ ಶತಮಾನದಲ್ಲಿ ರಚನೆಯಾದ ಸಿದ್ಧಾಂತ ಶಿಖಾಮಣ ಯಲ್ಲಿ ಹೇಳಲಾಗಿದೆ.

“ಯಥಾಗುರೌ ಯಥಾಲಿಂಗೇ ಭಕ್ತಿಮಾನ್ ಪರಿವರ್ತತೇ
ಜಂಗಮೇ ಚ ತಥಾ ನಿತ್ಯಂ ಭಕ್ತಿಂ ಕುರ್ಯಾದ್ವಿಚಕ್ಷಣಃ
ಏಕಏವ ಶಿವಃ ಸಾಕ್ಷಾತ್ ಸರ್ವಾನುಗ್ರಹಕಾರಕಃ
ಗುರುಜಂಗಮ ಲಿಂಗತ್ಮಾವರ್ತತೇ ಭುಕ್ತಿಮುಕ್ತಿದಃ ||”
-ಸಿದ್ಧಾಂಥ ಶಿಖಾಮಣ (-Iಘಿ, 58-59)

(ಪ್ರಕಟನೆ:- ಜಗದ್ಗುರು ಶ್ರೀ ಶಿವರಾತ್ರೇಶ್ವರ ಗ್ರಂಥಮಾಲೆ, ಮೈಸೂರು, 2004)

ಹೀಗೆ ಶಿವಾಗಮಗಳಲ್ಲಿ ಹೇಳಿರುವ ಅಷ್ಟಾವರಣಗಳ ಪ್ರಸ್ತಾಪವೇ 13ನೇ ಶತಮಾನದಲ್ಲಿ ರಚನೆಯಾದ ಸಿದ್ಧಾಂತ ಶಿವಾಮಣ ಯಲ್ಲಿ ಉಲ್ಲೇಖವಾಗಿದೆ. ಇವೇ ಅಷ್ಟಾವರಣಗಳನ್ನು ನಂತರದಲ್ಲಿ ಹುಟ್ಟಿಕೊಂಡ ವೀರಶೈವ ಧರ್ಮದಲ್ಲಿ ಅಳವಡಿಸಲಾಗಿದೆ. ಶೈವ-ವೀರಶೈವ ಧರ್ಮಗಳಲ್ಲಿ ಪ್ರಸ್ತಾಪವಾಗಿರುವ ಅಷ್ಟಾವರಣಗಳಿಗೂ, ಬಸವಾದಿ ಶರಣರಿಂದ 12ನೇ ಶತಮಾನದಲ್ಲಿ ಹುಟ್ಟಿದ ಅಷ್ಟಾವರಣಗಳಿಗೂ ತುಂಬ ವ್ತತ್ಯಾಸವಿದೆ. ವೀರಶೈವಧರ್ಮದಲ್ಲಿ ಹೇಳಿರುವ ಅಷ್ಟಾವರಣಗಳಲ್ಲಿ ಹೊರಗೆ ಕಾಣುವ ದೀಕ್ಷಾಗುರು, ಮೋಕ್ಷಗುರು ಮುಖ್ಯರಾಗುತ್ತಾರೆ. ಅವರಿಗೆ ಇಷ್ಟಲಿಂಗ-ಸ್ಥಾವರಲಿಂಗ ಮುಖ್ಯವಾಗುತ್ತವೆ. ಜಾತಿಜಂಗಮ ಅಷ್ಟಾವರಣದ ಜಂಗಮನಾಗಿ ಕಾಣ ಸಿಕೊಂಡಿದ್ದಾನೆ.

ಶೈವಧರ್ಮದ ಅಷ್ಟಾವರಣಗಳಲ್ಲಿ ಹೊರಗಿನ ಪೂಜೆಗೆ ಮಹತ್ವ ನೀಡಲಾಗಿದೆ. ವಿಭೂತಿ ಧರಿಸುವುದು ರುದ್ರಾಕ್ಷಿ ಹಾಕಿಕೊಳ್ಳುವುದು, ಗುರುದೀಕ್ಷೆಪಡಿಯುವುದು, ಅನುಷ್ಠಾನಗೈಯುವುದು ಇಲ್ಲಿ ಮುಖ್ಯವಾಗುತ್ತದೆ. ದೀಕ್ಷೆಕೊಟ್ಟ ಗುರುವಿನ ಪಾದತೊಳೆದು ಕುಡಿಯುವ ತೀರ್ಥವೇ ಅವರ ಅಷ್ಟಾವರಣಗಳಲ್ಲಿ ಪಾದೋದಕವಾಗಿದೆ. ಸ್ಥಾವರಲಿಂಗಕ್ಕೆ ನೈವೇದ್ಯ ನೀಡಿ ನಂತರ ಊಟಮಾಡುವ ಅನ್ನವೇ ಪ್ರಸಾದವಾಗಿದೆ. ದೇವರ ಸ್ತುತಿ ಮಾಡುವುದೇ ಮಂತ್ರವಾಗಿದೆ. ಆದರೆ ಬಸವಾದಿ ಶರಣರು ಕಟ್ಟಿಕೊಂಡ ಅಷ್ಟಾವರಣಗಳು ಹೀಗೆ ಹೊರಗೆ ಕಾಣ ಸದೆ ಒಳಗಡೆಯೇ ನಡೆಯುವ ಸಾಧ್ಯತೆಗಳಾಗಿವೆ. 12ನೇ ಶತಮಾನದ ಬಸವಾದಿ ಶರಣರ ಪ್ರಭಾವ ಮುಂದೆ ಬಂದ ಕೆಲವು ವಚನಕಾರರ ಮೇಲಾಗಿದೆ. 16ನೇ ಶತಮಾನಾದ ಜೇವರ್ಗಿ ಷಣ್ಮಖಶಿವಯೋಗಿ 18ನೇ ಶತಮಾನದ ಕಡಕೋಳ ಮಡಿವಾಳಪ್ಪ ಮೊದಲಾದ ವಚನಕಾರರು ಶರಣರು ಹೇಳಿದ ಅಷ್ಟಾವರಣಗಳನ್ನೇ ಹೇಳಿದ್ದಾರೆ. 16-17ನೇ ಶತಮಾನದ ಕೆಲವು ವಚನಕಾರರು ವೀರಶೈವ ಧರ್ಮದಲ್ಲಿ ಕಾಣ ಸಿಕೊಂಡ ಅಷ್ಟಾವರಣಗಳ ಬಗೆಗೆ ಹೇಳಿದ್ದಾರೆ.

12ನೇ ಶತಮಾನದ ವಚನಕಾರರು ಹೇಳಿರುವ ಅಷ್ಟಾವರಣರಗಳು ವಿಶೇಷವಾಗಿವೆ. ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ, ಮಂತ್ರ. ಈ ಅಷ್ಟಾವರಣಗಳ ಬಗೆಗೆ ವಚನಕಾರರು ಹೊರ ಆವರಣಗಳ ಬಗೆಗೆ ಹೇಳುತ್ತಲೇ ಅವೆಲ್ಲವೂ ಒಳ ಆವರಣಗಳಾಗುತ್ತವೆಂದು ಸ್ಪಷ್ಟಪಡಿಸಿದ್ದಾರೆ. ಶೈವ-ವೀರಶೈವ ಧರ್ಮಗಳಲ್ಲಿ óಅಷ್ಟಾವರಣಗಳೆಂದರೆ ಹೊರಗೆ ಕಾಣುವ ಆವರಣಗಳೇ ಆಗಿವೆ. ಆದರೆ ಲಿಂಗಾಯತಧರ್ಮದಲ್ಲಿ ಅವು ಸಾಧಕನ ಪ್ರಾರಂಭಹಂತದಲ್ಲಿ ಹೊರಗೆ ಕಾಣ ಸಿ ಕೊಂಡರೂ, ಸಾಧನೆ ತೀವ್ರವಾದಂತೆ ಅವೆಲ್ಲಾ ತನ್ನೊಳಗಡೆ ಗೋಚರವಾಗುತ್ತವೆ. ಇಂತಹ ಅನೇಕ ಉದಾಹರಣೆಗಳನ್ನು ವಚನಗಳಲ್ಲಿ ಕಾಣಬಹುದಾಗಿದೆ.

(ಮುಂದುವರಿಯುವುದು)

ಈ ಅಂಕಣದ ಹಿಂದಿನ ಬರಹಗಳು:
ಮಹಿಳೆಯರ ಬದುಕಿಗೆ ಹೊಸ ಆಯಾಮ ನೀಡಿದ ವಚನ ಚಳವಳಿ
ಹೆಣ್ಣು ಮಾಯೆಯಲ್ಲ… ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ
ಹೆಣ್ಣಿನ ಸಮಾನತೆಗೆ ಮಿಡಿದ ವಚನ ಚಳವಳಿ
ಶರಣರ ಸಮಾನತೆ ಹಾದಿಯಲ್ಲಿ ಶ್ರಮಜೀವಿಗಳ ಸಮೂಹವೇ ಹಾಲಹಳ್ಳ
ಶರಣರ ಅಂತಃಕರಣದಲ್ಲಿ ಸಮ ಸಮಾಜದ ಕನಸು
ವಚನಕಾರರು ಮತ್ತು ಜಾತಿ ವಿರೋಧಿ ಹೋರಾಟ
ವರ್ಣವ್ಯವಸ್ಥೆಯ ವಿರುದ್ಧ ಶರಣರ ದನಿ
ಅಸಮಾನತೆಯ ವಿರುದ್ಧದ ಚಳವಳಿಯಾದ ಬಸವಧರ್ಮ
ಶರಣರ ದಾಸೋಹ ತತ್ವ - ಹಲವು ಆಯಾಮಗಳು
ಆಚಾರವೇ ಲಿಂಗವಾಗುವ,, ಅನುಭಾವವೇ ಜಂಗಮವಾಗುವ ನಿಜ ದಾಸೋಹ
ಶರಣರ ಪಾಲಿಗೆ ಕಡ್ಡಾಯ ಮಾತ್ರವಾಗಿರದೆ, ಕೈಲಾಸವೂ ಆಗಿದ್ದ ಕಾಯಕ
ಕಾಯಕವೇ ನಿಜ ವ್ರತವೆಂದು ನಂಬಿದ್ದ ಶರಣರು
ಶರಣರ ಕಾಲದ ಮನರಂಜನೆಯ ಕಾಯಕಗಳು
ಶರಣರ ಕಾಲದಲ್ಲಿ ಕಾಯಕಕ್ಕೆ ಬಂದ ಹೊಸ ಆಯಾಮ

ಎಲ್ಲರ ದುಡಿಮೆಗೂ ಗೌರವ ನೀಡಿದ್ದ ವಚನ ಚಳವಳಿ
ವೃತ್ತಿಪ್ರತಿಮೆಯು ಆಧ್ಯಾತ್ಮದ ಪರಿಭಾಷೆಯಾಗುವ ಪರಿ
ಶರಣರ ಕಾಯಕ ಮೀಮಾಂಸೆ: ಸಮಾನತೆಯೆಡೆಗಿನ ಅಸ್ತ್ರ
ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...