ಮೂಲ ರಾಮಾಯಣ ಭಾಗ ಒಂದು

Author : ಪ್ರಸನ್ನ

Pages 1

₹ 180.00




Year of Publication: 2019
Published by: ಒಂಟಿದನಿ ಪ್ರಕಾಶನ
Address: ಕವಿ ಕಾವ್ಯ , ಹೆಗ್ಗೋಡು , ಸಾಗರ - 577417

Synopsys

ರಂಗಕರ್ಮಿ ಪ್ರಸನ್ನ ಅವರು ರಚಿಸಿರುವ ಕೃತಿ ’ಮೂಲ ರಾಮಾಯಣ ಭಾಗ ಒಂದು’. ಪ್ರಕೃತಿ ಹಾಗೂ ಪುರುಷ ತತ್ವಗಳು ಪ್ರೀತಿ ಪೂರ್ವಕ ಸಹಬಾಳ್ವೆ ನಡೆಸಬೇಕು. ಇವುಗಳ ನಡುವಿನ ಸಭ್ಯ ಬದುಕು ಎಂಬ ತಿಳುವಳಿಕೆ ರಾಮಾಯಣದ ನೆಲೆಗಟ್ಟಾಗಿದೆ.  ವಾಲ್ಮೀಕಿ ರಾಮಾಯಣದ ಮೂಲ ಆಶಯ ಹಾಗೂ ಸಮಕಾಲೀನ ಸಂದರ್ಭ ಎರಡನ್ನೂ ಗಮನದಲ್ಲಿರಿಸಿಕೊಂಡು ಬರೆದ ಕೃತಿಯಿದು. ಈ ಕೃತಿಯು  ಬಾಲಕಾಂಡ ಹಾಗೂ ಅಯೋಧ್ಯಾ ಕಾಂಡಗಳನ್ನು ಒಳಗೊಂಡಿರುವ ಮೊದಲ ಭಾಗವನ್ನು ಓದುಗರ ಮುಂದಿಟ್ಟಿದೆ. 

ಪ್ರಕೃತಿ ಹಾಗೂ ಪುರುಷ ಸಮತೋಲನವನ್ನು ಕಾಪಾಡುವುದು ಈಗಿನ ಹವಾಮಾನ ವೈಪರೀತ್ಯದ ಸನ್ನಿವೇಶದ ಅಗತ್ಯ ಎಂಬ ಅಂಶ ಈ ಕೃತಿಯಲ್ಲಿ ಮುಖ್ಯವಾಗಿದೆ. ಈ ಕೃತಿಯಲ್ಲಿ ಬರುವ ಚಿತ್ರಗಳನ್ನು ಸ್ವತಃ ಲೇಖಕರಾದ ಪ್ರಸನ್ನ ಅವರೇ ಬಿಡಿಸಿರುವುದು ವಿಶೇಷವಾಗಿದೆ. 

About the Author

ಪ್ರಸನ್ನ
(23 March 1951)

ಖ್ಯಾತ ರಂಗಕರ್ಮಿ ಪ್ರಸನ್ನ ‌ಅವರು ಜನಿಸಿದ್ದು ಮಾರ್ಚ್ 23, 1951 ರಂದು ಶಿವಮೊಗ್ಗ ಜಿಲ್ಲೆಯ ಆನವಟ್ಟಿಯಲ್ಲಿ. ತಂದೆ ಪ್ರಹ್ಲಾದಾಚಾರ್ಯ, ತಾಯಿ ಹೇಮಾವತಿ ಬಾಯಿ. ಸೆಂಟ್ರಲ್ ಕಾಲೇಜಿನಿಂದ ಎಂ.ಎಸ್ಸಿ. ಪದವಿ ಪಡೆದವರು.  ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ ಶಾಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರವಾದರು.  ಪ್ರಸನ್ನರು ದೆಹಲಿಯ ನಾಟಕ ಶಾಲೆಯಲ್ಲಿದ್ದ ದಿನಗಳಲ್ಲಿ ನಿರ್ದೇಶಿಸಿದ ನಾಟಕಗಳಲ್ಲಿ ಗಾಂಧಿ, ಉತ್ತರ ರಾಮಚರಿತಂ, ಅಗ್ನಿ ಔರ್ ಬರ್ ಕಾ, ಫ್ಯೂಜಿಯಾಮ ಪ್ರಮುಖವಾದವು. ಇಂಗ್ಲಿಷ್, ಹಿಂದಿ, ಕನ್ನಡ ಭಾಷೆಗಳ ಮೇಲೆ ಅವರು ಪ್ರಭುತ್ವ ಸಾಧಿಸಿದ್ದರು. ರಾಷ್ಟ್ರೀಯ ನಾಟಕಶಾಲೆಯಲ್ಲಿ ಕೆಲಕಾಲ ಬೋಧನೆ ಮಾಡಿ, ರಂಗಭೂಮಿ ಅಧ್ಯಯನಕ್ಕಾಗಿ ...

READ MORE

Related Books