ಮಾಮಾಮೋಶಿ

Author : ಕೆ.ವಿ. ಸುಬ್ಬಣ್ಣ

Pages 72

₹ 45.00




Year of Publication: 2001
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಈ ನಾಟಕವು ಫ್ರಾನ್ಸಿನ ಕಥೆಯೇ ಆಗಿದ್ದರೂ ಸಾರ್ವಕಾಲಿಕವೂ ಹೌದು. ಈ ನಾಟಕ ಪ್ರಾಯಶಃ ಇವತ್ತಿನ ಭಾರತದ ಸಂದರ್ಭಕ್ಕೆ ತದ್ವತ್ತಾಗಿ ಅನ್ವಯವಾಗಬಹುದಾದ ಒಂದು ರೂಪಕ. ಇಡೀ ಭಾರತವೇ ‘ಜಂಟಲ್‌ಮನ್’ ಆಗಲಿಕ್ಕೆ ಹೊರಟಿರುವ; ಮೂರ್ಖರಾಗುತ್ತಲೇ ಕಲಿಕೆಯ ಭ್ರಮೆಯನ್ನೂ ಬೆಳೆಸಿ ಕೊಳ್ಳುತ್ತಿರುವ; ಶ್ರೀಮಂತಿಕೆಯ ಸೋಗಿನಲ್ಲಿ ಇದ್ದದ್ದನ್ನೆಲ ಕಳೆದುಕೊಂಡು ಪಾಪರಾಗುತ್ತಿರುವ ಇವತ್ತಿನ ಸಾಮಾಜಿಕ-ಸಾಂಸ್ಕೃತಿಕ ಸಂದರ್ಭಕ್ಕೆ ‘ಮಾಮಾಮೋಶಿ’ ಒಂದು ಕನ್ನಡಿಯೆಂಬಂತಿದೆ. ಚಾರ್ಲಿ ಚಾಪ್ಲಿನ್ನನ ಚಲನಚಿತ್ರಗಳ ಹಾಗೆಯೇ ಮೋಲಿಯೇರನ ನಾಟಕಗಳೂ ಕೂಡಾ ಯಾವುದೇ ದೇಶ ಯಾವುದೇ ಕಾಲದಲ್ಲೂ ಒಂದಲ್ಲ ಒಂದು ಸ್ವಾರಸ್ಯವನ್ನು ಹುಟ್ಟಿಸಬಲ್ಲಂಥ ತಾಕತ್ತನ್ನು ಗಳಿಸಿಕೊಂಡಿವೆ.

About the Author

ಕೆ.ವಿ. ಸುಬ್ಬಣ್ಣ
(20 February 1931)

ಕೆ.ವಿ. ಸುಬ್ಬಣ್ಣ ಕನ್ನಡದ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ. ಎ. ಪದವಿ ಪಡೆದ ನಂತರ ಅವರು ಕೃಷಿಕಾಯಕ ಆರಂಭಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಅಚ್ಚರಿಪಡುವ ಹಾಗಿದೆ. ಕವಿ, ನಾಟಕಕಾರ, ಅನುವಾದಕರಾಗಿದ್ದ ಅವರು 'ಅಕ್ಷರ ಪ್ರಕಾಶನ' 'ನೀನಾಸಂ ರಂಗ ಚಟುವಟಿಕೆ'ಗಳನ್ನು ನಿರ್ವಹಿಸಿದವರು. ಭಾರತೀಯ ಸಂಸ್ಕೃತಿಗೆ ವಿಶಿಷ್ಟ ಮಾದರಿ ಎನ್ನುವ ಹಾಗೆ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಪುಟ್ಟಹಳ್ಳಿಯಲ್ಲಿ ನಡೆಸಿದ್ದು ಒಂದು ದಾಖಲೆ. ಮ್ಯಾಗ್ಸೆಸ್ಸೆ ಪ್ರಶಸ್ತಿಯಿಂದ ಹೆಗ್ಗೋಡು ಅಂತರರಾಷ್ಟ್ರೀಯ ನಕ್ಷೆಯಲ್ಲಿ ದಾಖಲಾಯಿತು. ಕೆ.ವಿ. ಸುಬ್ಬಣ್ಣ ಒಬ್ಬ ವ್ಯಕ್ತಿಯಲ್ಲ, ಮಹಾನ್ ಶಕ್ತಿ. ಅವರ ಬೆಳವಣಿಗೆ ವೈಯಕ್ತಿಕವಾದದ್ದಲ್ಲ, ಸಾಂಘಿಕವಾದದ್ದು. 'ಅಕ್ಷರ ಪ್ರಕಾಶನದ ಮೂಲಕ , 'ನೀನಾಸಂ' ಮೂಲಕ ಅನೇಕ ಪ್ರತಿಭೆಗಳನ್ನು ಅವರು ...

READ MORE

Related Books