ಕೋಣನ ಮುಂದೆ ಕಿನ್ನರಿ ಮತ್ತೆರಡು ನಾಟಕ

Author : ಶಿವರಾಮ ಅಸುಂಡಿ



Year of Publication: 2018
Published by: ಬರಹ ಪಬ್ಲಿಷಿಂಗ್ ಹೌಸ್, ಬೆಂಗಳೂರು
Phone: 9448102158

Synopsys

ಮೂರು ನಾಟಕಗಳನ್ನೊಳಗೊಂಡ ಸಂಕಲನ. ಕೋಣನ ಮುಂದೆ ಕಿನ್ನರಿ, ಮಾಳಿ ಮತ್ತು ನಾಯಿಮರಿ ನಾಟಕಗಳಿವೆ. ಕೋಣನ ಮುಂದೆ ಕಿನ್ನರಿ ಪ್ರತ್ಯೇಕ ರಾಜ್ಯಕ್ಕಾಗಿ ನಡೆಯುತ್ತಿರುವ ಹೋರಾಟಗಳ ವಿಡಂಬನೆ. ಪ್ರಾಣಿಗಳ ಮುಂದಾಳತ್ವದಲ್ಲಿ ನಡೆಯುವ ಹೋರಾಟ, ಅದೇ ಕಾರಣದಿಂದಾಗಿ ಹೋರಾಟಗಾರರು ಪಡುವ ಪಡಿಪಾಟಲು, ರಾಜಕಾರಣಿಗಳು ಮತ್ತು ಮಾಧ್ಯಮಗಳ ವರ್ತನೆ ಎಲ್ಲವುಗಳ ವಿಡಂಬನೆ ಇಲ್ಲಿದೆ. ಮಾಳಿ ನಾಟಕ ಅನಿಷ್ಟ ದೇವದಾಸಿ ಪದ್ಧತಿಯ ಜೀವಂತಿಕೆಯ ಜೊತೆಗೆ ಗುಜ್ಜರ್ ಕಿ ಶಾದಿಯಂತಹ ಮದುವೆಗಳ ಮೂಲಕ ಅಕ್ರಮವಾಗಿ ಹೆಣ್ಣು ಸಾಗಾಟ ಇತ್ಯಾದಿಗಳ ಮೇಲೆ ನಾಟಕ ಬೆಳಕು ಚೆಲ್ಲಿದೆ. ನಾಯಿಮರಿ ನಾಟಕ ಸಮಕಾಲೀನ ವ್ಯವಸ್ಥೆಯನ್ನು ವಿಡಂಬಿಸುತ್ತದೆ. ಸಂಪ್ರದಾಯ, ಕಟ್ಟುಪಾಡುಗಳನ್ನು ಮೆಟ್ಟಿನಿಲ್ಲುವ ಮಾನವೀಯ ಮೌಲ್ಯಗಳ ಪ್ರತೀಕವಾಗಿದೆ ನಾಯಿಮರಿ ನಾಟಕ.

About the Author

ಶಿವರಾಮ ಅಸುಂಡಿ

ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿರುವ ಶಿವರಾಮ ಅಸುಂಡಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯ ಅಸುಂಡಿ ಗ್ರಾಮದವರು. ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆ ಆರಂಭಿಸಿ ಮಾಧ್ಯಮದೊಂದಿಗೆ ನಂಟು ಬೆಳೆಸಿಕೊಂಡರು. ಎಂ.ಎ., ಎಂ.ಫಿಲ್., ಪಿಎಚ್.ಡಿ. ಪದವಿ ಪಡೆದಿರುವ ಅವರು ಸಂಶೋಧನಾ ವಿದ್ಯಾರ್ಥಿಯಾಗಿದ್ದಾಗಲೇ ಮಾಧ್ಯಮ ಕ್ಷೇತ್ರ ಪ್ರವೇಶಿಸಿದರು. ಬಳ್ಳಾರಿಯ ’ಈ ನಮ್ಮ ಕನ್ನಡ ನಾಡು’ ದೈನಿಕದಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ .ಟಿ.ವಿ.ಗೆ ಸೇರಿ ಹಾವೇರಿಯಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದರು. 2004ರಿಂದ ಕಲಬುರಗಿಯಲ್ಲಿ ಈಟಿವಿ ಪ್ರತಿನಿಧಿಯಾಗಿದ್ದಾರೆ.  ’ದು.ನಿಂ.ಬೆಳಗಲಿ ಅವರ ದೇವದಾಸಿ’ ಕಾದಂಬರಿ ಕುರಿತು ಎಂ.ಫಿಲ್. ಪದವಿ ಮಾಡಿರುವ ಅಸುಂಡಿ ಅವರು ಡಾ.ಮಲ್ಲಿಕಾ ಘಂಟಿ ಮಾರ್ಗದರ್ಶನದಲ್ಲಿ ’ದಲಿತ ...

READ MORE

Related Books