ನಾಟಕಗಳು ಇಂದಿನವರೆಗೆ

Author : ಎಚ್.ಎಸ್. ಶಿವಪ್ರಕಾಶ್

Pages 734

₹ 400.00




Year of Publication: 2011
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560020
Phone: 080-22107722

Synopsys

ಕನ್ನಡ ರಂಗ ರಚನೆಯಲ್ಲಿ ತನ್ನದೇ ಬೆರಗನ್ನು ಮೂಡಿಸಿದ ಎಚ್.ಎಸ್‌. ಶಿವಪ್ರಕಾಶ್’ ಅವರ ಹಲವು ನಾಟಕಗಳ ಕ್ರೋಢಿಕರಣವೇ ಈ ಕೃತಿ. ನಾಟಕ ರಚನೆಯ ಹಿರಿಯ ಪ್ರತಿಭೆಗಳಾದ ಕಾರ್ನಾಡ್, ಕಂಬಾರ, ಲಂಕೇಶ್ ರವರ ನಡುವೆಯೂ ಶಿವಪ್ರಕಾಶ್ ತಮ್ಮದೇ ವೈಶಿಷ್ಟ್ಯವನ್ನು ಪಡೆದಿದ್ದಾರೆ. ಸಮಕಾಲೀನ ರಂಗಭೂಮಿಯ ಶ್ರೇಷ್ಠ ನಿರ್ದೇಶಕರುಗಳ ನಿರ್ದೇಶನದಲ್ಲಿ ಅವರ ಹಲವು ನಾಟಕಗಳು ರಂಗ ಭೂಮಿ ಪ್ರವೇಶ ಪಡೆದಿದೆ. ಇದುವರೆಗೆ ಇವರು ರಚಿಸಿದ ನಾಟಕಗಳನ್ನು ಕ್ರೂಢೀಕರಿಸಿ ಹೊತ್ತು ತಂದಿರುವ ಈ ಕೃತಿ ಅಪೂರ್ವ ರಂಗಸಂಗ್ರಹವನ್ನು ಸಾಹಿತ್ಯ ಲೋಕಕ್ಕೆ ಸಮರ್ಪಿಸುತ್ತದೆ.

About the Author

ಎಚ್.ಎಸ್. ಶಿವಪ್ರಕಾಶ್
(15 June 1954)

ಕವಿ, ಸಾಹಿತಿ, ಲೇಖಕ ಎಚ್.ಎಸ್.ಶಿವಪ್ರಕಾಶ್ ಬೆಂಗಳೂರಿನಲ್ಲಿ 15-06-1954ರಂದು ಜನಿಸಿದರು. ತಂದೆ ಪ್ರಸಿದ್ಧ ಸಾಹಿತಿಗಳು ಮತ್ತು ಕನ್ನಡ ಪರಿಷತ್ತಿನ ಅಧ್ಯಕ್ಷರು ಆಗಿದ್ದ ಶಿವಮೂರ್ತಿ ಶಾಸ್ತ್ರಿಗಳು.  ನವದೆಹಲಿಯ ಜೆ.ಎನ್.ಯು ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಈಸ್ತೆಟಿಕ್ಸ್ನಲ್ಲಿ ಪ್ರೋಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾವ್ಯ, ನಾಟಕ, ಅನುವಾದ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಶಿವಪ್ರಕಾಶರು ತಮ್ಮ ನಾಟಕ ಮಹಾಚೈತ್ರೆ ರಚನೆಯಿಂದಾಗಿ ಸಾರ್ವಜನಿಕ ವಿರೋಧ ಎದುರಿಸುವಂತಾಯಿತು. ಅವರ ಪ್ರಮುಖ ನಾಟಕಗಳು- ಮಹಾಚೈತ್ರ, ಸುಲ್ತಾನ್ ಟಿಪ್ಪು, ಮಂಟೇಸ್ವಾಮಿ, ಮಾದರಿ ಮಾದಯ್ಯ, ಮದುವೆ ಹೆಣ್ಣು. ಶಿವಪ್ರಕಾಶರ ಕವನ ಸಂಕಲನಗಳು- ಮಳೆ ಬಿದ್ದ ...

READ MORE

Related Books