ಪಾಂಚಾಲಿ ಮತ್ತು ಇತರ ನಾಟಕಗಳು

Author : ವಿಜಯಾ ಸುಬ್ಬರಾಜ್

Pages 248

₹ 70.00




Year of Publication: 1998
Published by: ಮಹಿಳಾ ಸಾಹಿತ್ಯಿಕ
Address: ನವನಗರ ಹುಬ್ಬಳ್ಳಿ

Synopsys

ಡಾ. ವಿಜಯಾ ಸುಬ್ಬರಾಜ್ ಅವರ ಕಥಾಸಂಕಲನ ‘ಪಾಂಚಾಲಿ ಮತ್ತು ಇತರ ನಾಟಕಗಳು’ . ಈ ಕೃತಿಯಲ್ಲಿ ಪಾಂಚಾಲಿ, ಪಾದ್ರಿಯೊಬ್ಬನ ಕತೆ, ನಗರವಧು ಸಾಲವತಿ ಎಂಬ ಮೂರು ನಾಟಕಗಳಿವೆ. ‘ಪಾಂಚಾಲಿ’ ನಾಟಕವನ್ನು ಗ್ರೀಕ್ ನಾಟಕದ ಮಾದರಿಯ ಮೇಲೆ ರಚಿಸಲು ಪ್ರಯತ್ನಿಸಿದ್ದೇನೆ ಎನ್ನುತ್ತಾರೆ ಲೇಖಕಿ ವಿಜಯಾ.

ಮಹಾಭಾರತದಲ್ಲಿ ನಡೆದ ಸಂಗತಿಗಳಿಗೆ, ಸನ್ನಿವೇಶಗಳಿಗೆ ಪ್ರಮುಖ ಸ್ತ್ರೀ ಪಾತ್ರಗಳಾದ ಪಾಂಚಾಲಿ, ಗಾಂಧಾರಿ, ಕುಂತಿಯರು ಹೇಗೆ ಪ್ರತಿಕ್ರಿಯಿಸಿರಬಹುದು ಎಂಬುದನ್ನು ಕಾಣಿಸಿರುವುದರ ಜೊತೆಗೆ ಅವರ ಅಸಹಾಯಕತೆಗೆ ಅವರೇ ಸ್ಪಂದಿಸಿರಬಹುದಾದ ರೀತಿಯನ್ನೂ ಪಾಂಚಾಲಿ ಕೀಚಕನ ದೌರ್ಜನ್ಯ, ದುರಾಕ್ರಮಣಗಳನ್ನು ಹೇಗೆ ತಾನೇ ಸ್ವತಃ ಎದುರಿಸಿರಬಹುದೆಂಬುದನ್ನು ಕಾಣಿಸುವುದೇ ಈ ನಾಟಕದ ಪ್ರಮುಖ ಆಶಯವಾಗಿದೆ.

ಮಹಾಭಾರತದ ಈ ಪ್ರಮುಖ ಸ್ತ್ರೀ ಪಾತ್ರಗಳ ಅಂತಸ್ಥ ಭಾವ ತುಮುಲಗಳನ್ನು ಅವರ ಎದೆಯಾಳದ ನಿಗೂಢ ನೋವು ನಲಿವುಗಳನ್ನೂ ಹೆಕ್ಕಿ ಹೊರಹೊಮ್ಮಿಸುವ ಪ್ರಯತ್ನವೇ ಈ ನಾಟಕವಾಗಿದೆ.

‘ಪಾದ್ರಿಯೊಬ್ಬನ ಕತೆ’ ನಾಟಕವನ್ನು ನೊಬೆಲ್ ಪ್ರಶಸ್ತಿ ಪಡೆದ ಇಟಾಲಿಯನ್ ಕಾದಂಬರಿಗಾರ್ತಿ ಗ್ರೇಸಿಯಾ ದ ಲೆದ್ದಾ ಅವರ ’ಮದರ್”ಕಾದಂಬರಿಯ ಕಥಾವಸ್ತುವನ್ನು ಆಧರಿಸಿ ರಚಿಸಲಾಗಿದೆ. ‘ನಗರವಧು ಸಾಲವತಿ’ ಹಿಂದಿ ಸಾಹಿತ್ಯ ಕ್ಷೇತ್ರದ ಮಹಾನ್ ಲೇಖಕ ಜಯಶಂಕರ್ ಪ್ರಸಾದ್ ಅವರ ಸಣ್ಣಕತೆ ಸಾಲವತಿಯನ್ನು ಆಧರಿಸಿ ಬರೆದ ಕತೆಯಾಗಿದೆ.

About the Author

ವಿಜಯಾ ಸುಬ್ಬರಾಜ್
(20 April 1947)

ವಿಜಯಾ ಸುಬ್ಬರಾಜ್ ಅವರು ಬೆಂಗಳೂರಿನಲ್ಲಿ 1947 ಏಪ್ರಿಲ್‌ 20ರಂದು ಜನಿಸಿದರು. ತಾಯಿ ಲಕ್ಷ್ಮಿ, ತಂದೆ ಸೀತಾರಾಂ. ಇಂಗ್ಲಿಷ್‌ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.  ಕನ್ನಡ ಸಾಹಿತ್ಯ ಕ್ಷೇತ್ರದ ಕೃಷಿಯಲ್ಲಿ ತೊಡಗಿಕೊಂಡಿರುವ ಇವರು ಬಿಯುಸಿಟಿಎ ನ ಉಪಾಧ್ಯಕ್ಷೆ, ಕನ್ನಡ ನುಡಿ ನಿಯತಕಾಲಿಕೆಯ ಸಂಪಾದಕಿ, ನಂಜನಗೂಡು ತಿರುಮಲಾಂಬ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.  ವಿಜಯಾ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ...

READ MORE

Related Books