ಸಿಂಗಾರಿತ್ಲು

Author : ಕೆ. ಕರಿಸ್ವಾಮಿ

Pages 84

₹ 40.00




Year of Publication: 2006
Published by: ಸುಮುಖ ಬುಕ್ ಹೌಸ್
Address: 174ಇ/28, 1ನೇ ಮಹಡಿ, 1ನೇ ಮುಖ್ಯರಸ್ತೆ, ವಿದ್ಯಾರಣ್ಯ ನಗರ, ಮಾಗಡಿ ರಸ್ತೆ ಟೋಲ್ ಗೇಟ್, ಬೆಂಗಳೂರು-23
Phone: 9844278792

Synopsys

ಮಧುಗಿರಿ, ತಿಪಟೂರು, ಗುಬ್ಬಿ ಸುತ್ತಮುತ್ತಲ ಕೆಳವರ್ಗದವರ ಆಡುಭಾಷೆ ’ಸಿಂಗಾರಿತ್ಲು’ ನಾಟಕಕ್ಕೆ ಮೆರಗು ಕೊಟ್ಟಿದೆ. ಹೇಲು ಮತು ಉಚ್ಚೆಯ ವಾಸನೆ ನಾಟಕದ ತುಂಬಾ ಹರಡಿಕೊಂಡು ಮೂಗಿಗೆ ತಟ್ಟುತ್ತಿರುತ್ತದೆ, ಷೇಕ್ಸ್ಪಿಯರ್‌ನ ನಾಟಕ ಮಾಕ್ಬೆತ್  ನಲ್ಲಿ ರಕ್ತದ ವಾಸನೆ ತಟ್ಟುವಂ‌ತೆ. ಇವತ್ತಿನ ರಾಜಕೀಯ ಎಷ್ಟು ಅಸಹ್ಯ ಎನ್ನುವುದಕ್ಕೆ ಇದು ಸಾಂಕೇತಿಕ ಎನ್ನಬಹುದು. ಮೊದಲರ್ಧದಲ್ಲಿ ನಾಟಕೀಯ ತಿರುವುಗಳು ಅಷ್ಟಾಗಿ ಕಂಡುಬರುವುದಿಲ್ಲವಾದರೂ, ಸಂತೆಯಲ್ಲಿ ಗೋಲಿಬಾರ್‌ನಿಂದ ಅನೂಹ್ಯ ಬೆಳವಣಿಗೆಗಳು ನಡೆಯುತ್ತವೆ. 

About the Author

ಕೆ. ಕರಿಸ್ವಾಮಿ
(15 June 1971)

.ಲೇಖಕ ಹಾಗೂ ಪತ್ರಕರ್ತ  ಕೆ. ಕರಿಸ್ವಾಮಿ ಅವರು ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗುಳಿಗೇನಹಳ್ಳಿ ಅಂಚೆ ವ್ಯಾಪ್ತಿಯ ಜವನಹಳ್ಳಿ ಗ್ರಾಮದವರು. ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಎಸ್ ಸಿ ಪದವೀಧರರು. ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂ (1999), ಪತ್ರಿಕೋದ್ಯಮದಲ್ಲಿ (1999) ಸ್ನಾತಕೋತ್ತರ ಡಿಪ್ಲೊಮಾ, ಅಳಗಪ್ಪ ವಿವಿಯಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ-2007.), ಹಾಗೂ ಹಂಪಿಯ ಕನ್ನಡ ವಿ.ವಿ.ಯಿಂದ ಡಾಕ್ಟರೇಟ್ ಆಫ್ ಲಿಟರೇಚರ್ (ಡಿ.ಲಿಟ್-2021)  ಪದವೀಧರರು. ಸದ್ಯ, ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಬೆಂಗಳೂರಿನ ಮೆರು ಇನ್ಫೋ ಸಲ್ಯೂಷನ್ಸ್,ನಲ್ಲಿ ಮುಖ್ಯ ಸಂಪಾದಕ,, ಟೈಮ್ಸ್ ಇಂಟರ್‍ನೆಟ್ ಲಿಮಿಟೆಡ್.ನಲ್ಲಿ ಉಪಸಂಪಾದಕ,  ಪ್ರಜಾಪ್ರಗತಿ ದಿನಪತ್ರಿಕೆಯ ಉಪ ಸಂಪಾದಕ, ನಂತರ, ವಿಜಯ ಕರ್ನಾಟಕ ದಿನಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿ ವಿವಿಧ ...

READ MORE

Related Books