ಕನಸಿನ ಕತೆ

Author : ಎಂ. ಬಸವಣ್ಣ

Pages 96

₹ 60.00




Year of Publication: 2012
Published by: ಅಭಿನವ ಪ್ರಕಾಶನ
Address: 17182,ಮಾರೇನಹಳ್ಳಿ, ವಿಜಯನಗರ, ಬೆಂಗಳೂರು
Phone: 9448804905

Synopsys

ಮನೋವಿಜ್ಞಾನಿ, ಲೇಖಕ ಎಂ. ಬಸವಣ್ಣ ಅವರ ವೈಜ್ಞಾನಿಕ ಕೃತಿ ‘ಕನಸಿನ ಕತೆ’. ಜನರಲ್ಲಿ ಕನಸುಗಳನ್ನು ಕುರಿತಾದ ಆಸಕ್ತಿ ಬಹಳ ಪುರಾತನವಾದುದು. ಸುಮಾರು ಏಳೆಂಟು ಸಾವಿರ ವರ್ಷಗಳಿಂದಲೂ ಜನರು ಕನಸುಗಳನ್ನು ಕುರಿತು ಆಳವಾಗಿ ಆಲೋಚಿಸುತ್ತಿದ್ದಾರೆ. ಆದರೆ, ಕನಸಿನ ವೈಜ್ಞಾನಿಕ ಅಧ್ಯಯನ ಆರಂಭವಾದದ್ದು 1900ರಲ್ಲಿ, ಸಿಗ್ಲಂಡ್ ಫ್ರಾಯ್ ರಚಿಸಿದ ಒಂದು ಗ್ರಂಥದೊಡನೆ.

ಈ ಗ್ರಂಥವನ್ನು ವಿಜ್ಞಾನದ ಇತಿಹಾಸದಲ್ಲಿ ಒಂದು ಮೈಲಿಗಲ್ಲೆಂದು ಪರಿಗಣಿಸಲಾಗಿದೆ. ವಿಚಾರವಂತರು ಓದಲೇಬೇಕಾದ ಪುಸ್ತಕಗಳಲ್ಲಿ ಇದೂ ಒಂದು. ಅದಾದ 50 ವರ್ಷಗಳ ಅನಂತರ ಜೀವ ವಿಜ್ಞಾನಿಗಳ ಗಮನ ಕನಸುಗಳೆಡೆಗೆ ಹರಿದು ಅವರ ಪರಿಶ್ರಮದಿಂದಾಗಿ ಕನಸಿನ ಬಗ್ಗೆ ನಮ್ಮ ತಿಳಿವಳಿಕೆ ಹೆಚ್ಚಾಗಿ ಬೆಳೆಯಿತು.

ಅಂದಿನವರೆಗೆ ಕನಸುಗಳನ್ನು ಮನಸಿನ ಸೃಷ್ಟಿ ಎಂದೇ ಪರಿಗಣಿಸಲಾಗಿತ್ತು. ಇವರ ಸಂಶೋಧನೆಗಳ ಪರಿಣಾಮವಾಗಿ ಕನಸುಗಳಗಿರಬಹುದಾದ ದೈಹಿಕ ಹಿನ್ನೆಲೆಯನ್ನು ಗಮನಿಸುವಂತಾಯಿತು. ಇಷ್ಟೆಲ್ಲಾ ಆದರೂ ಕನಸಿನ ಪೂರ್ಣ ಪರಿಚಯ ನಮಗಿನ್ನೂ ಅಸ್ಪಷ್ಟವಾಗಿರುವುದು ಒಂದು ವಿಪರ್ಯಾಸ. ಕನಸುಗಳನ್ನು ಕುರಿತಾದ ಮೂಢನಂಬಿಕೆಗಳು, ಕನಸುಗಳ ಅಧ್ಯಯನ ನಡೆದುಬಂದ ದಾರಿ, ಕನಸಿನ ಸಿದ್ದಾಂತಗಳು, ಅವುಗಳ ವೈವಿಧ್ಯತೆ, ಮತ್ತು ಕನಸುಗಳ ಉಪಯೋಗ ಮುಂತಾದುವನ್ನು ಇಲ್ಲಿ ಸಂಕ್ಷಿಪ್ತವಾಗಿ ತಿಳಿಸಲು ಪ್ರಯತ್ನಿಸಿಲಾಗಿದೆ.

 

About the Author

ಎಂ. ಬಸವಣ್ಣ

ಎಂ.ಬಸವಣ್ಣ- ಹುಟ್ಟಿದ್ದು 1933, ಚಾಮರಾಜನಗರ ಜಿಲ್ಲೆಯ ಮಂಗಲ ಗ್ರಾಮದಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರಾಯೋಗಿಕ ಮನಃಶಾಸ್ತ್ರದಲ್ಲಿ 1955ರಲ್ಲಿ ಎಂ.ಎ.ಪದವಿ. ಕ್ಲಿನಿಕಲ್ ಮನಃಶಾಸ್ತ್ರದಲ್ಲಿ ನಿಮ್ಯಾನ್ಸ್ ನಿಂದ 1958ರಲ್ಲಿ ಡಿಪ್ಲೊಮಾ. 1970ರಲ್ಲಿ ತಿರುಪತಿಯ ವೆಂಕಟೇಶ್ವರ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ. ಇದೇ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಸೇರಿ 1993ರಲ್ಲಿ ಪ್ರಾಧ್ಯಾಪಕರಾಗಿ ವಿಶ್ರಾಂತರಾದರು. ತಮ್ಮ ಸಂಶೋಧನಾ ಲೇಖನಗಳನ್ನು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟಿಸಿದರು. ಅಧ್ಯಾಪಕ ವೃತ್ತಿಯನ್ನು ಪ್ರೀತಿಸುವ ಬಸವಣ್ಣನವರು ವ್ಯಕ್ತಿತ್ವ ವಿಕಾಸದ ಬಗ್ಗೆ ವಿಶೇಷ ಆಸಕ್ತಿಯನ್ನು ವಹಿಸಿ, ದೇಶದ ಉದ್ದಗಲಕ್ಕೂ ಉಪನ್ಯಾಸಗಳನ್ನು ಕಮ್ಮಟಗಳನ್ನು ನಡೆಸಿದ್ದಾರೆ. ಗುಲ್ಬರ್ಗಾ, ಕರ್ನಾಟಕ ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ...

READ MORE

Related Books