
ಭಾರತದ ಸಾಮಾಜಿಕ ವ್ಯವಸ್ಥೆ ಇಂದಿಗೂ ಮಹಿಳೆಯನ್ನು ಎರಡನೆಯ ದರ್ಜೆಯ ಪ್ರಜೆಯನ್ನಾಗಿ ಕಾಣುತ್ತಿದೆ. ಕೌಟುಂಬಿಕ ಹಿನ್ನಲೆ, ಸುತ್ತಲಿನ ಪರಿಸರ ಮಹಿಳೆಯ ಬದುಕನ್ನು ರೂಪಿಸುತ್ತವೆ. ದುಃಖ, ದುಗುಡ, ಆತಂಕಗಳ ಮಧ್ಯೆ ನೆಮ್ಮದಿಯ ಬದುಕಿಗಾಗಿ ಬಹುತೇಕ ಮಹಿಳೆಯರು ಪರಿತಪಿಸುತ್ತಾರೆ.
ಮಹಿಳೆಯ ಸೂಕ್ಷ್ಮ ಮನಃಸ್ಥಿತಿಯ ಬಗ್ಗೆ, ಸಮಾಜ ಹೊರಿಸಿರುವ ಮಿಥ್ಯಾರೋಪಗಳ ಕುರಿತು ಅವಲೋಕನವನ್ನು 'ಮಹಿಳೆಯ ಮನೋಲೋಕ' ಕೃತಿಯಲ್ಲಿ ಅತ್ಯಂತ ಸಮರ್ಪಕವಾಗಿ ವಿವರಿಸಲಾಗಿದೆ. ಆಕೆಯಲ್ಲಿ ಕಂಡು ಬರುವ ಮಾನಸಿಕ ತೊಂದರೆಗಳು ಯಾವ ರೀತಿಯವು ಮತ್ತು ಅವುಗಳ ಪರಿಹಾರಕ್ಕೆ ಚಿಕಿತ್ಸೆ, ಆಪ್ತ ಸಲಹೆಯ ಬಗ್ಗೆಡಾ. ಸಿ.ಆರ್. ಚಂದ್ರಶೇಖರ ಅವರು ಮನೋವೈಜ್ಞಾನಿಕವಾಗಿ ವಿಶ್ಲೇಷಿಸಿದ್ದಾರೆ. ಈ ಕೃತಿಯನ್ನು ಲೇಖಕಿ ವಸುಂಧರಾ ಭೂಪತಿ ಅವರು ಸಂಪಾದಿಸಿದ್ದಾರೆ
©2025 Book Brahma Private Limited.