ಮನಸ್ಸಿನ ಮ್ಯಾಜಿಕ್

Author : ಅಡ್ಡೂರು ಕೃಷ್ಣರಾವ್

Pages 120

₹ 50.00




Year of Publication: 2015
Published by: ನವಕರ್ನಾಟಕ ಪ್ರಕಾಶನ
Address: # 11, ಮನಸ್ಸಿನ ಮ್ಯಾಜಿಕ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರಪಾರ್ಕ್ ಪೂರ್ವ, ಬೆಂಗಳೂರು
Phone: 08022161900

Synopsys

ಅಡ್ಡೂರು ಕೃಷ್ಣರಾವ್ ಅವರ ಕೃತಿ-ಮನಸ್ಸಿನ ಮ್ಯಾಜಿಕ್. ಮನಸ್ಸು ವಿಶ್ವದಲ್ಲಿ ಕಾಣಬರುವ ಅದ್ಭುತಗಳಲ್ಲಿ ಅದ್ಭುತ. ಕಲ್ಪನೆ, ಕನಸು, ವಿಚಾರ, ಭಾವ, ವರ್ತನೆ ಹೀಗೆ ಎಲ್ಲವನ್ನೂ ಈ ಮನಸ್ಸು ರೂಪು ನೀಡುತ್ತದೆ. ಸಾಹಿತ್ಯ ರಚನೆಗೂ ಮನಸ್ಸೇ ಕಾರಣ. ಸಂಕಲ್ಪಗಳ ಈಡೇರಿಕೆಗೂ, ಹತಾಶೆ-ನಿರಾಶೆಗಳಿಗೂ ಸುಖ-ದುಃಖ ಹೀಗೆ ಮನಸ್ಸು ವ್ಯಕ್ತಿಯೊಬ್ಬರ ಶಕ್ತಿ ಕೇಂದ್ರ. ಮನಸ್ಸಿನ ಅಪಾರ ಸಾಧ್ಯತೆಗಳಗಳ -ಸ್ವರೂಪಗಳ ಕುರಿತು ಚಿತ್ರಣ ನೀಡುವ ಈ ಕೃತಿಯು ಹತ್ತು ಹಲವು ಕಥೆ-ಉಪಕಥೆಗಳನ್ನು, ಉದಾಹರಣೆಗಳ ಮೂಲಕ ಮನಸ್ಸಿನ ಅದ್ಭುತವನ್ನು ಕಟ್ಟಿಕೊಡುತ್ತದೆ. ನವಕರ್ನಾಟಕ ಪ್ರಕಾಶನದ ವ್ಯಕ್ತಿ ವಿಕಾಸ ಮಾಲೆಯಡಿ ಪ್ರಕಟಿತ ಈ ಕೃತಿಯನ್ನು ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ್ ಸಂಪಾದಿಸಿದ್ದಾರೆ. 

About the Author

ಅಡ್ಡೂರು ಕೃಷ್ಣರಾವ್

ಲೇಖಕ ಅಡ್ಡೂರು ಕೃಷ್ಣರಾವ್ ಅವರು ಸದ್ಯ ಮಂಗಳೂರಿನಲ್ಲಿ ವಾಸವಾಗಿದ್ದಾರೆ. ಕೃಷಿ ಸಂಪದದ ಸಂಪಾದಕರು. ಸಾವಯವ ಕೃಷಿ ಬಳಗದ ಅಧ್ಯಕ್ಷರು. ದಿನಪತ್ರಿಕೆಯ ಅಂಕಣಕಾರರು. ಕೃಷಿ ತರಬೇತುದಾರರು. ಬ್ಯಾಂಕ್ ವ್ಯವಹಾರ ತಜ್ಞರು. ಗ್ರಾಹಕರ ವೇದಿಕೆ ಸಂಚಾಲಕರು.  ಕೃತಿಗಳು: ಮನರಂಜನೆಗಾಗಿ ಬೀಜಗಣಿತ (ಅನುವಾದಿತ ), ಎಂಬತ್ತರ ಕೊಯ್ಲಿನ ಕಾಳುಗಳು : ಅಡ್ಡೂರು ಶಿವಶಂಕರ ರಾಯರ ಬಾಳಸಂಜೆಯ ಹಿನ್ನೋಟ , ಹಸುರು ಹೆಜ್ಜೆ (ಅಂಕಣ ಬರಹ),  ಮ್ಯಾನುವಲ್ ಓನ್ ಬ್ಯಾಂಕಿಂಗ್  (ಸಂಪಾದಿತ ಕೃತಿ), ಇಂಗ್ಲಿಷ್ ಮೇಡ್ ಈಸೀ  (ಸಂಪಾದಿತ ಕೃತಿ), ಮೋಜಿನ ಗಣಿತ (ಮೂಲ:"ಫಿಗರ್ಸ್ ಫಾರ್ ಫನ್" ಇಂಗ್ಲಿಷ್),  ಜನಜಾಗೃತಿಯ ಸಾಧನ: ಮಾಹಿತಿ ಮಂಥನ,  ಬಳಕೆದಾರರ ಸಂಗಾತಿ,  ಟೂರಿಸ್ಟ್ ಗೈಡ್ - ದಕ್ಷಿಣ ಕನ್ನಡ, ಉಡುಪಿ, ಕೊಡಗು ಕಾಸರಗೋಡು ಜಿಲ್ಲೆಗಳು ...

READ MORE

Reviews

(ಹೊಸತು, ಆಗಸ್ಟ್ 2014, ಪುಸ್ತಕದ ಪರಿಚಯ)

ವಜ್ರದಷ್ಟು ಕಠೋರವೂ ಹೂವಿನಷ್ಟು ಕೋಮಲವೂ ಆಗಬಲ್ಲುದು ಯಾವುದು ? ಮನಸ್ಸು ! ಹೌದು, ನಮ್ಮ ದೇಹದೊಂದಿಗೆ ನಿಕಟವಾಗಿದ್ದು ಭೌತಿಕ ಕಣ್ಣುಗಳಿಗೆ ಅಗೋಚರವಾಗಿ ಅನುಭವಕ್ಕೆ ದಕ್ಕಬಲ್ಲ ಒಂದು ಸೋಜಿಗ. ನಮ್ಮ ಒಳಿತು- ಕೆಡುಕುಗಳನ್ನು ನಿರ್ಧರಿಸುವಲ್ಲಿ ಮನಸ್ಸಿನ ಪಾತ್ರ ಹಿರಿದು. ಬಲು ಸೂಕ್ಷ್ಮವೂ ಹೌದು, ಅಷ್ಟೇ ಚಂಚಲ ಪ್ರವೃತ್ತಿಯದೂ ಹೌದು. ಅದನ್ನು ಅಂಕೆಯಲ್ಲಿಟ್ಟು ಹುಚ್ಚು ಹೊಳೆಯಂತೆ ಹರಿಯಬಿಡದೆ ಏಕಾಗ ಮನಸ್ಸಿನಿಂದ ಸರಿ ನಿರ್ಧಾರ ತೆಗೆದುಕೊಂಡರೆ ನಮ್ಮ ವ್ಯಕ್ತಿತ್ವ ವಿಕಸನ ಖಂಡಿತ ಸಾಧ್ಯ. ನಿರ್ಧಾರಗಳು ಕೇವಲ ನಮ್ಮ ಸ್ವಾರ್ಥಕ್ಕೆ ಮಾತ್ರವಾಗಿರದೆ, ಏಕಪಕ್ಷೀಯವೂ ಆಗಿರಬಾರದು. ಇದು ಅಂದುಕೊಂಡಷ್ಟು ಸುಲಭವೇನೂ ಅಲ್ಲ, ಆದರೆ ಅತಿ ಕಠಿಣ ವಿಚಾರವೂ ಅಲ್ಲ. ದೃಢ ಸಂಕಲ್ಪ, ದೃಢ ಮನಸ್ಸು ಬೇಕಾಗಿರುವುದು ಇಂಥ ಸಂದರ್ಭದಲ್ಲೇ. ಚಂಚಲ ಮನಸ್ಸಿನ ವಿವಿಧ ಮಜಲುಗಳನ್ನು ಪರಿಚಯಿಸುತ್ತ ಇಂದಿನ ದಿನಗಳಲ್ಲಿ ಎದುರಿಸಬೇಕಾದ ಹಲವು ಹತ್ತು ನಡೆಗಳನ್ನು ಯಶಸ್ವಿಯಾಗಿ ನಿಭಾಯಿಸುವ ಬಗ್ಗೆ ಕಿವಿಮಾತುಗಳಿವೆ. ಪ್ರಪಂಚದ ಎಷ್ಟೊಂದು ಮಹನೀಯರು ತಮ್ಮ ವ್ಯಕ್ತಿತ್ವ ಬೆಳೆಸಿಕೊಳ್ಳಲು ಇಟ್ಟ ಹೆಜ್ಜೆಗಳನ್ನು ಉದಾಹರಿಸುತ್ತ ಲೇಖಕ ಶ್ರೀ ಅಣ್ಣೂರು ಕೃಷ್ಣ ರಾವ್ ಇಲ್ಲಿ ಮನಸ್ಸಿನ ಮಹತ್ವವನ್ನು ನಮಗೆ ತಿಳಿಸಿಕೊಟ್ಟಿದ್ದಾರೆ. ಮನಸ್ಸಿಟ್ಟು ಓದಿ. ಮನನ ಮಾಡಿಕೊಳ್ಳಿ. ಅದರಂತೆಯೇ ನಡೆಯಿರಿ,

 

Related Books